Author: Nammur Express Karkala

ಬಿ.ಶ್ರೀನಿವಾಸ್ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಮಹತ್ವದ ಹುದ್ದೆ – ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಕಾರ್ಯದರ್ಶಿಗಳಾಗಿ, ಗುಜರಾತ್ ಉಸ್ತುವಾರಿಯಾಗಿ ಆಯ್ಕೆ ಶಿವಮೊಗ್ಗ: ಇಂಡಿಯಾ ಕಾಂಗ್ರೆಸ್ ಕಮಿಟಿ ಕಾರ್ಯದರ್ಶಿಗಳಾಗಿ, ಗುಜರಾತ್ ಉಸ್ತುವಾರಿಯಾಗಿ ಮಾಜಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ. ಶ್ರೀನಿವಾಸ್ ಆಯ್ಕೆ ಆಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಮಹತ್ವದ ಕಾಣಿಕೆ ನೀಡಿದ್ದಾರೆ. ಇದೀಗ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹೊಸ ಜವಾಬ್ದಾರಿ ಸಿಕ್ಕಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ಶ್ರೀನಿವಾಸ್ ರಾಹುಲ್ ಗಾಂಧಿ ಆಪ್ತರಲ್ಲಿ ಒಬ್ಬರು. ಶ್ರೀನಿವಾಸ್ ಅವರಿಗೆ ಅವರ ಆತ್ಮೀಯರು, ಸ್ನೇಹಿತರು ಶುಭಾಶಯ ಕೋರಿದ್ದಾರೆ. ಹುಂಚದಕಟ್ಟೆ ಆದರ್ಶ್ ಅಭಿನಂದನೆ ಶಿವಮೊಗ್ಗ ಜಿಲ್ಲೆ ಯುವ ಕಾಂಗ್ರೆಸ್ ನಾಯಕರು, ರಾಷ್ಟ್ರೀಯ ಕಾಂಗ್ರೆಸ್ ವಕ್ತಾರರು ಅದ ಹುಂಚದಕಟ್ಟೆ ಆದರ್ಶ್ ಅವರು ಶುಭಾಶಯಗಳು ಸಲ್ಲಿಸಿದ್ದಾರೆ.

Read More

ಕರಾವಳಿ 3 ಪ್ರೈಮ್ ನ್ಯೂಸ್ * ಮಂಗಳೂರು ನಗರಕ್ಕೆ ಬಂತು ಹೊಸ ಟ್ರಾಫಿಕ್ ಸಿಗ್ನಲ್..! * ಬೆಳ್ತಂಗಡಿ: ಕಾಡಾನೆಗಳ ಪ್ರವೇಶ: ಜನರಿಗೆ ಜೀವ ಭಯ * ಉಡುಪಿ: ದೆಹಲಿ ಕಾರು ಸ್ಪೋಟ ಹಿನ್ನೆಲೆ; ಕರಾವಳಿ ಅಲರ್ಟ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ, ನಗರದಲ್ಲಿ ಸಂಚಾರ ಸುಧಾರಣೆ ಮತ್ತು ವಾಹನಗಳ ಸುಗಮ ಸಂಚಾರದ ಉದ್ದೇಶದಿಂದ, ವಿವಿಧ ಜಂಕ್ಷನ್ ಗಳಲ್ಲಿ ಕಳೆದ ವರ್ಷ ಹೊಸ ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸಲಾಗಿದೆ. ಆದರೆ ಒಂದೆರಡು ಬಾರಿ ಪ್ರಾಯೋಗಿಕವಾಗಿ ಕಾರ್ಯಾಚರಣೆಯನ್ನು ನಡೆಸಿರುವುದು ಹೊರತುಪಡಿಸಿದರೆ, ಪೂರ್ಣಪ್ರಮಾಣದಲ್ಲಿ ಇನ್ನೂ ಬಳಕೆಗೊಂಡಿಲ್ಲ. ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ, ಹೊಸದಾಗಿ ಅಳವಡಿಸಿರುವ ಎಲ್ಲಾ ಸಿಗ್ನಲ್ ಗಳಲ್ಲಿ ಕಿತ್ತಳೆ ಬಣ್ಣದ ಲೈಟ್ ಮಾತ್ರ ಕಾಣಬರುತ್ತಿದ್ದು, ಉಳಿದ ಯಾವುದೇ ಸಿಗ್ನಲ್ ಗಳು ಉಪಯೋಗಕ್ಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಜಂಕ್ಷನ್, ಬಲ್ಲಾಳ್ ಬಾಗ್, ಬಂಟರ ವಸತಿನಿಲಯ…

