ಮಂಗಳೂರು: ನಾಳೆ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ಕರಾವಳಿಯಾದ್ಯಂತ ತೆರೆಗೆ
– ಕರಾವಳಿಯಾದ್ಯಂತ ಏಕಕಾಲದಲ್ಲಿ ತೆರೆ ಕಾಣಲಿರುವ ತುಳು ಚಿತ್ರ
– ತುಳು ಸಿನೆಮಾ ಪ್ರೋತ್ಸಾಹಿಸುವ ದೃಷ್ಟಿಯಿಂದ ವಿಶೇಷ ಆಫರ್ ಲಭ್ಯ
NAMMUR EXPRESS NEWS
ಮಂಗಳೂರು: ಕೋಸ್ಟಲ್ವುಡ್ನಲ್ಲಿ ಯಶಸ್ವಿ ಪ್ರದರ್ಶನ ಕಂಡಿರುವ “ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ಸಿನಿಮಾ ತಂಡದ ಬಹುನಿರೀಕ್ಷಿತ ಎರಡನೇ ಸಿನೆಮಾ “ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಜ.31ರಿಂದ ಕರಾವಳಿಯಾದ್ಯಂತ ಏಕಕಾಲದಲ್ಲಿ ತೆರೆ ಕಾಣಲಿದೆ. ಚಿತ್ರದ ನಿರ್ದೇಶಕ ರಾಹುಲ್ ಅಮೀನ್ ಅವರು ಮಂಗಳೂರು ಮತ್ತು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೋಹನ್ ಕಾರ್ಪೊ ರೇಶನ್ ಅರ್ಪಿಸುವ, ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್, ಎಚ್.ಪಿ.ಆರ್. ಫಿಲ್ಮ್ಸ್ ಹರಿಪ್ರಸಾದ್ ರೈ ಸಹಯೋಗದಲ್ಲಿ ಹಾಗೂ ಆನಂದ್ ಎನ್. ಕುಂಪಲ ನಿರ್ಮಾಣದಲ್ಲಿ ಸಿನೆಮಾ ತಯಾರಾಗಿದೆ ಎಂದು ತಿಳಿಸಿದ್ದಾರೆ. ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಮಾಲ್ನ ಬಿಗ್ ಸಿನೆಮಾಸ್, ಪಿವಿಆರ್, ಸಿನೆಪೊಲಿಸ್, ಭಾರತ್ ಸಿನೆಮಾಸ್ ದೇರಳಕಟ್ಟೆ, ಪುತ್ತೂರು, ಪಡುಬಿದ್ರಿ, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನೆಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನೆಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್ನಲ್ಲಿ ನಟರಾಜ್, ಸಿನೆಗ್ಯಾಲಕ್ಸಿ, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ ಥಿಯೇಟರ್ನಲ್ಲಿ ಸಿನೆಮಾ ಬಿಡುಗಡೆಯಾಗಲಿದೆ. “ರಾಜ್ ಸೌಂಡ್ ಆ್ಯಂಡ್ ಲೈಟ್ಸ್’ ತಂಡದ ಬಹುತೇಕ ತಂತ್ರಜ್ಞರು, ಕಲಾವಿದರು ಇದರಲ್ಲಿದ್ದಾರೆ. ವಿನೀತ್ ಕುಮಾರ್, ಸಮತಾ ಅಮೀನ್, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಚೈತ್ರಾ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ತುಳು ಸಿನೆಮಾ ಪ್ರೋತ್ಸಾಹಿಸುವ ದೃಷ್ಟಿಯಿಂದ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನೆಮಾ ವೀಕ್ಷಕರಿಗೆ ರೋಹನ್ ಕಾರ್ಪೊ ರೇಶನ್ನಿಂದ ವಿಶೇಷ ಆಫರ್ ಪ್ರಕಟಿಸಿದೆ. “ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಸಿನೆಮಾ ಬಿಡುಗಡೆಗೊಂಡ ಎರಡು ವಾರಗಳೊಳಗೆ ಸಿನೆಮಾ ನೋಡಿ ಆ ಟಿಕೆಟ್ ಜತೆಗೆ ರೋಹನ್ ಕಾರ್ಪೊರೇಷನ್ ಸಂಸ್ಥೆಯನ್ನು ಸಂಪರ್ಕಿಸಿದರೆ ಸಂಸ್ಥೆಯ ನಿರ್ಮಾಣದ ಫ್ಲ್ಯಾಟ್ಗೆ ಶೇ.10ರ ರಿಯಾಯಿತಿ ದರದಲ್ಲಿ ಖರೀದಿ ಮಾಡಲು ಅವಕಾಶವಿದೆ ಎಂದು ರೋಹನ್ ಮೊಂತೇರೋ ತಿಳಿಸಿದ್ದಾರೆ.