ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!
ಐಪಿಎಲ್ -2025
* ರಾಯಲ್ಸ್ ವಿರುದ್ಧ ಸನ್ ರೈಸ್ – ಹೈದ್ರಾಬಾದ್ನಲ್ಲಿ ರನ್ ಮಳೆ
* ಚೆನ್ನೈ ಸ್ಪಿನ್ ಬಲೆಗೆ ಬಿದ್ದ ಮುಂಬೈ – ಚೆನ್ನೈಗೆ ರೋಚಕ ಗೆಲವು
NAMMUR EXPRESS SPORTS NEWS
* ರಾಯಲ್ಸ್ ವಿರುದ್ಧ ಸನ್ ರೈಸ್ – ಹೈದ್ರಾಬಾದ್ನಲ್ಲಿ ರನ್ ಮಳೆ
ಹೈದ್ರಾಬಾದ್: ಐಪಿಎಲ್ -18 ರಲ್ಲಿ ತನ್ನ ಆಕ್ರಮಣಕಾರಿ ಆಟದ ಅಭಿಯಾನ ಆರಂಭಿಸಿರುವ ಹೈದ್ರಾಬಾದ್, ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಬರೋಬ್ಬರಿ 286 ರನ್ ಕಲೆಹಾಕಿದೆ. ರನ್ ಮಳೆಯೇ ಹರಿದ ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಸನ್ ರೈಸರ್ಸ್ 44 ರನ್ ಗೆಲುವು ಸಾಧಿಸಿದೆ.
ಐಪಿಎಲ್ ಇತಿಹಾಸದಲ್ಲೇ 2ನೇ ಗರಿಷ್ಠ ರನ್ ಸೇರಿಸಿದ ಹೈದ್ರಾಬಾದ್ ರಾಜಸ್ಥಾನವನ್ನು 242 ರನ್ಗೆ ನಿಯಂತ್ರಿಸಿತು.
ರಾಜಸ್ಥಾನ 4.1 ಓವರ್ಗಳಲ್ಲಿ 50 ರನ್ ಗಳಿಸುವಷ್ಟರಲ್ಲಿ ಮೂವರು ವಿಕೆಟ್ ಕಳೆದುಕೊಂಡಿತು. ಆದರೆ ಕುಸಿದಿದ್ದ ತಂಡಕ್ಕೆ ಆಸರೆಯಾಗಿದ್ದು ಸಂಜು ಸ್ಯಾಮನ್ ಹಾಗೂ ಧ್ರುವ್ ಜುರೆಲ್, ಈ ಜೋಡಿ 4ನೇ ವಿಕೆಟ್ಗೆ 59 ಎಸೆತಗಳಲ್ಲಿ 111 ರನ್ ಜೊತೆಯಾಟವಾಡಿತು. 14ನೇ ಓವರ್ ಕೊನೆ ಎಸೆತಕ್ಕೆ ಸ್ಯಾಮ್ಸನ್ ಹಾಗೂ 15ನೇ ಓವರ್ನ 2ನೇ ಎಸೆತದಲ್ಲಿ ಜುರೆಲ್ ಔಟಾಗುವುದರೊಂದಿಗೆ ತಂಡದ ಹೋರಾಟಕ್ಕೆ ತೆರೆ ಬಿತ್ತು, ಹೆಚ್ಚೇಯರ್ ಔಟಾಗದೆ 42, ಶುಭಂ ದುಬೆ 34 ರನ್ ಸಿಡಿಸಿ ಸೋಲಿನ ಅಂತರ ತಗ್ಗಿಸಿದರು.
ಬೌಂಡರಿ-ಸಿಕ್ಸರ್ ಸುರಿಮಳೆ.. ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಸನ್ ರೈಸರ್ಸ್ ತನ್ನ ಎಂದಿನ ಆಕ್ರಮಣಕಾರಿ ಆಟವಾಡಿತು. ಪವರ್ -ಪ್ಲೇನಲ್ಲೇ ತಂಡ 94 ರನ್ ಸಿಡಿಸಿತು. 31 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ನೊಂದಿಗೆ 67 ರನ್ ಸಿಡಿಸಿದ ಹೆಡ್, 10ನೇ ಓವರ್ನಲ್ಲಿ ನಿರ್ಗಮಿಸಿದರು. ಆದರೆ ತಂಡದ ರನ್ ವೇಗ ಕಡಿಮೆ ಆಗಲೇ ಇಲ್ಲ.
ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಇಶಾನ್, 47 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್ ನೊಂದಿಗೆ ಔಟಾಗದೆ 106 ರನ್ ಸಿಡಿಸಿದರು. ನಿತೀಶ್ ಕುಮಾರ್ 15 ಎಸೆತಕ್ಕೆ 30, ಹೈನ್ರಿಚ್ ಕ್ಲಾಸೆನ್ 14 ಎಸೆತಕ್ಕೆ 34 ರನ್ ಸಿಡಿಸಿ, ತಂಡವನ್ನು 280ರ ಗಡಿ ದಾಟಿಸಿದರು.
* ಚೆನ್ನೈ ಸ್ಪಿನ್ ಬಲೆಗೆ ಬಿದ್ದ ಮುಂಬೈ – ಚೆನ್ನೈಗೆ ರೋಚಕ ಗೆಲವು
ಚೆನ್ನೈ: ಚೆಪಾಕ್ ಕ್ರೀಡಾಂಗಣದ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಚೆನ್ನೈಗೆಲುವಿನ ನಗೆ ಬೀರಿದೆ. ಭಾನುವಾರ 5 ಬಾರಿ ಚಾಂಪಿಯನ್, ಬದ್ಧವೈರಿ ಮುಂಬೈ ಇಂಡಿಯನ್ಸ್ ವಿರುದ್ದ ಚೆನ್ನೈ ತಂಡ 4 ವಿಕೆಟ್ ರೋಚಕ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಮುಂಬೈ, ರನ್ಗಳಿಸಲು ತಿಣುಕಾಡಿತು. ಆರಂಭಿಕ ಆಘಾತದ ಬಳಿಕ ಚೇತರಿಸಿಕೊಂಡ ತಂಡ 9 ವಿಕೆಟ್ಗೆ 155 ರನ್ ಕಲೆಹಾಕಿತು. ಚೆನ್ನೈ ಪಿಚ್ನಲ್ಲಿ ಈ ಗುರಿ ಸ್ಪರ್ಧಾತ್ಮಕವಾಗಿತ್ತು. ಆದರೆ ಋತುರಾಜ್ -ರಚಿನ್ ರವೀಂದ್ರ ಜವಾಬ್ದಾರಿಯುತ ಆಟದಿಂದಾಗಿ ಚೆನ್ನೈ 19.1 ಓವರ್ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು.
ರಾಹುಲ್ ತ್ರಿಪಾಠಿ 2 ರನ್ಗೆ ಔಟಾದ ಬಳಿಕ, 2ನೇ ವಿಕೆಟ್ಗೆ ಋತುರಾಜ್-ರಚಿನ್ 67 ರನ್ ಸೇರಿಸಿದರು. ಋತುರಾಜ್ 26 ಎಸೆತಗಳಲ್ಲಿ 6 ಬೌಂಡರಿ, 3 ಸಿಕರ್ನೊಂದಿಗೆ 56 ರನ್ ಸಿಡಿಸಿ ಔಟಾದರು. ಬಳಿಕ ಕ್ರೀಸ್ನಲ್ಲಿ ನೆಲೆಯೂರಿದ ರಚಿನ್, 45 ಎಸೆತಗಳಲ್ಲಿ 65 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಚೊಚ್ಚಲ ಪಂದ್ಯವಾಡಿದ 24 ವರ್ಷದ ವಿಶ್ವೇಶ್ ಪುತೂರ್ 32 ರನ್ ಗೆ 3 ವಿಕೆಟ್ ಕಿತ್ತು ಗಮನ ಸೆಳೆದರು.
ಚೆನ್ನೈ ಮಾರಕ ದಾಳಿಗೆ ಮುಂಬೈ ತತ್ತರ !!
ಚೆನ್ನೈ ಮಾರಕ ದಾಳಿ ಎದುರು ಮುಂಬೈ ಬ್ಯಾಟರ್ ಗಳು ಪರದಾಡಿದರು. ತಿಲಕ್ (31) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು.
ಸೂರ್ಯಕುಮಾರ್ 29 ರನ್ ಬಾರಿಸಿದರು. ಕೊನೆಯಲ್ಲಿ ಅಬ್ಬರಿಸಿದ ದೀಪಕ್ 15 ಎಸೆತಗಳಲ್ಲಿ ಔಟಾಗದೆ 28 ರನ್ ಸಿಡಿಸಿದರು.