Read More

ತೀರ್ಥಹಳ್ಳಿ ಪಟ್ಟಣ, ತಾಲೂಕಲ್ಲಿ ವಾಹನ ವೇಗದ ಹುಚ್ಚಾಟ.! * ಅತಿವೇಗದ ಪರಿಣಾಮ, ಜೀವ-ಜೀವನ ಹೋಗುತ್ತೆ ಹುಷಾರು * ರಸ್ತೆ ಮೇಲೆ ನೀವು ಬದುಕಿ…ಬೇರೆಯವರನ್ನೂ ಬದುಕಿಸಿ..! * ತಳುವೆ ಬಳಿ ಲಾರಿ ಅಡಿ ಹಾರಿದ ವ್ಯಕ್ತಿಯ ಕಾಲು ತುಂಡು! NAMMUR EXPRESS NEWS ತೀರ್ಥಹಳ್ಳಿ: ಶಾಂತ, ಹಸಿರು, ಸಾಹಿತ್ಯದ ನೆಲೆಯಾದ ತೀರ್ಥಹಳ್ಳಿ ಪಟ್ಟಣ ಇತ್ತೀಚಿನ ದಿನಗಳಲ್ಲಿ ವಾಹನಗಳನ್ನು ಅತಿಯಾದ ವೇಗದಲ್ಲಿ ಚಲಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ರಸ್ತೆ ಸುರಕ್ಷತೆಯ ಕನಸು ಕೇವಲ ಘೋಷಣೆಯಾಗಿ ಉಳಿದಂತಾಗಿದೆ. ಮಕ್ಕಳು ಶಾಲೆಗೆ ತೆರಳುವ ವೇಳೆಯಲ್ಲಿ, ವಯೋವೃದ್ಧರು ಆಸ್ಪತ್ರೆಗಳಿಗೆ ತೆರಳುವ ವೇಳೆಯಲ್ಲಿ, ಮತ್ತು ಮಹಿಳೆಯರು ಮಾರ್ಕೆಟ್ ಕಡೆ ಹೋಗುವ ಸಂದರ್ಭಗಳಲ್ಲಿ ಈ ವೇಗದ ವಾಹನಗಳು ಆತಂಕ ಹುಟ್ಟಿಸುತ್ತಿವೆ. ಅತಿವೇಗ ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಜೀವದ ವಿರುದ್ಧದ ಅಪರಾಧವಾಗಿದೆ. ಕಳೆದ ಕೆಲವು ತಿಂಗಳಲ್ಲೇ ತೀರ್ಥಹಳ್ಳಿಯಲ್ಲಿ ಸಂಭವಿಸಿದ ಹಲವು ಅಪಘಾತಗಳು ಅನೇಕರ ಬಲಿ ಪಡೆದಿವೆ. ಇನ್ನು ನೂರಾರು ಮಂದಿ ಬದುಕು ಕಳೆದುಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಕೊಪ್ಪ ಸರ್ಕಲ್…

