Categories
ಕೊಪ್ಪ

ಕೊಪ್ಪದ ಭಂಡಿಗಡಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಭೇಟಿ

ಕೊಪ್ಪದ ಭಂಡಿಗಡಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಭೇಟಿ
– ಸಕ್ರೆಬೈಲಿಗೆ ಭೇಟಿ ನೀಡಿ ಲಿಂಗಪ್ಪ ಗೌಡ ಅವರ ನಿವಾಸದಲ್ಲಿ ಸೌಹಾರ್ದ ಮಾತುಕತೆ
– ಕುಟುಂಬದಿಂದ ಸಚಿವರಿಗೆ ಗೌರವ

NAMMUR EXPRESS NEWS
ಕೊಪ್ಪ: ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಚುನಾವಣೆ ಪ್ರಚಾರ ಕಾರ್ಯಕ್ರಮದ ಭೇಟಿ ನಡುವೆ ಕೊಪ್ಪ ತಾಲೂಕಿನ ಸಕ್ರೆಬೈಲಿಗೆ ಭೇಟಿ ನೀಡಿ ಲಿಂಗಪ್ಪ ಗೌಡ ಅವರ ನಿವಾಸದಲ್ಲಿ ಸೌಹಾರ್ದ ಮಾತುಕತೆ ನಡೆಸಿದರು. ಈ ವೇಳೆ ಕ್ರಿಯೇಟಿವ್ ಕಾಲೇಜು ಸಂಸ್ಥಾಪಕರಾದ ಅಶ್ವಥ್ ಎಸ್. ಎಲ್ ಮತ್ತು ಕುಟುಂಬದವರು ತಮ್ಮ ನಿವಾಸಕ್ಕೆ ಆಗಮಿಸಿದ್ದ ಇಂಧನ ಸಚಿವ ಕೆ.ಜೆ. ಜಾರ್ಜ್, ಶಾಸಕ ರಾಜೇಗೌಡ, ಡಾ. ಅಂಶುಮಂತ್, ಬಾಳೆಮನೆ ನಟರಾಜ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಶಶಿಕುಮಾರ್, ಇನೇಶ್, ಶ್ರೀಧರ್ ಅಂಬಳಿಕೆ, ಮಮತಾ ಇತರರು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.