4 ಮದುವೆಯಾದವನಿಗೆ ರಸ್ತೆಯಲ್ಲೇ ಪತ್ನಿಯರ ಚಪ್ಪಲಿ ಏಟು!?
– ನಡುರಸ್ತೆಯಲ್ಲೇ ಚಪ್ಪಲಿಯಿಂದ ಪತ್ನಿಯರ ಚಪ್ಪಲಿ ಸೇವೆ
– 4 ಮದುವೆ, 4 ಕಡೆ ಮನೆ… ಹೊಸ ಲವ್ ಸ್ಟೋರಿ!
NAMMUR EXPRESS NWES
ದಾವಣಗೆರೆ: ದಾವಣಗೆರೆಯಲ್ಲಿ ನಾಲ್ಕು ಮದುವೆಯಾಗಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ ಪತ್ನಿಯರು ಇನ್ನೊಬ್ಬಳು ಪತ್ನಿ ಜತೆ ಸಿಕ್ಕಿಬಿದ್ದ ಪತಿಗೆ ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ. ದಾವಣಗೆರೆಯ ಆಜಾದ್ ನಗರದ ನಿವಾಸಿ ಮೊಹಮ್ಮದ್ ವಾಸೀಂ ಅಲಿಯಾಸ್ ಸಲ್ಮಾನ್ ಖಾನ್ ಸಾದೀಕ್ ಎಂಬ ವ್ಯಕ್ತಿ ನಾಲ್ಕು ಮದುವೆ ಆಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈತ ವಿಧವೆಯರು ಹಾಗೂ ಗಂಡ ಬಿಟ್ಟಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಅವರನ್ನು ನಂಬಿಸಿ ಮದುವೆಯಾಗಿ ಮೋಸ ಮಾಡಿದ್ದಾನೆ. ಇದಲ್ಲದೇ ಮಹಿಳೆಯರನ್ನು ಮದುವೆಯಾಗಿ ಅವರ ಬಳಿ ಇದ್ದ ಬಂಗಾರ, ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ಮೋಸ ಹೋದ ಪತ್ನಿಯರು ಆರೋಪಿಸಿದ್ದಾರೆ.
ಈತನಿಗೆ ಕುಟುಂಬದ ಸದಸ್ಯರು ಬೆಂಬಲವಿದೆ. ಈತ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮೊದಲ ಮದುವೆ, ಮಲೇಬೆನ್ನೂರಿನಲ್ಲಿ ಎರಡನೇ ಮದುವೆ ಹಾಗೂ ದಾವಣಗೆರೆಯ ಆಜಾದ್ ನಗರದಲ್ಲಿ ಮೂರನೇ ಹಾಗೂ ಭಾಷಾ ನಗರದಲ್ಲಿ ನಾಲ್ಕನೇ ವಿವಾಹವಾಗಿದ್ದಾನೆ ಎನ್ನಲಾಗಿದೆ. ದಾವಣಗೆರೆ ನಗರದ ಬೂದಳ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಾಲ್ಕನೇ ಪತ್ನಿಯೊಂದಿಗೆ ಸಂಸಾರ ಮಾಡ್ತಿದ್ದ. ನಡುರಸ್ತೆಯಲ್ಲಿಯೇ ಆರೋಪಿ ಸಿಕ್ಕಿಬಿದ್ದಿದ್ದು, ಈ ವೇಳೆ ಪತ್ನಿಯರು ಆತನಿಗೆ ಧರ್ಮದೇಟು ನೀಡಿದ್ದಾರೆ. ಈತನ ವಿರುದ್ಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023