Read More

ಕರಾವಳಿ ಟಾಪ್ ನ್ಯೂಸ್ : ಏನೇನು?* ಪುತ್ತೂರು: ಕಾರು, ದ್ವಿಚಕ್ರ ವಾಹನ ಅಪಘಾತ * ಕಾರ್ಕಳ: ಜಿಂಕೆ ಮಾಂಸ ಪತ್ತೆ * ಕುಂದಾಪುರ: ಹಣ ಮತ್ತು ಬೆಳ್ಳಿ ಗಟ್ಟಿ ಕಳುವು * ಮೂಲ್ಕಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ * ಬಂಟ್ವಾಳ: ಅವಿವಾಹಿತ ಹುಡುಗಿ ನಾಪತ್ತೆ * • ಮೂಡಬಿದರೆ:ಆರೋಪಿಯ ಶಿಕ್ಷೆಯ ಪ್ರಮಾಣ ಪ್ರಕಟ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮೂಡಬಿದರೆ: ಕಾಲೇಜೊಂದರ ನೌಕರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಚಿದಾನಂದ ಪರಶು ನಾಯ್ಕ ನ ಶಿಕ್ಷೆಯ ಪ್ರಮಾಣ ಇಂದು ಪ್ರಕಟಗೊಳ್ಳಲಿದೆ. 2020ರ ಅಕ್ಟೋಬರ್ 10ರಂದು ಚಿದಾನಂದ ಪರಶು ನಾಯ್ಕ ನೌಕರರ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದ, ಅದೇ ಕಾಲೇಜಿನ ನೌಕರನಾದ ಚೇತನ್ ಎನ್ನುವವರನ್ನು ಕೊಲೆ ಮಾಡುವ ಸಲುವಾಗಿ, ಕಬ್ಬಿಣದ ಸರಳನ್ನು ತೆಗೆದುಕೊಂಡು ವಿಶ್ರಾಂತಿ ಕೊಠಡಿಗೆ ಅಕ್ರಮವಾಗಿ ಪ್ರವೇಶಿಸಿದ್ದನು. ರಾಜೇಶ್ ಪೂಜಾರಿ ಮತ್ತು ಶಂಕ್ರಪ್ಪ ಎನ್ನುವವರೊಂದಿಗೆ ಮಲಗಿದ್ದ ಚೇತನ್ ಅವರನ್ನು ಚಿದಾನಂದ ಪರಶು ಅವಾಚ್ಯ ಶಬ್ದಗಳಿಂದ ಬೈದು, ಕಬ್ಬಿಣದ ಸರಳಿನಿಂದ…

Read More

ಶಿಕ್ಷಣ ಕ್ಷೇತ್ರದಲ್ಲಿ ಡಾ.ಆರ್. ಎಂ.ಜಗದೀಶ್ ದಾರಿ ದೀಪ! – ಶಿವಮೊಗ್ಗದ ಕಮಲಾ ನೆಹರು ಕಾಲೇಜು ಪ್ರಾಂಶುಪಾಲರಾಗಿ ಈಗ ನಿವೃತ್ತಿ – ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಪ್ರೇರಣೆ NAMMUR EXPRESS NEWS ಶಿವಮೊಗ್ಗ/ ತೀರ್ಥಹಳ್ಳಿ: ಶಿವಮೊಗ್ಗದ ಕಮಲಾ ನೆಹರು ಕಾಲೇಜು ಪ್ರಾಂಶುಪಾಲರಾದ ಡಾ.ಆರ್. ಎಂ.ಜಗದೀಶ್ ವಯೋ ನಿವೃತ್ತಿಯಾಗಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪ ಆಗಿದ್ದ ಜಗದೀಶ್ ಅವರ ನಿವೃತ್ತಿ ಜೀವನಕ್ಕೆ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಶುಭಾಶಯ ಸಲ್ಲಿಸಿದ್ದಾರೆ. ಅಲ್ಲದೆ ಇಡೀ ಆಡಳಿತ, ಸಿಬ್ಬಂದಿ ಅವರ ಸೇವೆಗೆ ವಂದನೆ ಸಲ್ಲಿಸಿದೆ. ಯುವಕರನ್ನೆ ನಾಚಿಸುವಂತಹ ಸ್ಪುರದ್ರೂಪಿ ಜಗದೀಶ್. ತಮ್ಮ ವ್ಯಕ್ತಿತ್ವದ ಮೂಲಕ ತಮ್ಮನ್ನು ಸೆಳೆಯುವ ಜಗದೀಶ್ ಅವರು ಕೋಣಂದೂರಿನಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಹೆಚ್ಚಿನ ವಿಧ್ಯಾಭ್ಯಾಸವನ್ನು ಮೈಸೂರಿನಲ್ಲಿ ಮುಗಿಸಿ ತಾನು ಓದಿದ ಶರಾವತಿ ಪ್ರಥಮ ದರ್ಜೆ ಕಾಲೇಜಿನಿಂದಲೇ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಇವರ ಇತಿಹಾಸ ಪಾಠ ಕೇಳೋಕೆ ಸೊಗಸು ಅಂತ ನೆನಪಿನ ಪುಟವನ್ನು ಇವರ ನೂರಾರು ವಿದ್ಯಾರ್ಥಿಗಳು ತೆರೆದಿಡುತ್ತಾರೆ. ಉತ್ತಮ ಕ್ರೀಡಾಪಟುವೂ…

