Categories
ಶಿವಮೊಗ್ಗ

ಶಿವಮೊಗ್ಗದಲ್ಲಿ ಹಿಟ್ ಅಂಡ್ ರನ್ ಪ್ರಕರಣ: ವಿದ್ಯಾರ್ಥಿನಿ ಸಾವು!

ಶಿವಮೊಗ್ಗದಲ್ಲಿ ಹಿಟ್ ಅಂಡ್ ರನ್ ಪ್ರಕರಣ: ವಿದ್ಯಾರ್ಥಿನಿ ಸಾವು!
– ಇನ್ನಿಬ್ಬರಿಗೆ ಗಂಭೀರ ಗಾಯ
– ಆಟೋಗೆ ಕ್ಯಾಂಟರ್ ವಾಹನ ಡಿಕ್ಕಿ: ಚಾಲಕ ಪೊಲೀಸ್ ವಶಕ್ಕೆ

NAMMUR EXPRESS NEWS
ಶಿವಮೊಗ್ಗ : ಶಿವಮೊಗ್ಗದಲ್ಲಿ ಭೀಕರ ಅಪಘಾತ ಒಂದು ನಡೆದಿದ್ದು, ಆಟೋಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ತಾವರೆ ಚಟ್ನಳ್ಳಿ ಬಳಿ ನಡೆದಿದೆ. ಆದರೆ ಡಿಕ್ಕಿ ಹೊಡೆದ ಕ್ಯಾಂಟರ್ ಚಾಲಕ ನೋಡಿಯೂ ನೋಡದಂತೆ ಪರಾರಿಯಾಗಿದ್ದಾನೆ. ಗಾನವಿ (17) ಮೃತ ದುರ್ದೈವಿ ಎಂದು ಹೇಳಲಗುತ್ತಿದೆ. ಘಟನೆಯಲ್ಲಿ ಈಕೆಯ ತಾಯಿ ಹಾಗೂ ಅಜ್ಜಿ ಗಾಯಗೊಂಡಿದ್ದಾರೆ. ಗಾನವಿ ತಾವರೆ ಚಟ್ನಳ್ಳಿಯ ಪೇಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ತನ್ನ ಕಾಲೇಜಿನ ಎದುರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ.

ವೇಗವಾಗಿ ಬಂದ ಕ್ಯಾಂಟರ್ ಆಟೋಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋ ಎಡಕ್ಕೆ ಬಿದ್ದಿದೆ. ಆಟೋ ಎಡ ಭಾಗದಲ್ಲಿದ್ದ ಗಾನವಿ ಮೊದಲು ನೆಲಕ್ಕೆ ಬಿದ್ದಿದ್ದಾಳೆ. ಇದರಿಂದ ಆಕೆಯ ಹೊಟ್ಟೆ ಭಾಗಕ್ಕೆ ತೀವ್ರವಾಗಿ ಹೊಡೆತ ಬಿದ್ದಿದೆ. ಪರಿಣಾಮ ರಕ್ತಸ್ರಾವದಿಂದ ಗಾಯಗೊಂಡಿದ್ದ ಗಾನವಿ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾಳೆ. ಈಕೆಯ ತಾಯಿ ಹಾಗೂ ಅಜ್ಜಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತಂತೆ ಚೀಲೂರಿನಲ್ಲಿ ಪೊಲೀಸರು ಕ್ಯಾಂಟರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಈ ಕುರಿತು ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ಯಾಂಟರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.