ನಾಗರಹಳ್ಳಿಯಲ್ಲಿ ನಾಗ ದೇವರಿಗೆ ವಿಶೇಷ ಪೂಜೆ
– ಮಾ. 12ರಿಂದ ಮಾ.16ರವರೆಗೆ ಸರ್ಪ ಸಂಸ್ಕಾರ, ಹರಕೆ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ, ನಾಗ ದರ್ಶನ
– ಸರ್ವರನ್ನು ಸ್ವಾಗತಿಸಿದ ಅರ್ಚಕ ವೃಂದ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಪ್ರತಿ ವರ್ಷದಂತೆ ಸರ್ಪದೋಷ ನಿವೃತ್ತಿಗೆ ನಾಗರಹಳ್ಳಿಯ ಶ್ರೀನಾಗೇಂದ್ರ ಸ್ವಾಮಿ ದೇವಾಲಯದಲ್ಲಿ ದಿನಾಂಕ 12 ಮಾರ್ಚ್ 2026ರಿಂದ ದಿನಾಂಕ 16 ಮಾರ್ಚ್ 2026ರವರೆಗೆ ಸರ್ಪ ಸಂಸ್ಕಾರ, ಹರಕೆ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ, ನಾಗದರ್ಶನ ಮತ್ತು ಶ್ರೀಸ್ವಾಮಿಗೆ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾ.12ರ ಗುರುವಾರದಂದು ಸರ್ಪ ಸಂಸ್ಕಾರ ಕ್ರಿಯೆ ಆರಂಭಗೊಳ್ಳಲಿದ್ದು, ದಿನಾಂಕ 16ರ ಸೋಮವಾರದಂದು ಪ್ರತಿಷ್ಠಾಹೋಮ ಪೂರ್ವಕ ಹರಕೆ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ, ಬ್ರಹ್ಮಚಾರಿ ಬ್ರಾಹ್ಮಣ ಆರಾಧನೆ, ಶ್ರೀಸ್ವಾಮಿಗೆ ವಿಶೇಷ ಪೂಜಾಸಹಿತ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ನಾಗದರ್ಶನವನ್ನು ಏರ್ಪಡಿಸಿದ್ದಾರೆ. ಸರ್ವರನ್ನು ಸ್ವಾಗತಿಸಲಾಗಿದೆ.








