ಎನ್‌ಡಿಎಗೆ ಬಿಹಾರ ಗದ್ದುಗೆ, ಮಹಾಘಟಬಂಧನ್‌ಗೆ ತೀವ್ರ ಮುಖಭಂಗ * ಸಮೀಕ್ಷೆಗಳ ನಿರೀಕ್ಷೆಯನ್ನೂ ಮೀರಿ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ * ಮತಗಳ್ಳತನ ಆರೋಪ ಮಾಡಿದ ಕಾಂಗ್ರೆಸ್ NAMMMUR EXPRESS NEWS ಬೆಂಗಳೂರು: ಭಾರೀ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಬಿಹಾರದಲ್ಲಿ ಎನ್‌ಡಿಎ ಭಾರೀ ಮುನ್ನಡೆ ಸಾಧಿಸಿದ್ದು, ಆರ್ಜೆಡಿ ಹಾಗೂ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ. ಈ ನಡುವೆ ಬಿಹಾರದ ಸಂಪೂರ್ಣ ಫಲಿತಾಂಶ ಹೊರ ಬೀಳುವ ಮುನ್ನವೇ ಕಾಂಗ್ರೆಸ್ ನಾಯಕರು ಮತಗಳ್ಳತನದ ಆರೋಪ ಮಾಡುತ್ತಿದ್ದಾರೆ. * ಸದ್ಯದ ಫಲಿತಾಂಶ ಹೀಗಿದೆ ಬಿಹಾರ ವಿಧಾನಸಭಾ ಚುನಾವಣೆಯ ಒಟ್ಟು ಸ್ಥಾನಗಳು – 243 ಮ್ಯಾಜಿಕ್ ನಂಬರ್ -122 ಎನ್‌ಡಿಎ ಮುನ್ನಡೆ -203 ಮಹಾಘಟಬಂಧನ್ ಮುನ್ನಡೆ – 33 ಜೆಎಸ್‌ಪಿ -00 ಇತರೆ – 06 ಪಕ್ಷವಾರು ನೋಡೋದಾದರೆ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ -91 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದು,ಮಿತ್ರ ಪಕ್ಷ ಜೆಡಿಯು – 84 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ, ಮಹಾಘಟಬಂಧನ್‌ನಲ್ಲಿರುವ ಕಾಂಗ್ರೆಸ್ -05…
Author: Nammur Express Karkala
ಟಾಪ್ 4 ನ್ಯೂಸ್: ತೀರ್ಥಹಳ್ಳಿ ಬಾಳೆಬೈಲು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು…! * ಆತ್ಮಹತ್ಯೆ ಸುತ್ತ ಅನುಮಾನ: ದಬ್ಬಣಗದ್ದೆ ಗ್ರಾಮದ ಯುವತಿ – ತೂದೂರು ಇರೇಗೋಡು ಬಳಿ ಕಾಡು ಆನೆ ಪತ್ತೆ – ನಂದೀಶ್ ಬಳಗಟ್ಟೆ ಅವರ ತಾಯಿ ಪದ್ಮಾವತಮ್ಮ ನಿಧನ – ಅಡಿಕೆ ಯಂತ್ರಕ್ಕೆ ಸಿಲುಕಿ ಬಾಲಕಿ ಬೆರಳು ತುಂಡು ತೀರ್ಥಹಳ್ಳಿ: ತೀರ್ಥಹಳ್ಳಿ ಬಾಳೆಬೈಲು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಸಮೀಪದ ದಬ್ಬಣ ಗದ್ದೆ ಸಮೀಪದ ಬಚ್ಚನಕೊಡಿಗೆ ರಮೇಶ್ ಆಚಾರ್ ಎಂಬುವರ ಪುತ್ರಿ ಪ್ರಾಪ್ತಿ (21) ಎಂಬ ಯುವತಿ ಬಾಳೆಬೈಲು ಕಾಲೇಜಿನಲ್ಲಿ ತೃತೀಯ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾರ್ಥಿನಿ ಕ್ಷುಲ್ಲಕ ಕಾರಣಕ್ಕೆ ನವೆಂಬರ್ 14ರಂದು ಬೆಳಿಗ್ಗೆ 4:00 ಸಮಯದಲ್ಲಿ ಮನ ನೊಂದ ಪ್ರಾಪ್ತಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯಾ ಸುತ್ತ ಅನುಮಾನದ ಚಕ್ರ ಸುಳಿ ತಿರುಗುತ್ತಿದೆ. ವ್ಯಾಸಂಗದಲ್ಲಿ ಮುಂದಿದ್ದ ಪ್ರಾಪ್ತಿಯ ಸಾವಿನ ಸುದ್ದಿ ತಿಳಿದು ಕಾಲೇಜಿನಲ್ಲಿ ನೀರವ ಮೌನ…
ಟಿಎಸ್‌ಡಿ ರಾಷ್ಟ್ರ ಮಟ್ಟದ ರ್ಯಾಲಿಯಲ್ಲಿ ಕಾಫಿನಾಡ ಕುವರರ ಸಾಧನೆ * ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ರ್ಯಾಲಿ * ಮಹೀಂದ್ರಾ ಥಾರ್ ಕೆಟಗರಿಯಲ್ಲಿ ಮೊದಲನೇ ಸ್ಥಾನ,ಇತರೆ ವಿಭಾಗದಲ್ಲಿ ಪ್ರಶಸ್ತಿ NAMMMUR EXPRESS NEWS ಚಿಕ್ಕಮಗಳೂರು: ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ರಾಷ್ಟ್ರಮಟ್ಟದ 7000kms ನಾಲ್ಕು ಚಕ್ರದ ಟೈಮ್ ಸ್ಪೀಡ್ ಡಿಸ್ಟೆನ್ಸ್ ರ್ಯಾಲಿ(TDS – rally)ಯಲ್ಲಿ ಕಾಫಿನಾಡು ಚಿಕ್ಕಮಗಳೂರಿನ ಮನು ಗೌಡ ಎ.ಕೆ ಹಾಗೂ ಸಮೃದ್ಧ್ ಪೈ ಜೋಡಿ ಭಾಗವಹಿಸಿ ಮಹೀಂದ್ರಾ ಥಾರ್ ಕ್ಯಾಟಗರಿಯಲ್ಲಿ ಮೊದಲ ಸ್ಥಾನ ಗೆದ್ದು ಪ್ರಶಸ್ತಿ ಪಡೆದುಕೊಂಡಿದ್ದು, ಇಂಡಿಯನ್ ನ್ಯಾಷನಲ್ ಟೈಮ್ ಸ್ಪೀಡ್ ಡಿಸ್ಟೆನ್ಸ್ -2 ಕ್ಯಾಟಗರಿಯಲ್ಲಿ (INTSDRC-2) ಎರಡನೇ ಸ್ಥಾನ ಹಾಗೂ Highland Extreme pro expert ಕ್ಯಾಟಗರಿಯಲ್ಲಿ ಮೂರನೇ ಸ್ಥಾನ ಪಡೆದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಹಲವು ರ್ಯಾಲಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡ ತಂಡವು ಈಗ ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ.
