ವಾಲಿಬಾಲ್: ಕರ್ನಾಟಕ ತಂಡಕ್ಕೆ ಆಯ್ಕೆಯಾದ ತೀರ್ಥಹಳ್ಳಿ ಹುಡುಗ!
– ಹಾರೆಕೊಪ್ಪದ ಶಬರೀಶ್ ಗೌಡ ಈಗ ರಾಷ್ಟ್ರ ಮಟ್ಟದಲ್ಲಿ ಸಾಧನೆ
– ತೀರ್ಥಹಳ್ಳಿ ವಾಗ್ದೇವಿ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿ
– ಮಲೆನಾಡ ಮತ್ತೊಬ್ಬ ಕ್ರೀಡಾಪಟುಗೆ ಶುಭಾಶಯಗಳು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು/ತೀರ್ಥಹಳ್ಳಿ: ಮಾ.15 ರಿಂದ 20ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಯೂಥ್ ನ್ಯಾಷನಲ್ ವಾಲಿಬಾಲ್ ಪಂದ್ಯಾವಳಿಗೆ ತೀರ್ಥಹಳ್ಳಿ ಮೂಲದ ಶಬರೀಶ್ ಗೌಡ ಆಯ್ಕೆ ಆಗಿದ್ದಾರೆ. ತೀರ್ಥಹಳ್ಳಿ ತಾಲೂಕು ದಬ್ಬಣಗದ್ದೆ ಸಮೀಪದ ಹಾರೆಕೊಪ್ಪದ ಶ್ರೀಮತಿ ರಂಜಿತಾ ಶ್ರೀ ಜಗದೀಶ್ ಹಾರಕೊಪ್ಪ ಇವರ ಪುತ್ರ. ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಾಗ್ದೇವಿಯಲ್ಲಿ ಎಸ್.ಎಸ್.ಎಲ್.ಸಿ ಓದಿದ್ದು, ಬೆಂಗಳೂರು ಜಯನಗರದ ಸುರಾನಾ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂ ಓದುತ್ತಿದ್ದಾರೆ. ಕ್ರೀಡಾ ಇಲಾಖೆ ಇವರನ್ನು ಆಯ್ಕೆ ಮಾಡಿದ್ದು, ಓಡಿಸ್ಸಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಆಳ್ವಾಸ್ ಕಾಲೇಜಿನಲ್ಲಿ ತರಬೇತಿ ಕ್ಯಾಂಪ್ ಅಲ್ಲಿ ತರಬೇತಿ ಪಡೆದಿದ್ದರು.
ಶಬರೀಶ್ ಗೌಡ ಇವರಿಗೆ ಅಭಿನಂದನೆಗಳು
ಶುಭ ಕೋರುವವರು
ಹಾರೆಕೊಪ್ಪ ಕುಟುಂಬದವರು ಮತ್ತು ಗ್ರಾಮಸ್ಥರು
ವಿಠಲ ನಗರ ಯುವಕ ಸಂಘ, & ವಿಠಲ ನಗರ ಗ್ರಾಮಸ್ಥರು








