ಜಿಎಸ್ಟಿ ಇಳಿಕೆ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು
* ಸಿ ಟಿ ರವಿ ಸೇರಿದಂತೆ ಕಾರ್ಯಕರ್ತರಿಂದ ಸಿಹಿಹಂಚಿ ಸಂಭ್ರಮಾಚರಣೆ
* ಜನತೆಯ ತೆರಿಗೆ ಹೊರೆ ಇಳಿಸಿದ ಪ್ರಧಾನಿಗೆ ಧನ್ಯವಾದ – ಮಣಿಕಂಠನ್ ಕಂದಸ್ವಾಮಿ
NAMMMUR EXPRESS NEWS
ಚಿಕ್ಕಮಗಳೂರು: ಜಿಎಸ್ಟಿ ಇಳಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಬೆಂಬಲಿಸಿ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ರಾಜ್ಯದ ಕಾಂಗ್ರೆಸ್ ಸರ್ಕಾರ ತೆರಿಗೆ ಹೊರೆ ಹೆಚ್ಚಿಸಿ ಪಾಪ ಕಟ್ಟಿಕೊಂಡಿದ್ದು, ಕೇಂದ್ರ ಸರ್ಕಾರ ಜಿಎಸ್ಟಿ ಇಳಿಕೆ ಮೂಲಕ ಪುಣ್ಯ ಕಟ್ಟಿಕೊಳ್ಳುತ್ತಿದೆ,’ಜನನದಿಂದ ಮರಣದ ತನಕ ರಾಜ್ಯದಲ್ಲಿ ತೆರಿಗೆ ಇದೆ. ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದರೆ ಹೆಚ್ಚು ದರವಿದೆ,ಪ್ರಧಾನಿ ನರೇಂದ್ರ ಮೋದಿ ಅವರ ಹಾದಿಯಲ್ಲಿ ಕನಿಷ್ಠ ಎರಡು ಹೆಜ್ಜೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಟ್ಟರೆ ರಾಜ್ಯ ಜನರಿಗೆ ಒಳಿತಾಗಲಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಯೋಚಿಸಬೇಕು ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ದೇವರಾಜ್ಶೆಟ್ಟಿ ಮಾತನಾಡಿ, ‘ದೇಶದ ಜನರಿಗೆ ಹಬ್ಬದ ವಾತಾವರಣವನ್ನು ನರೇಂದ್ರ ಮೋದಿ ಸರ್ಕಾರ ಮಾಡಿಕೊಟ್ಟಿದೆ’ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕನಕರಾಜ್, ನಗರ ಘಟಕ ಅಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಮುಖಂಡರಾದ ಕೋಟೆ ರಂಗನಾಥ್, ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್ಕುಮಾರ್, ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್, ನಗರಸಭೆ ಸದಸ್ಯರಾದ ಕವಿತಾ ಶೇಖರ್, ಮಧುಕುಮಾರ್, ಮುಖಂಡರುಗಳದ ಪುಟ್ಟಸ್ವಾಮಿ, ಎಚ್.ಕೆ. ಕೇಶವಮೂರ್ತಿ, ಕೌಶಿಕ್, ದಿನೇಶ್, ಬೆನಡಿಕ್ಟ್ ಜೇಮ್ಸ್, ಪ್ರದೀಪ್ ಹಾಜರಿದ್ದರು.
* ಜನತೆಯ ತೆರಿಗೆ ಹೊರೆ ಇಳಿಸಿದ ಪ್ರಧಾನಿಗೆ ಧನ್ಯವಾದಗಳು.
ನವರಾತ್ರಿಗೆ ದೇಶದ ಜನತೆಗೆ ಎರಡು ಮಾದರಿಯ ಜಿಎಸ್ ಟಿ ಮೂಲಕ ಉಡುಗೊರೆ ನೀಡಿದ ಮೋದಿಗೆ ಹಾಗೂ ನಿರ್ಮಲ ಸೀತರಾಮನ್ ರವರಿಗೆ ಧನ್ಯವಾದಗಳು ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ತಿಳಿಸಿದರು .