Read More

ಹೋಂ ಮಿನಿಸ್ಟರ್ ವಿರುದ್ಧ ಅವಹೇಳನಕಾರಿ ಹೇಳಿಕೆ, ಸಂತೋಷ್ ಕೋಟ್ಯಾನ್ ಬಂಧನ * ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ * ಠಾಣೆ ಮುಂದೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಕೋರ್ಟ್‌ಗೆ ಸಂತೋಷ್ NAMMMUR EXPRESS NEWS ಚಿಕ್ಕಮಗಳೂರು: ರಾಜ್ಯ ಸರ್ಕಾರದ ವಿರುದ್ಧ ಚಿಕ್ಕಮಗಳೂರು ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಗೃಹಸಚಿವ ಡಾ. ಜಿ ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯವನ್ನು ಖಂಡಿಸಿ ಮಂಗಳವಾರ ನಡೆದಿದ್ದ ಬಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಸಂತೋಷ್ ಕೊಟ್ಯಾನ್ ಮಾತನಾಡಿದ್ದರು. ಈ ವೇಳೆ ಅವರು ಗೃಹಸಚಿವ ಡಾ. ಪರಮೇಶ್ವರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾಗಿ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದರು. ಕಾಂಗ್ರೆಸ್ ಕಾರ್ಯಕರ್ತರ ದೂರಿನ ಆಧಾರದಲ್ಲಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಪೊಲೀಸರು ಸಂತೋಷ್ ಕೊಟ್ಯಾನ್ ಅವರನ್ನು ಬಂಧಿಸಿ, ಹೌಸಿಂಗ್…

Read More

ತೀರ್ಥಹಳ್ಳಿ ಟಾಪ್ ನ್ಯೂಸ್ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಪಟ್ಟು * ತೀರ್ಥಹಳ್ಳಿ‌ ಪಟ್ಟಣ ಪಂಚಾಯಿತಿ ಮೇಲೆ ಲೋಕಾಯುಕ್ತ ದಾಳಿ * ನಡು ರಸ್ತೆಯಲ್ಲೇ ಬಸ್ ಬ್ರೇಕ್ ಫೇಲ್: ವೇಗಕ್ಕೆ ಕಡಿವಾಣ ಯಾವಾಗ? NAMMUR EXPRESS NEWS ತೀರ್ಥಹಳ್ಳಿ: 2 ದಿನಗಳ ಹಿಂದೆ ದೇಶದಲ್ಲಿ ಉಗ್ರರ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಯುವ ಕಾಂಗ್ರೆಸ್ ಘಟಕವು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತೀರ್ಥಹಳ್ಳಿ ತಾಲೂಕ ಆಫೀಸ್ ಮುಂಭಾಗದಲ್ಲಿ ನವೆಂಬರ್ 12ರಂದು ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಮುಖಂಡರು, ದೇಶದ ರಾಜಧಾನಿ ನವದೆಹಲಿಯ ಕೆಂಪುಕೋಟೆಯ ಸಮೀಪ ನಡೆದ ಇತ್ತೀಚಿನ ಉಗ್ರ ದಾಳಿ ಕುರಿತು ಘಟಕದ ಸದಸ್ಯರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುವ ಕಾಂಗ್ರೆಸ್‌ನ ಘಟಕದಿಂದ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗೆ ಸಲ್ಲಿಸಲಾದ ಮನವಿಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಗರೀಕರ ಸುರಕ್ಷತೆಗಾಗಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಅವರನ್ನು…