ತಿಮ್ಮಕ್ಕ ಇನ್ನಿಲ್ಲ * ಮರಗಳನ್ನೇ ಮಕ್ಕಳಂತೆ ಸಾಕಿದ ಸಾಲುಮರದ ತಿಮ್ಮಕ್ಕ ವಿಧಿವಶ * ಹಲವು ಗೌರವಕ್ಕೆ ಭಾಜನರಾಗಿದ್ದ ತಿಮ್ಮಕ್ಕ,ಅನಾರೋಗ್ಯದಿಂದ ನಿಧನ NAMMMUR EXPRESS NEWS ಬೆಂಗಳೂರು: ಮರಗಳನ್ನೇ ತನ್ನ ಸ್ವಂತ ಮಕ್ಕಳೆಂದು ಪ್ರೀತಿಸಿ,ಪೋಷಿಸಿ,ಬೆಳೆಸಿದ ಕರ್ನಾಟಕ ರಾಜ್ಯದ ಹೆಮ್ಮೆ 114 ವರ್ಷದ ಸಾಲುಮರದ ತಿಮ್ಮಕ್ಕ ನಿಧನರಾಗಿದ್ದಾರೆ. ದೀರ್ಘ ಕಾಲದ ಒನಾರೋಗ್ಯದಿಂದ ಬಳಲುತ್ತಿದ್ದ ವೃಕ್ಷ ಮಾತೆ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಇಂದು ಕೊನೆಯುಸಿರೆಳೆದಿದ್ದಾರೆ. * ರಾಜ್ಯ,ರಾಷ್ಟ್ರ ಪ್ರಶಸ್ತಿ ವಿಜೇತೆ ಸಾಲುಮರದ ತಿಮ್ಮಕ್ಕ ಜೂನ್ 30 1911 ರಲ್ಲಿ ಜನಿಸಿ ಮರಗಳನ್ನೆ ತನ್ನ ಮಕ್ಕಳೆಂದು ಭಾವಿಸಿ ಬೆಳೆಸಿದ ಸಾಲುಮರದ ತಿಮ್ಮಕ್ಕನವರಿಗೆ ನಾಡೋಜ,ಪರಿಸರ ರತ್ನ ಸೇರಿ ನೂರಾರು ಗೌರವ ಲಭಿಸಿದ್ದು,2021 ರಲ್ಲಿ ಪರಿಸರ ಸಂರಕ್ಷಣೆಗಾಗಿ ಗೌರವ ಡಾಕ್ಟರೇಟ್ ಲಭಿಸಿತ್ತು, 2019 ರಲ್ಲಿ ಬಿಬಿಸಿ ಪ್ರಕಟಿಸಿದ್ದ ವಿಶ್ವದ 100 ಜನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕರವರರ ಹೆಸರು ಉಲ್ಲೇಖವಾಗಿತ್ತು.CBSE,ರಾಜ್ಯ ಪುಸ್ತಕದಲ್ಲಿ ತಿಮ್ಮಕ್ಕನ ಪರಿಸರ ಪ್ರೇಮ ಪಠ್ಯ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ,ಇಂದಿರಾ ರತ್ನ ಪ್ರಶಸ್ತಿ,ದಿ ಗ್ರೀನ್…
ಬಿಹಾರದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ! * ಸ್ಪಷ್ಟ ಬಹುಮತದತ್ತ ಎನ್‌ಡಿಎ ಮೈತ್ರಿಕೂಟ,ಸಂಭ್ರಮಾಚರಣೆಗೆ ಬೇಡ ಎಂದ ಬಿಜೆಪಿ * ಕುಸಿತದತ್ತ ಮಹಾಘಟಬಂಧನ್,ಕಾಂಗ್ರೆಸ್‌ಗೆ ಭಾರೀ ಹಿನ್ನಡೆ NAMMMUR EXPRESS ELECTION BREAKING ಬಿಹಾರ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಮತ ಎಣಿಕೆ ನಡೆಯುತ್ತಿದ್ದು,ಪ್ರಧಾನಿ ನರೇಂದ್ರ ಮೋದಿ ಅವರ ಸ್ಟ್ರೈಕ್‌ರೇಟ್‌ಗೆ ಎದುರಾಳಿಗಳು ಉಡೀಸ್ ಆಗಿದ್ದಾರೆ. ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದ 115 ಕ್ಷೇತ್ರಗಳ ಪೈಕಿ 85 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಹೌದು, 243 ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದವು. ಈ ಪೈಕಿ 14 ರ‍್ಯಾಲಿ, 1 ರೋಡ್ ಶೋ ನಡೆಸಿದ್ದ ಮೋದಿ 115 ಕ್ಷೇತ್ರಗಳನ್ನ ಗುರಿಯಾಗಿಸಿ ಬಿರುಸಿನ ಪ್ರಚಾರ ನಡೆಸಿದ್ದರು. ಈ ಪೈಕಿ 85 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟಾರೆ 11:30 ₹ರ ಟ್ರೆಂಡ್ ವೇಳೆಗೆ ಎನ್‌ಡಿಎ 188+ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮಹಾಘಟಬಂಧನ್ 51, ಇತರರು ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಒಟ್ಟಾರೆ ಸ್ಪಷ್ಟ…
