ಅಡಿಕೆ ಬೆಲೆ ಬಂಪರ್!
– 54 ಸಾವಿರ ರೂ. ಸನಿಹಕ್ಕೆ ಅಡಿಕೆ ಬೆಲೆ!
– ಮಳೆ ಇಲ್ಲದೆ ಫಸಲು ಕುಸಿತ ಪರಿಣಾಮ
– ಅಡಿಕೆ ಧಾರಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ
NAMMUR EXPRESS NEWS
ಶಿವಮೊಗ್ಗ: ಕಳೆದ ಐದಾರು ತಿಂಗಳಿನಿಂದ ತಟಸ್ಥವಾಗಿದ್ದ ಅಡಕೆ ಧಾರಣೆ ಏಪ್ರಿಲ್ ಮೊದಲ ವಾರದ ನಂತರ ಏರಿಕೆಯತ್ತ ಮುಖಮಾಡಿದೆ. ಇದೀಗ 54 ಸಾವಿರ ಕ್ವಿಂಟಲ್ ದರದತ್ತ ಬರುತ್ತಿದೆ. ಅಡಕೆ ಬೆಲೆ ಹೆಚ್ಚಳದಿಂದ ಬೆಳೆಗಾರರು ಖುಷಿಯಾಗಿದ್ದರೂ ಸಾಕಷ್ಟು ಬೆಳೆಗಾರರಲ್ಲಿ ಅಡಕೆ ದಾಸ್ತಾನೇ ಇಲ್ಲ ಎಂಬುದು ವಾಸ್ತವ. ಆದರೆ ಒಂದಷ್ಟು ಕಡೆ ಅಡಿಕೆ ಇದ್ದು ರೈತರಲ್ಲಿ ಸಂತಸ ತಂದಿದೆ. ಮಲೆನಾಡು, ಕರಾವಳಿ, ಬಯಲು ಸೀಮೆಯಲ್ಲಿ ಈಗ ಪ್ರಮುಖ ವಾಣಿಜ್ಯ ಬೆಳೆಯಾಗಿದೆ.
ಅಧಿಕ ದರ ನೀಡಿ ಖರೀದಿ!
ಮೂರ್ನಾಲ್ಕು ತಿಂಗಳಿನಿಂದ ತಟ್ಟಸ್ಥವಾಗಿದ್ದ ಅಡಕೆ ಧಾರಣೆ ಈಗ ಧೀಡಿರ್ ಏರಿಕೆಯಾಗಿದ್ದರಿಂದ ಮನೆ ಬಾಗಿಲಿಗೆ ಬಂದು ವ್ಯಾಪಾರ ಮಾಡುವವರು ಮಾರುಕಟ್ಟೆ ದರಕ್ಕಿಂತ ಒಂದೆರಡು ಸಾವಿರ ರೂ. ಅಧಿಕ ನೀಡಿ ಅಡಕೆ ಖರೀದಿ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಚುನಾವಣೆ ಬಂತೆಂದರೆ ಅಡಕೆ ಧಾರಣೆ ಇಳಿಮುಖವಾಗುತ್ತದೆ ಎಂಬ ಮಾತಿತ್ತು. ಆದರೆ ಈ ಬಾರಿ ಲೋಕಸಭೆ ಚುನಾವಣೆಗೆ ಒಂದೆರಡು ತಿಂಗಳು ಬಾಕಿ ಇರುವಾಗ ಇಳಿಮುಖದತ್ತ ಸಾಗಿದ್ದ ಬೆಲೆ ಚುನಾವಣೆ ಘೋಷಣೆ ನಂತರ ಏರಿಕೆಯಾಗತೊಡಗಿದೆ.
ಒಂದೇ ತಿಂಗಳಲ್ಲಿ 5 ಸಾವಿರ ಏರಿಕೆ!
ಒಂದೇ ತಿಂಗಳಲ್ಲಿ 5 ಸಾವಿರ ಏರಿಕೆ ಆಗಿದೆ. ಮಾರ್ಚ್ನಲ್ಲಿ ರಾಶಿ ಇಡಿ 30ರಿಂದ 48 ಸಾವಿರ ರೂ. ಇದ್ದ ಧಾರಣೆ ಏಪ್ರಿಲ್ ಮೊದಲ ವಾರದಲ್ಲಿ ಕ್ವಿಂಟಾಲ್ 48 ಸಾವಿರದಿಂದ 53 ಸಾವಿರ ರೂ.ಗೆ ಏರಿಕೆಯಾಗಿದೆ. ಒಂದೆರಡು ತಿಂಗಳ ಹಿಂದೆಯೇ ಬಹುತೇಕ ಅಡಕೆ ಬೆಳೆಗಾರರು ಅಡಕೆ ಮಾರಾಟ ಮಾಡಿದ್ದಾರೆ. ಬೆರಣಿಕೆಯ ಬೆಳೆಗಾರರ ಬಳಿ ಒಂದಷ್ಟು ಅಡಕೆ ದಾಸ್ತಾನಿದೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ರಾಶಿ ಅಡಕೆ ಬೆಲೆ 30,000- 53,099 ರೂ. ಇದೆ. ಗ್ರಾಮೀಣ ಭಾಗದಲ್ಲಿ ಕೈ ವ್ಯಾಪಾರಸ್ಥರು ಕ್ವಿಂಟಾಲ್ಗೆ 1000- 2,000 ಸಾವಿರ ರೂ. ಅಧಿಕ ನೀಡಿ ಖರೀದಿಸುತ್ತಿದ್ದಾರೆ.
ಹೊಸ ಅಡಿಕೆ ಬಂದ್ರೆ ದರ ಇಳಿಕೆ?
ಇನ್ನೆರಡು ತಿಂಗಳಲ್ಲಿ ಹೊಸ ಅಡಕೆ ಮಾರುಕಟ್ಟೆಗೆ ಬರುತ್ತದೆ. ಇನ್ನು ಧಾರಣೆ ಹೆಚ್ಚಳವಾಗುವುದಿಲ್ಲ ಎಂದುಕೊಂಡು ಬಹುತೇಕ ರೈತರು ಅಡಕೆ ಮಾರಾಟ ಮಾಡಿದ್ದಾರೆ.ಮಾರ್ಚ್ನಲ್ಲಿ 20ರಿಂದ 48 ಸಾವಿರ ರೂ. ಇದ್ದ ಧಾರಣೆ ಎಪ್ರಿಲ್ ವೇಳೆಗೆ 30ರಿಂದ 54 ಸಾವಿರ ರೂ. ದಾಟಿದೆ. ಅಂದರೆ ತಿಂಗಳಲ್ಲಿ ಸುಮಾರು 6,000 ರೂ. ಏರಿಕೆಯಾಗಿದೆ. ಈ ಬಾರಿ ಮಳೆ ಇಲ್ಲದೆ ಅಡಕೆ ಇಳುವರಿಯೂ ಕುಸಿದಿರುವುದರಿಂದ ಬೆಲೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.
ಅಡಕೆ ಧಾರಣೆ (ಶಿವಮೊಗ್ಗ ಎಪಿಎಂಸಿ)
ಸರಕು ₹55,009 – ₹84,695
ರಾಶಿ ₹31,000 – ₹53,639
ಬೆಟ್ಟೆ ₹17,609 – ₹40,969
ಗೊರಬಲು ₹44,366 – ₹56,910