Read More

ಕೋಣಂದೂರಲ್ಲಿ ಪಟ್ಲ ಯಕ್ಷಗಾನ ಸೂಪರ್! – ಸುಮಾರು 4000 ಜನರ ವೀಕ್ಷಣೆ: ಸಹಕಾರ ನಾಯಕ ಮಂಜುನಾಥ ಗೌಡ ನೇತೃತ್ವದಲ್ಲಿ ಸಾಂಸ್ಕೃತಿಕ ಸಂಭ್ರಮ – ಪಟ್ಲ ಸತೀಶ್ ಶೆಟ್ಟಿ ಅವರಿಗೆ ಕೋಣಂದೂರು ನಾಗರೀಕ ಸನ್ಮಾನ NAMMUR EXPRESS NEWS ತೀರ್ಥಹಳ್ಳಿ: ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಾಂಸ್ಕೃತಿಕ ಸಮಿತಿ ಹಾಗೂ ಕೋಣಂದೂರು ಸೊಸೈಟಿ ನೇತೃತ್ವದಲ್ಲಿ ಖ್ಯಾತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಕೋಣಂದೂರಲ್ಲಿ ಮಂಗಳವಾರ ನಡೆದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನಕ್ಕೆ ಸುಮಾರು 4 ಸಾವಿರಕ್ಕೂ ಹೆಚ್ಚು ಯಕ್ಷ ಪ್ರಿಯರು ವೀಕ್ಷಣೆ ಮಾಡಿದ್ದಾರೆ. ವೇದಿಕೆಯಲ್ಲಿ ಯಕ್ಷ ಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಸತೀಶ್ ಶೆಟ್ಟಿ ಪಟ್ಲ ಅವರನ್ನು ಸನ್ಮಾನಿಸಲಾಯಿತು. ಕೊಡಚಾದ್ರಿ ಟ್ರಸ್ಟ್ ಸ್ಥಾಪಕರು, ತೀರ್ಥಹಳ್ಳಿ ನಾಯಕರು ಆದ ಡಾ. ಆರ್.ಎಂ. ಮಂಜುನಾಥ ಗೌಡ, ಶಾಸಕ ಆರಗ ಜ್ಞಾನೇಂದ್ರ, ಎನ್. ಇ. ಎಸ್ ಸಂಸ್ಥೆ ಅಧ್ಯಕ್ಷರಾದ ನಾರಾಯಣ ರಾವ್, ಡಿಸಿಸಿ…

