ಹೆಚ್ಚಿದ ಬಿಸಿಲು: ಕಾಡಲ್ಲಿ ಬೆಂಕಿ…ಊರಲ್ಲೂ ಬೆಂಕಿ..!
– ಕಾರು, ಬಸ್ಸು, ಬೈಕಿಗೂ ಬೆಂಕಿ: ಎಚ್ಚರ ಎಚ್ಚರ
– ಬೆಂಕಿ ಬೀಳಲು ಕಾರಣ ಏನು? ಮನೆಯಲ್ಲಿ ಇರಲಿ ಜಾಗ್ರತೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಲೆನಾಡು: ಮಲೆನಾಡಲ್ಲಿ ಭಾರೀ ಬಿಸಿಲು ಇದೀಗ ಭಾರೀ ಅನಾಹುತಕ್ಕೆ ಕಾರಣವಾಗುತ್ತಿದೆ. ಕಾಡು, ವಾಹನ, ಮನೆಗಳಿಗೆ ಬೆಂಕಿ ಬೀಳುತ್ತಿದೆ. ಇತೀಚೆಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಅನೇಕ ಭಾಗದಲ್ಲಿ ಬೆಂಕಿ ಬಿದ್ದಿದೆ. ದುರಂತ ಸಂಭವಿಸುವ ಮುನ್ನ ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ.
ಬಸ್ಸು, ಕಾರು ಬೆಂಕಿಗೆ ಆಹುತಿ!
ಸಾಗರ, ಹೊಸನಗರ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಅನೇಕ ಕಾರು, ಬಸ್, ಬೈಕ್ ಬೆಂಕಿಗೆ ಆಹುತಿ ಆಗಿವೆ. ಇನ್ನು ಅತಿಯಾದ ಬಿಸಿಲು, ವೈರ್ ಶಾರ್ಟ್ ಸರ್ಕ್ಯುಟ್ ಬೆಂಕಿಯಿಂದ ಬೆಂಕಿ ಬೀಳುವ ಸಾಧ್ಯತೆ ಹೆಚ್ಚಿದೆ. ವಾಹನಗಳ ನಿರ್ವಹಣೆಯಲ್ಲಿ ಎಚ್ಚರ ವಹಿಸಬೇಕಿದೆ. ಬೆಂಗಳೂರು ಹೋಗುತ್ತಿದ್ದ ಹೊಸನಗರ ಬಸ್, ಗೋಕರ್ಣ ಹೋಗುತ್ತಿದ್ದ ಬೆಂಗಳೂರು ಬಸ್ ಬೆಂಕಿ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಕಾಡು, ಮೇಡುಗಳಲ್ಲಿ ಬೆಂಕಿ!
ಕೊಪ್ಪದ ಹರಿಹರ ಪುರ, ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ, ತೀರ್ಥಹಳ್ಳಿಯ ಶೇಡ್ಗಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಮ್ಮನಹಳ್ಳಿಯಲ್ಲಿ, ಕುಪ್ಪಳ್ಳಿ ಸಮೀಪದ ದೇವಂಗಿ ಸೇರಿ ಅನೇಕ ಕಡೆ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದವರು ಜಂಟಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಬೆಂಕಿ ಬೀಳಲು ಕಾರಣ ಏನು? ಮನೆಯಲ್ಲಿ ಇರಲಿ ಜಾಗ್ರತೆ
– ಅತಿಯಾದ ಬಿಸಲು ಕಾರಣ ಎಲ್ಲಾ ಕಡೆ ಬೆಂಕಿ ಕೂಡಲೇ ಹತ್ತಿಕೊಳ್ಳಲು ಪೂರಕ ವಾತಾವರಣ ಇರುತ್ತದೆ. ಮನೆ ಪಕ್ಕ ಹುಲ್ಲು, ದರಗು, ಇತರೆ ವಸ್ತುಗಳ ಬಗ್ಗೆ ಜಾಗೃತಿ ಇರಲಿ. ಮನೆಯಲ್ಲಿ ಒಲೆಗೆ ಬೆಂಕಿ ಹಾಕಿದಾಗ ಎಚ್ಚರ ವಹಿಸಿ.
– ಬೀಡಿ, ಸಿಗರೇಟ್ ಸೇದು ಅರಣ್ಯ ಪ್ರದೇಶದ ಕಡೆ ಎಸೆಯಬೇಡಿ
– ವಾಹನಗಳ ವೈರಿಂಗ್, ಬೆಂಕಿ ಸಾಧ್ಯತೆಗಳ ಬಗ್ಗೆ ಪರೀಕ್ಷಿಸಿಕೊಳ್ಳಿ
– ಬೆಂಕಿ ಹತ್ತಬಹುದಾದ ಸಾಧ್ಯತೆ ಬಗ್ಗೆ ಗಮನ ಇರಲಿ.








