ಕೊಪ್ಪ ಉತ್ಸವದ ರಂಗು ಶುರು!
– ಬಡವರ ಬಂಧು ಪತ್ರಿಕಾಶ್ರಯದಲ್ಲಿ ಕೊಪ್ಪ ಉತ್ಸವ
– ಜ.17 ರಿಂದ ಬೆಳಗ್ಗೆ 10ರಿಂದ ರಾತ್ರಿ 10ವರೆಗೆ ನಿರಂತರ ಕಾರ್ಯಕ್ರಮ
– ಐದು ದಿನಗಳ ಕಾಲ ಅದ್ದೂರಿ ಕಾರ್ಯಕ್ರಮಕ್ಕೆ ಸಜ್ಜು
NAMMUR EXPRESS NEWS
ಕೊಪ್ಪ: ಕೊಪ್ಪದಲ್ಲಿ ಕೊಪ್ಪ ಉತ್ಸವದ ರಂಗು ಶುರುವಾಗಿದೆ. ಬಡವರ ಬಂಧು ಪತ್ರಿಕಾಶ್ರಯದಲ್ಲಿ ಕೊಪ್ಪ ಉತ್ಸವ ಜ.17 ರಿಂದ ಬೆಳಗ್ಗೆ 10ರಿಂದ ರಾತ್ರಿ 10ವರೆಗೆ ಐದು ದಿನಗಳ ಕಾಲ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ‘ಬಡವರ ಬಂಧು’ ಪತ್ರಿಕಾ ಬಳಗ ಕಳೆದ 9 ವರ್ಷಗಳಿಂದ ಕೊಪ್ಪದಲ್ಲಿ ನಿರಂತರವಾಗಿ ಅದ್ಧೂರಿ ‘ಸಾಂಸ್ಕೃತಿಕ ಉತ್ಸವ’ಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು, ಇದೀಗ 10ನೇ ವರ್ಷದ ಅದ್ಧೂರಿ “ಕೊಪ್ಪ ಉತ್ಸವವನ್ನು ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಕೊಪ್ಪ ಉತ್ಸವ ಕಾರ್ಯಕ್ರಮದಲ್ಲಿ ಪ್ರಪ್ರಥಮ ಬಾರಿಗೆ ಅದೃಷ್ಟ ಬಹುಮಾನ ಯೋಜನೆಯನ್ನು ರೂಪಿಸಿದ್ದು ಅತ್ಮೀಯ ಮಿತ್ರರು ಬಹುಮಾನ ಕೂಪನ್ ಪಡೆಯುವ ಮೂಲಕ ಪ್ರೋತ್ಸಾಹಿಸುವಂತೆ ವಿನಂತಿ ಮಾಡಲಾಗಿದೆ.
ಎಲ್ಲಾ ವಯೋಮಾನದವರ ಮನತಣಿಸುವ, ಭರಪೂರ ಮನರಂಜನೆ ನೀಡುವ ವಿಶೇಷ ಕಾರ್ಯಕ್ರಮ ಇದಾಗಬೇಕೆಂಬ ಉದ್ದೇಶದಿಂದ ಶ್ರೀ ಅನ್ನಪೂರ್ಣ ಲೇಔಟ್ ಶ್ರೀ ಗುತ್ಯಮ್ಮ ದೇವಸ್ಥಾನ ಸಮೀಪ ಕೊಪ್ಪದಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಬೃಹತ್ ಎಲ್.ಇ.ಡಿ. ಪರದೆ, ಹ್ಯಾಂಗಿಂಗ್ ಸೌಂಡ್ ಸಿಸ್ಟಮ್ ಮುಂತಾದ ಅತ್ಯಾಧುನಿಕ ವ್ಯವಸ್ಥೆಯ ಭವ್ಯ ವೇದಿಕೆಯಲ್ಲಿ ನಾಡಿನ ಗಣ್ಯಾತಿಗಣ್ಯರು, ಕಿರುತರೆ, ಸಿನೆಮಾ ತಾರೆಯರು ಭಾಗವಹಿಸುವ ಸಭಾ ಕಾರ್ಯಕ್ರಮ, ಸ್ಥಳೀಯ ಹಾಗೂ ನಾಡಿನ ಹೆಸರಾಂತ ಕಲಾವಿದರ ಗಾನ ಸುಧೆ, ನೃತ್ಯ ಸಂಭ್ರಮ, ಹಾಸ್ಯ ಸಂಭ್ರಮ, ಕರಾವಳಿ ಯಕ್ಷಗಾನದ ಗಾನ ನೃತ್ಯ ವೈಭವ ಮುಂತಾದ ವಿಭಿನ್ನ, ಮನೋಜ್ಞಕಾರ್ಯಕ್ರಮಗಳು ಐದು ದಿನಗಳ ಕಾಲ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ನಿರಂತರವಾಗಿ ನಡೆಯಲಿವೆ.
100ಕ್ಕೂ ಹೆಚ್ಚು ಮಾರಾಟ ಮಳಿಗೆಗಳು!
ತಾಂತ್ರಿಕತೆಯ ವಿಸ್ಮಯ ಲೋಕವನ್ನೇ ಸೃಷ್ಟಿಸುವ ಬೃಹತ್ ‘ಅಮ್ಯೂಸ್ ಮೆಂಟ್ ಪಾರ್ಕ್’ನಲ್ಲಿ ಜೈಂಟ್ ವೀಲ್, ಕ್ರಾಸ್ ವೀಲ್
ಮಹರಾಜ ಟ್ರೈನ್, ಬನಾನ ಬೋಟ್, ಜೈಂಟ್ ವೀಲ್, ಕ್ರಾಸ್ ವೀಲ್, ಮಹರಾಜ ಟ್ರೈನ್, ಬನಾನ ಬೋಟ್, ಬಾಂಬೆ ಹಪ್ಪಳ,ಕೇರಳ ಹಲ್ವ, ಡಿಸ್ಕೋ ವೀಲ್ ಆಭರಣ, ಉಡುಪು, ಡಿಸ್ಕೋ ವೀಲ್, ಡೆತ್ ವೆಲ್, ತಾಜಾ ತರಕಾರಿ, ಕೊಲಂಬಸ್, ಪಾದರಕ್ಕೆ ಮಳಿಗೆಗಳು ಗೃಹಿಣಿಯರ ಅಲಂಕಾರಿಕ ವಸ್ತುಗಳು, ಹಣ್ಣು ಹಂಪಲು ಬಾಂಬೆ ಹಪ್ಪಳ, ಬಿಸಿ ಹೋಳಿಗೆ ಮಳಿಗೆಗಳು, ಖಾದ್ಯ ಪ್ರಿಯರಿಗಾಗಿ ಮಸಾಲೆದೋಸ ರುಚಿಕರ ನಾನ್ ವೆಜ್ ಖಾದ್ಯಗಳ ಮಳಿಗೆಗಳು ಸೇರಿದಂತೆ 100ಕ್ಕೂ ಹೆಚ್ಚು ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ತೆರೆದುಕೊಳ್ಳಲಿವೆ.








