ಮೂಡುಬಿದಿರೆ: ಲವ್ಲೀ ಪ್ರೊಫೆಷನಲ್ ವಿ. ವಿ ಜಲಂಧರ್ ಪಂಜಾಬ್ ನಲ್ಲಿ ನಡೆದ ಅಖಿಲ ಭಾರತ ಅಂತರ್ ವಿ. ವಿ ವೇಟ್ ಲಿಫ್ಟಿಂಗ್ ಚಾಂಪಿಯಶಿಪ್ ನಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಪ್ರತಿನಿಧಿಸಿದ್ದ ಮಂಗಳೂರು ವಿ. ವಿ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. 32 ವರ್ಷಗಳ ಬಳಿಕ ರನ್ನರ್ಸ್ ಅಪ್ ಪ್ರಶಸ್ತಿ ಪಡೆದು ಮಂಗಳೂರು ವಿವಿ ಪ್ರಶಂಸೆಗೆ ಪಾತ್ರವಾಗಿದೆ. ವಿವಿ ಮಂಗಳೂರು ವಿವಿಯ ಒಟ್ಟು 9 ವಿದ್ಯಾರ್ಥಿಗಳ ತಂಡದಲ್ಲಿ ಆಳ್ವಾಸ್ ಸಂಸ್ಥೆಯ 6 ವಿದ್ಯಾಥಿಗಳು ಭಾಗಿಯಾಗಿದ್ದರು . ಆಳ್ವಾಸ್ ಕಾಲೇಜಿನ ಪ್ರಶಾಂತ್‌ಗೆ ಬೆಳ್ಳಿ, ಪ್ರತ್ಯುಶ್‌ಗೆ ನಾಲ್ಕನೇ ಸ್ಥಾನ, ಜೋಸುವ ರಾಜಕುಮಾರ್‌ಗೆ ನಾಲ್ಕನೇ ಸ್ಥಾನ ಪಡೆದರು. ಮಂಗಳೂರು ವಿವಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯಲು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳ ಕೊಡುಗೆ ಪ್ರಮುಖವಾಗಿದೆ . ಡಿಸೆಂಬರ್‌ನಲ್ಲಿ ಆಚಾರ್ಯ ನಾಗಾರ್ಜುನ ಯೂನಿವರ್ಸಿಟಿ ಗುಂಟೂರ್‌ನಲ್ಲಿ ನಡೆದ ದಕ್ಷಿಣ ಭಾರತ ಅಂತರ್ ವಿ. ವಿ ಚಾಂಪಿಯಶಿಪ್‌ನಲ್ಲಿ 3 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿತ್ತು.…
Author: Nammur Express Karkala
ಕಾರ್ಕಳ: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ತುಡರ್ ಕ್ಲಬ್ ವತಿಯಿಂದ ಜ.18 ರಂದು ‘ತುಡರ್ ಸಿರಿ’ನ್ನು ಆಯೋಜಿಸಲಾಗಿತ್ತು. ಉದ್ಘಾಟನಾ ಸಮಾರಂಭಕ್ಕೆ ಇತಿಹಾಸ ತಜ್ಞ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದ್ಕ್ ವಸ್ತು ಸಂಗ್ರಹಾಲಯದ ಸ್ಥಾಪಕ ಡಾ.ತುಕಾರಾಮ್ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ತಮ್ಮ ಭಾಷಣದಲ್ಲಿ ಅವರು ಅತ್ಯಂತ ಹಳೆಯ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿನ ಮಹತ್ವವನ್ನು ವಿವರಿಸಿದರು ಮತ್ತು ವಿಶೇಷವಾಗಿ ಯುವಕರಲ್ಲಿ ಹೆಚ್ಚಿನ ಮಾನ್ಯತೆ ಮತ್ತು ಪ್ರಚಾರದ ಅಗತ್ಯವನ್ನು ಒತ್ತಿ ಹೇಳಿದರು. ಪ್ರಪಂಚದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು ತುಳು ಭಾಷೆಯ ಬಗ್ಗೆ ಸಂಶೋಧನೆ ನಡೆಸುತ್ತಿವೆ. ಇದು ಭಾಷೆಯ ಬಲವಾದ ಅಡಿಪಾಯ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. ಉಪಪ್ರಾಂಶುಪಾಲ ಮತ್ತು ಡೀನ್ (ಅಕಾಡೆಮಿಕ್ಸ್) ಡಾ.ಐ.ರಮೇಶ್ ಮಿತ್ತಂತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮವು ಬೋಲ್ಪು ನಿಯತಕಾಲಿಕ, ಸಂಪುಟ ೨ ರ ಬಿಡುಗಡೆಗೂ ಸಾಕ್ಷಿಯಾಯಿತು. ಔಪಚಾರಿಕ ಪ್ರಕ್ರಿಯೆಗಳ ನಂತರ, ವಿವಿಧ ಸ್ಪರ್ಧೆಯ ವಿಜೇತರನ್ನು…