Categories
ಕೊಪ್ಪ

ಪ್ರಜ್ವಲ್‌ಗೆ ಶಿಕ್ಷೆಗೆ ಕೊಪ್ಪ ಯುವ ಕಾಂಗ್ರೆಸ್ ಪಟ್ಟು!

ಪ್ರಜ್ವಲ್‌ಗೆ ಶಿಕ್ಷೆಗೆ ಕೊಪ್ಪ ಯುವ ಕಾಂಗ್ರೆಸ್ ಪಟ್ಟು!
– ದೇಶದ ಜನರನ್ನು ತಲೆ ತಗ್ಗಿಸುವಂತೆ ಮಾಡಿದ ಪ್ರಕರಣ
– ಕೊಪ್ಪ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾ ಚರಣ್ ಮತ್ತು ಸದಸ್ಯರ ಅಗ್ರಹ

NAMMUR EXPRESS NEWS
ಕೊಪ್ಪ: ಹಾಸನ ಸಂಸದ ಹಾಗೂ ಲೋಕಸಭಾ ಕ್ಷೇತ್ರದ ಜೆಡಿಎಸ್‌- ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಪೆನ್ ಡ್ರೈವ್ ವಿಚಾರ ರಾಜ್ಯ ಮಾತ್ರವಲ್ಲದೆ ದೇಶದ ಜನರನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾ ಚರಣ್ ಹೇಳಿದ್ದಾರೆ. ನಮ್ಮೂರ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಅವರು, ಯಾವುದೇ ಪಕ್ಷಗಳ ಸೈದ್ಧಾಂತಿಕ ವಿಚಾರಗಳು ಬೇರೆ ಇದ್ದರೂ, ಪ್ರಜ್ವಲ್ ಮಾಜಿ ಪ್ರಧಾನಿ ದೇವೇಗೌಡ ಅವರ ಮೊಮ್ಮಗ, ಕಿರಿಯ ಸಂಸದ, ಸಂಸತ್‌ನಲ್ಲಿ ಕರ್ನಾಟಕದ ಧ್ವನಿಯಾಗಬಲ್ಲರು ಎಂದು ಯುವ ಜನರು ಹೆಮ್ಮೆಪಟ್ಟಿದ್ದರು. ಆದರೆ ದೇಶ ಹಾಗೂ ರಾಜ್ಯವನ್ನು ಮಾತ್ರವಲ್ಲದೆ ಪ್ರಕೃತಿ ಹಾಗೂ ನದಿ, ತೊರೆಗಳನ್ನು ಮಹಿಳೆಯರ ಹೆಸರಿನಿಂದಲೇ ಕರೆದು ಗೌರವಿಸುವ ಕನ್ನಡಿಗ ಸಹಸ್ರಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ತನ್ನ ಖಾಸಗಿ ಫೋನಿನಲ್ಲಿ ಚಿತ್ರೀಕರಿಸಿಕೊಂಡಿರುವ ಪ್ರಜ್ವಲ್ ಕೃತ್ಯ ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನು ಯುವ ಕಾಂಗ್ರೆಸ್ ಖಂಡಿಸುತ್ತದೆ. ಅವರನ್ನು ಕೂಡಲೇ ಶಿಕ್ಷೆಗೆ ಗುರಿಪಡಿಸಬೇಕೆಂದು ಸರ್ಕಾರವನ್ನು ಅಗ್ರಹಿಸಿದರು.

ಎಸ್.ಐ.ಟಿ. ರಚಿಸಿರುವುದು ಸ್ವಾಗತಾರ್ಹವಾಗಿದೆ. 3 ಸಾವಿರಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನಲಾದ ಪ್ರಜ್ವಲ್ ಅವರ ವಿರುದ್ಧ ಕಠಿಣ ಕ್ರಮ ವಹಿಸಬೇಕು ಎಂದು ಯುವ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದರು. ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಸಂತೋಷ್ ಕುಲಾಸೋ, ಮುಖಂಡರಾದ ವಿಜಯಾನಂದ, ಗುರುನಂದನ್, ನರ್ತನ್, ಲೇಖನ್, ಮನೋಜ್, ಅವಿನಾಶ್‌ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.