ಡೆವಿಲ್’ ಸಿನಿಮಾದಲ್ಲಿ ಹುಲಿ ಕಾರ್ತಿಕ್! – ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ – ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ಸಕತ್ ಕಾಮಿಡಿ ಕಲಾವಿದ ಸಿನಿಮಾ ಡೆಸ್ಕ್: ಅಮೃತಾ ಕೊಪ್ಪ ‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’, ‘ಭರ್ಜರಿ ಬ್ಯಾಚುಲರ್ಸ್’ ಖ್ಯಾತಿಯ ಹುಲಿ ಕಾರ್ತಿಕ್ ಡೆವಿಲ್ ಸಿನಿಮಾದಲ್ಲಿ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಕನ್ನಡದ ಕಾಮಿಡಿ ಕಲಾವಿದರ ಸ್ಥಾನಕ್ಕೆ ಮತ್ತೊಬ್ಬ ಕಲಾವಿದ ಸಿನಿಮಾದಲ್ಲಿ ಗಮನ ಸೆಳೆಯಲಿದ್ದಾರೆ. ‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’, ‘ಭರ್ಜರಿ ಬ್ಯಾಚುಲರ್ಸ್’ ಖ್ಯಾತಿಯ ಹುಲಿ ಕಾರ್ತಿಕ್ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಶ್ರೀ ಜೈಮಾತಾ ಕಂಬೈನ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ಶ್ರೀ ಜೈಮಾತಾ ಕಂಬೈನ್ಸ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹುಲಿ ಕಾರ್ತಿಕ್ ಅವರ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಜೊತೆಗೆ ‘ದಿ ಡೆವಿಲ್’ ಮತ್ತೊಬ್ಬ ಪ್ರಮುಖ ಪೋಷಕ ಪಾತ್ರಧಾರಿ ಹುಲಿ ಕಾರ್ತಿಕ್’ ಎಂದು ಬರೆದುಕೊಂಡಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹುಡುಗ…
ಮೌಂಟೇನ್ ವ್ಯೂ ಕಾಲೇಜು ವಿದ್ಯಾರ್ಥಿಗಳ ಮೇಲೆ ಹೇಜ್ಜೇನು ದಾಳಿ * ಹೆಜ್ಜೇನು ಗೂಡಿಗೆ ಕಲ್ಲು ಹೊಡೆದಿದ್ದ ವಿದ್ಯಾರ್ಥಿ,ಓರ್ವನ ಸ್ಥಿತಿ ಗಂಭೀರ * ಮೌಂಟೆನ್ ವ್ಯೂ ಕಾಲೇಜಿನಲ್ಲಿ ಘಟನೆ NAMMMUR EXPRESS NEWS ಚಿಕ್ಕಮಗಳೂರು : ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳ ಮೇಲೆ ಹೆಜ್ಜೇನುಗಳು ದಾಳಿ ನಡೆಸಿದ ಪರಿಣಾಮ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹಾಸನ ನಗರದ ಆಸ್ಪತ್ರೆಗೆ ರವಾನಿಸಲಾಗಿದೆ. ನಗರದ ಮೌಂಟೇನ್ ವ್ಯೂ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಮಧ್ಯಾಹ್ನ ವಿದ್ಯಾರ್ಥಿಗಳನ್ನು ಊಟಕ್ಕೆ ಬಿಟ್ಟ ವೇಳೆ ಜೇನುಗೂಡಿಗೆ ವಿದ್ಯಾರ್ಥಿಯೊಬ್ಬ ಕಲ್ಲು ಹೊಡೆದ ಪರಿಣಾಮ ಹೆಜ್ಜೇನು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿವೆ ಎಂದು ತಿಳಿದು ಬಂದಿದೆ. ಹೆಜ್ಜೇನು ದಾಳಿಯಿಂದ ಅಸ್ವಸ್ಥರಾದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಹೆಜ್ಜೇನು ದಾಳಿ…
