Categories
ಕರಾವಳಿ

ಬೆಳ್ತಂಗಡಿ: ಸರಕಾರಿ ಬಸ್ ಅವ್ಯವಸ್ಥೆ ವಿರೋಧಿಸಿ ಉಗ್ರ ಹೋರಾಟ!

ಬೆಳ್ತಂಗಡಿ: ಸರಕಾರಿ ಬಸ್ ಅವ್ಯವಸ್ಥೆ ವಿರೋಧಿಸಿ ಉಗ್ರ ಹೋರಾಟ!
– ಬಸ್ ಸಮಸ್ಯೆ, ಬಸ್ ಸಂಖ್ಯೆ ಹೆಚ್ಚು ಮಾಡಬೇಕೆಂಬ ವಿಚಾರ ಎಬಿವಿಪಿ ಹೋರಾಟ
– ಉಜಿರೆ ಸರ್ಕಲ್ ಬಳಿ ಪ್ರತಿಭಟನೆ

ಬೆಳ್ತಂಗಡಿ: ಜ.28 ರಂದು (ಮಂಗಳವಾರ) ಧರ್ಮಸ್ಥಳದಿಂದ ಕಡಿರುದ್ಯಾವರ ಗ್ರಾಮದ ಆಲಂದಡ್ಕ ಸಾಗುವ ಸಾರಿಗೆ ಬಸ್‌’ವೊಂದು ಮುಂಡಾಜೆ ಸಮೀಪದ ಸೋಮಂತಡ್ಕ ಪಕ್ಕದ ಚರಂಡಿಗೆ ಹೋದ, ಸಾರಿಗೆ ಬಸ್‌ನ ಸ್ಟೇರಿಂಗ್ ಕಟ್ ಆಗಿ ಈ ಅಪಘಾತ ಘಟನೆ ನಡೆದಿದೆ.
ಸರಿ ಸುಮಾರು 4.30ಕ್ಕೆ ಈ ಅಪಘಾತ ನಡೆದಿದ್ದು, ಬಸ್‌ನಲ್ಲಿ ವಿದ್ಯಾರ್ಥಿಗಳು ಇದ್ದಿದ್ದು, ಜನರಿಗೆ ಗಾಯವಾಗಿತ್ತು. ಈ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸಾರಿಗೆ ಇಲಾಖೆ ನಿರ್ಲಕ್ಷ್ಯದಿಂದ ಬಸ್‌ ಅಪಘಾತ ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ಸಿನ ಸಮಸ್ಯೆಯ ವಿರುದ್ಧ ಉಜಿರೆ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.
ಬಸ್‌ನ ಸ್ಟೇರಿಂಗ್ ಕಟ್ ಆಗಿ ಅದರ ಕಂಡೀಷನ್ ಸರಿ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಹಾನಿಯುಂಟಾಗುವ ಘಟನೆ ನಡೆದಿದೆ. ಈ ವಿಚಾರದ ವಿರುದ್ಧ ವಿದ್ಯಾರ್ಥಿ ಪರಿಷತ್ತು ಅನೇಕ ವರ್ಷಗಳಿಂದ ಬಸ್ ಸಮಸ್ಯೆ ಸರಿ ಮಾಡಬೇಕು ಜೊತೆಗೆ ಬಸ್ ಸಂಖ್ಯೆಯನ್ನು ಹೆಚ್ಚು ಮಾಡಬೇಕು ಎಂಬ ಹೋರಾಟವನ್ನು ಮಾಡಲಾಗಿದೆ.
ಆದರೆ ಇಂತಹ ಹೋರಾಟಕ್ಕೆ ಸರಕಾರ ಯಾವುದೇ ರೀತಿಯ ಬೆಲೆಯನ್ನು ಕೊಡದ ಉಜಿರೆ ಸರ್ಕಲ್‌ನಲ್ಲಿ ವಿದ್ಯಾರ್ಥಿ ಪರಿಷತ್ ಹೋರಾಟಕ್ಕೆ ಮುಂದಾಗಿದೆ. ಯಾವುದೇ ಹೋರಾಟದ ಸ್ಥಳಕ್ಕೆ ಡಿಪೋ ಮ್ಯಾನೇಜರ್ ಬರಬೇಕು ಮತ್ತು ಜನರ ಸಮಸ್ಯೆ ಆಲಿಸಬೇಕು ಎಂದು ನಮ್ಮ ಬೇಡಿಕೆ ಎಂದು ಜಿಲ್ಲಾ ಸಂಚಾಲಕರಾದ ಸುವಿತ್ ಶೆಟ್ಟಿ ಹೇಳಿದ್ದಾರೆ
ಪ್ರತಿಭಟನೆಯಲ್ಲಿ ವಿಭಾಗ ಸಂಘಟನೆಯ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಸಂಚಾಲಕ ಸುವಿತ್‌ ಶೆಟ್ಟಿ, ತಾಲೂಕು ಸಂಚಾಲಕ ಪ್ರಾರ್ಥನ್ ಗೌಡ ಅವರು ಭಾಗವಹಿಸಿದ್ದು, ಸರಕಾರದ ಸಂಘಟನೆಯ ವಿರುದ್ಧ ಧ್ವನಿಗೂಡಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.