ಅವಕಾಶವಾದಗೆಲ್ಲ ದೇಶ ಜನತೆಗೆ ಅನುಕೂಲಕರ ಅಂಶಗಳನ್ನು ಒದಗಿಸುವ ಮೋದಿಯವರ ಚಿಂತನೆಯು ದೇಶದ ಮತ್ತು ದೇಶವಾಸಿಗಳ ಅಭಿವೃದ್ಧಿಯನ್ನು ಪ್ರಗತಿಯತ್ತ ಕೊಂಡೊಯ್ಯತ್ತಿದೆ. ಎರಡು ಮಾದರಿ ಜಿ ಎಸ್ ಟಿ ಇಂದಾಗಿ ದಿನನಿತ್ಯದ ವಸ್ತುಗಳಾದ ತುಪ್ಪ, ಪನೀರ್, ಬೆಣ್ಣೆ, ನಮ್ಕೀನ್, ಜಾಮ್, ಕೆಚಪ್, ಡ್ರೈ ಫ್ರೂಟ್ಸ್, ಕಾಫಿ ಜೊತೆಗೆ ಐಸ್ ಕ್ರೀಮ್ ನಂತಹ ವಸ್ತುಗಳು ಕಡಿಮೆ ತೆರಿಗೆಗೆ ಒಳಪಡಲಿವೆ. ಈ ಮೊದಲು ಇವುಗಳ ಮೇಲೆ 12% ರಿಂದ 18% ಜಿಎಸ್ಟಿ ಇತ್ತು, ಈಗ ಅದನ್ನು 5% ಪಟ್ಟಿಗೆ ಸೇರಿಸಲಾಗಿದೆ .
ಆರೋಗ್ಯ ಕ್ಷೇತ್ರದಲ್ಲೂ ಜಿಎಸ್ಟಿ ಕಡಿತವಾಗಲಿದ್ದು, ಹೆಲ್ತ್ ಇನ್ಶ್ಯುರೆನ್ಸ್ ಹಾಗೂ 33 ಜೀವರಕ್ಷಕ ಮೆಡಿಸಿನ್ಗಳ ದರವೂ ಕಡಿಮೆ ಆಗಲಿದೆ. ಇದರಿಂದಾಗಿ ಜನಸಾಮಾನ್ಯರು ಕೂಡ ಹೆಲ್ತ್ ಇನ್ಶುರೆನ್ಸ್ ಗಳನ್ನು ಹೊಂದಲು ಸಹಾಯವಾಗುತ್ತದೆ. ಜೊತೆಗೆ ಗ್ಲುಕೋಮೀಟರ್ಗಳು, ರೋಗನಿರ್ಣಯ ಕಿಟ್ಗಳು ಮತ್ತು ಹೆಚ್ಚಿನ ಔಷಧಿಗಳ ಮೇಲೆ ಕೇವಲ 5% ಜಿಎಸ್ಟಿ ವಿಧಿಸಲಾಗುವುದು. ಈ ಹಿಂದೆ ಈ ವಸ್ತುಗಳು 12% ಅಥವಾ 18% ಸ್ಲ್ಯಾಬ್ನಲ್ಲಿದ್ದವು ಇದು ದೇಶದ ಜನತೆಗೆ ಆರೋಗ್ಯ ಚೇತರಿಕೆಗೆ ಹೆಚ್ಚು ಸಹಾಯವಾಗಲಿದೆ .
ಒಟ್ಟಾರೆ ಜನತೆಯು ಅಗತ್ಯ ವಸ್ತುಗಳ ಖರೀದಿ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಪ್ರಯತ್ನಕ್ಕೆ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರಿಗೆ ವಿಶೇಷ ಧನ್ಯವಾದಗಳು ಎಂದರು.