ಅನ್ನದಾತ.. ಉದ್ಯೋಗದಾತ ಕೊಪ್ಪದ ಸುಧಾಕರ್ ಶೆಟ್ಟಿ! – ನೂರಾರು ಯುವತಿಯರಿಗೆ ಬೆಂಗಳೂರಲ್ಲಿ ಉದ್ಯೋಗ – ಚುನಾವಣೆಯಲ್ಲಿ ಸೋತರೂ ಜನರ ಪ್ರೀತಿ ಗೆದ್ದ ಶೆಟ್ಟರು! NAMMUR EXPRESS NEWS ಕೊಪ್ಪ: ಅಮ್ಮ ಫೌಂಡೇಶನ್ ತುಮಖಾನೆ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ಉದ್ಯೋಗ ಮೇಳವನ್ನು ಆಯೋಜಿಸಿದ್ದು. ಇದರ ಫಲವಾಗಿ ಶೃಂಗೇರಿ ಕ್ಷೇತ್ರದ ನೂರಾರು ಮಂದಿ ಯುವತಿಯರು ಬೆಂಗಳೂರಿನ ಟಾಟಾ ಕಂಪನಿಯಲ್ಲಿ ಉದ್ಯೋಗವನ್ನು ಪಡೆದು ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರಿನ ಟಾಟಾ ಎಲೆಕ್ಟ್ರಾನಿಕ್‌ಗೆ ಕಳುಹಿಸುವ ಕಾರ್ಯ ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು. ಅಭ್ಯರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಶ್ರೀ ಸುಧಾಕರ್ ಶೆಟ್ಟಿ ಅವರು ಅಭ್ಯರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಅವರ ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಸಿದರು. ವಿದ್ಯಾವಂತ ಮಹಿಳೆಯರನ್ನು ಅಮ್ಮ ಫೌಂಡೇಶನ್ ವತಿಯಿಂದ ಸುಧಾಕರ್ ಶೆಟ್ಟಿ ಅವರು ಸ್ವಂತ ಖರ್ಚಿನಿಂದ ಬೆಂಗಳೂರಿಗೆ ಬಸ್ಸು ಹಾಗೂ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯೊಂದಿಗೆ…
ಹಿರಿಯ ಸಹಕಾರಿ ಮಹಾಬಲ ಜಿ ಎಸ್ ರವರಿಗೆ ಸಹಕಾರ ರತ್ನ ಪ್ರಶಸ್ತಿ * ನ.14 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ * ಕೇಂದ್ರೀಯ ಕಾಫಿ ಮಂಡಳಿಯ ಉಪಾಧ್ಯಕ್ಷರಾಗಿದ್ದ ಮಹಾಬಲ ಜಿ ಎಸ್ NAMMMUR EXPRESS NEWS ಕೊಪ್ಪ: ಕರ್ನಾಟಕ ರಾಜ್ಯ ಸಹಾಕಾರ ಮಹಾಮಂಡಳ ನಿ. ವತಿಯಿಂದ ಕೊಡಮಾಡುವ ‘ಸಹಕಾರ ರತ್ನ’ ಪ್ರಶಸ್ತಿಯನ್ನು ಹಿರಿಯ ಸಹಕಾರಿಗಳು, ಕೇಂದ್ರೀಯ ಕಾಫಿ ಮಂಡಳಿಯ ಉಪಾಧ್ಯಕ್ಷರಾದ ಮಹಾಬಲ ಜಿ ಎಸ್ ಇವರಿಗೆ ದೊರತಿದೆ. ಮಹಾಮಂಡಳಿಯು ರಾಜ್ಯ ಸಹಕಾರ ಚಳುವಳಿಯ ಬೆಳವಣಿಗೆಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಗೌರವವನ್ನು ಪ್ರತಿ ವರ್ಷ ನೀಡುತ್ತಿದೆ. ಈ ಬಾರಿ ಜಿ ಎಸ್ ಮಹಾಬಲ ರವರಿಗೆ ಪ್ರಶಸ್ತಿ ಲಭಿಸಿರುವುದು ಅವರ ಆಪ್ತ ವಲಯದಲ್ಲಿ ಸಂತೋಷವನ್ನುಂಟು ಮಾಡಿದ್ದು, ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಸಹಕಾರಿ ರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಹಿರಿಯ ಸಹಕಾರಿಗಳಾದ ಜಿ ಎಸ್ ಮಹಾಬಲ ರವರಿಗೆ ನಮ್ಮೂರ್ ಎಕ್ಸ್‌ಪ್ರೆಸ್ ವತಿಯಿಂದ ಅಭಿನಂದನೆಗಳು.