Read More

ಎಣ್ಣೆ ಕುಡಿದ 13 ವರ್ಷದ ಹುಡುಗ ಆತ್ಮಹತ್ಯೆ! * ಅಪ್ಪ ಬೈತಾರೆಂದು ಆತ್ಮಹತ್ಯೆಗೆ ಶರಣಾದ ಬಾಲಕ * ಮದುವೆ ಮನೆಯಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ್ದ ಬಾಲಕ * ಬಾಳೆಹೊನ್ನೂರು ಠಾಣಾ ವ್ಯಾಪ್ತಿ ಘಟನೆ: ಪ್ರಕರಣ ದಾಖಲು NAMMMUR EXPRESS NEWS ಎನ್ ಆರ್ ಪುರ:: ಸ್ನೇಹಿತರ ಜೊತೆ ಮದ್ಯ ಸೇವಿಸಿ ಅಪ್ಪನಿಗೆ ವಿಷಯ ತಿಳಿದರೆ ಬೈಯುತ್ತಾರೆ ಅಂತ 13 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬಾಳೆಹೊನ್ನೂರು ಸಮೀಪದ ಮೇಲ್ಪಾಲ್ ಗ್ರಾಮದ ಗಂಗೋಜಿ ಎಂಬಲ್ಲಿ ನಡೆದಿದೆ. ಮೃತ ಬಾಲಕ ಮೇಲ್ಪಾಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಮೇಲ್ಪಾಲ್ ಗ್ರಾಮದಲ್ಲಿ ಅದೇ ಗ್ರಾಮಸ್ಥರೊಬ್ಬರ ಮದುವೆ ಕಾರ್ಯಕ್ರಮವಿತ್ತು. ಮದುವೆಗೆ ಶರಣ್ ಸೇರಿ ಪೋಷಕರು ಹೋಗಿದ್ದರು. ಮದುವೆ ಮನೆಯಲ್ಲಿ ಸ್ನೇಹಿತರ ಜೊತೆ ಸೇರಿ ಬಾಲಕ ಮದ್ಯ ಸೇವಿಸಿದ್ದಾನೆ. ಮದ್ಯ ಸೇವಿಸಿದ ಬಳಿಕ ಕುಡಿದಿರುವುದು ಅಪ್ಪನಿಗೆ ಗೊತ್ತಾದರೆ ಬೈಯುತ್ತಾರೆ ಎಂದು ಮನೆ ಬಳಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನ ಗಮನಿಸಿದ…

Read More

ತಿಥಿ ಸಿನಿಮಾ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ನಿಧನ * ಅಸ್ತಮಾ,ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಡ್ಡಪ್ಪ * ತಿಥಿ ಸಿನಿಮಾ ನಟನೆಗೆ ಅಂತರರಾಷ್ಟ್ರೀಯ ಪ್ರಶಸ್ತಿ NAMMMUR EXPRESS NEWS ಮಂಡ್ಯ : ತಿಥಿ ಸಿನಿಮಾ ಮೂಲಕ ಗಡ್ಡಪ್ಪ ಎಂದೇ ಹೆಸರುವಾಸಿಯಾದ ಮಂಡ್ಯದ ಚನ್ನೇಗೌಡ (89) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತಾಲೂಕಿನ ನೊದೆ ಕೊಪ್ಪಲು ಗ್ರಾಮದಲ್ಲಿ ನಿಧನ ಹೊಂದಿದ ಚನ್ನೇಗೌಡ ಅವರು ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು, ತಿಂಗಳ ಹಿಂದೆ ಬಿದ್ದು ಸೊಂಟ ಪೆಟ್ಟಾಗಿ, ಆಪರೇಷನ್ ಕೂಡ ಆಗಿತ್ತು.ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಂಜೆ ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಪುತ್ರಿ ಶೋಭಾ ಮಾಹಿತಿ ನೀಡಿದ್ದಾರೆ. ಗಡ್ಡಪ್ಪ ಎಂದು ಖ್ಯಾತಿ ಪಡೆದಿರುವ ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದ ಗಡ್ಡಪ್ಪ ಮೂಲ ಹೆಸರು ಚನ್ನೇಗೌಡ ಆದ್ರೂ ಗಡ್ಡಪ್ಪ ಅಂತಲೇ ಕರೆಸಿಕೊಳ್ಳುತ್ತಿದ್ದರು. ತಿಥಿ, ತರ್ಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿ ಸುಮಾರು 8 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.…

Read More