ಮಲೆನಾಡು ಮಿತ್ರ ವೃಂದಕ್ಕೆ ನೂತನ ಸಾರಥಿಗಳು! – ನೂತನ ಅಧ್ಯಕ್ಷರಾಗಿ ಸಂದೇಶ್ ಗೌಡ ಹಂದಿಗೋಡು, ಉಪಾಧ್ಯಕ್ಷರಾಗಿ ವನಮಾಲಯ್ಯ ಇಳಿಮನೆ ಆಯ್ಕೆ – ಕಾರ್ಯದರ್ಶಿಯಾಗಿ ನಾಗೇಶ್ ಕೇಳೂರು, ಸಹ ಕಾರ್ಯದರ್ಶಿಯಾಗಿ ರಾಘವೇಂದ್ರ ಸಿಸ್ಲೆ, ಖಜಾಂಚಿಯಾಗಿ ನಿದರ್ಶನ ಗಾಡಿಗೆರೆ – 2 ವರ್ಷದ ಅವಧಿಗೆ ನೂತನ ಕಾರ್ಯಕಾರಿಣಿ ಮಂಡಳಿ ಅವಿರೋಧ ಆಯ್ಕೆ ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡಿನ ಸಮುದಾಯವನ್ನು ಪ್ರತಿನಿಧಿಸುವ ಪ್ರಮುಖ ಸಂಘಟನೆಯಾದ ಮಲೆನಾಡು ಮಿತ್ರ ವೃಂದದ ನೂತನ ಕಾರ್ಯಕಾರಿಣಿ ಮಂಡಳಿಯನ್ನು ಸಂಘದ ನಿರ್ದೇಶಕರ ಸಭೆಯಲ್ಲಿ ಸರ್ವಾನುಮತದಿಂದ ಮತ್ತು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಸಂದೇಶ್ ಗೌಡ ಹಂದಿಗೋಡು, ಉಪಾಧ್ಯಕ್ಷರಾಗಿ ವನಮಾಲಯ್ಯ ಇಳಿಮನೆ, ಕಾರ್ಯದರ್ಶಿಯಾಗಿ ನಾಗೇಶ್ ಕೇಳೂರು, ಸಹ ಕಾರ್ಯದರ್ಶಿಯಾಗಿ ರಾಘವೇಂದ್ರ ಸಿಸ್ಲೆ, ಖಜಾಂಚಿಯಾಗಿ ನಿದರ್ಶನ ಗಾಡಿಗೆರೆ ಆಯ್ಕೆ ಆಗಿದ್ದಾರೆ. ಸಂಘದ ಹಿಂದಿನ ಅಧ್ಯಕ್ಷರಾದ ಪ್ರದೀಪ್ ಹೆಗ್ಗೋಡು ಅವರ ಯಶಸ್ವಿ ಕಾರ್ಯಾವಧಿಯು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಸಂಘದ ಮುಂದಿನ ಎರಡು ವರ್ಷಗಳ ಅವಧಿಗಾಗಿ ಈ ಹೊಸ ಕಾರ್ಯಕಾರಿಣಿ ಮಂಡಳಿಯನ್ನು…



