ಶಿಕಾರಿಪುರ: ಮಹಿಳೆಯರ ಸೇವೆ ನೆನೆದ ಗಣ್ಯರು!
– ಶಿಕಾರಿಪುರದ ಮೈತ್ರಿ ಪ್ರಾಥಮಿಕ ಶಾಲೆ, ಕುಮದ್ವತಿ ಪ್ರೌಢಶಾಲೆಯಲ್ಲಿ ಮಹಿಳಾ ದಿನಾಚರಣೆ, ಸರಸ್ವತಿ ಪೂಜೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿಕಾರಿಪುರ: ಸ್ತ್ರೀ ಎಂಬುದು ಸಮಾಜದ ಬಹುದೊಡ್ಡ ಶಕ್ತಿಯಾಗಿದ್ದು, ಈ ಶಕ್ತಿಯಿಂದ ಸಮಾ ಜದ ಹಾಗೂ ಕುಟುಂಬದ ಏಳಿಗೆ ಸಾಧ್ಯ ಎಂದು ಪ್ರಾಚಾರ್ಯರಾದ ವಿಶ್ವನಾಥ ಪಿ ಹೇಳಿದ್ದಾರೆ. ಶಿಕಾರಿಪುರ ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಬಲೀಕರಣವು ಮಹಿಳೆಯರಿಗೆ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಾಮಾಜಿಕ ಹಕ್ಕುಗಳನ್ನು ನೀಡಿ, ಪುರುಷರಂತೆಯೇ ಸಮಾನ ಅವಕಾಶಗಳನ್ನು ಪಡೆಯುವಂತೆ ಮಾಡುವುದಾಗಿದೆ. ಇದು ಆತ್ಮವಿಶ್ವಾಸ ಮೂಡಿಸುವುದು, ಲಿಂಗ ತಾರತಮ್ಯ ಹೋಗಲಾಡಿಸುವುದು, ಮತ್ತು ಆರೋಗ್ಯ ಹಾಗೂ ಭದ್ರತೆಯನ್ನು ಖಚಿತಪಡಿಸುವ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಶಿಕ್ಷಕಿ ರೇಷ್ಮಾ ಬಾನುಸ್ತ್ರೀ ಕೇವಲ ಒಂದು ಹೆಸರಲ್ಲ, ಅದೊಂದು ಅದಮ್ಯ ಶಕ್ತಿ, ಪ್ರೀತಿ, ತ್ಯಾಗ ಮತ್ತು ಧೈರ್ಯದ ಸಂಕೇತ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಪಾರ್ವತಮ್ಮ ಪತಿ, ತಂದೆ ಅಥವಾ ಸಹೋದರರ ಬೆಂಬಲವು ಮಹಿಳೆಯರ ಕನಸುಗಳನ್ನು ನನಸಾಗಿಸಲು ನೆರವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚಂದ್ರಶೇಖರ್ ಅವರ ಮಹಿಳಾ ಸಾಧಕಿಯರ ಪರಿಚಯ ಮಾಡಿಕೊಟ್ಟರು. ಉಪಸ್ಥಿತರಿದ್ದ ಪ್ರಶಾಂತ ಕುಬಸದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಶಿಕ್ಷಕಿಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.ಕು . ಚಿರಂಜೀವಿ ಪ್ರಾರ್ಥಿಸಿ, ಶಿಕ್ಷಕರಾದ ಎಂ.ಜಿ. ಚಂದನ ಸ್ವಾಗತಿಸಿ, ಪರಮೇಶ್ ನಾಯಕ್ ವಂದಿಸಿ, ನಿಂಗಪ್ಪ.ಡಿ ಕಾರ್ಯಕ್ರಮ ನಿರೂಪಿಸಿದರು.
ಮೈತ್ರಿ ಪ್ರಾಥಮಿಕ ಶಾಲೆ, ಕುಮದ್ವತಿ ಪ್ರೌಢಶಾಲೆಯಲ್ಲಿ ಸರಸ್ವತಿ ಪೂಜೆ
ಶಿಕಾರಿಪುರ:ವಿದ್ಯಾರ್ಥಿಗಳಲ್ಲಿ ಹಾಗೂ ಯುವಜನರಲ್ಲಿ ತಾಳ್ಮೆ, ಸಹನೆ ತುಂಬಾ ಮಹತ್ವವಾಗಿದ್ದು, ಪರಿಶ್ರಮ ಪಟ್ಟು ಅಭ್ಯಾಸ ಮಾಡಬೇಕು. ಪಡೆಯುವ ಅಂಕದ ಕುರಿತು ಅತಿಯಾದ ಚಿಂತನೆ ಅವಶ್ಯಕತೆ ಇರುವುದಿಲ್ಲ ಎಂದು ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ . ಶಿವಕುಮಾರ್ ಹೇಳಿದ್ದಾರೆ. ನಗರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರಸ್ವತಿ ಪೂಜೆ ಮತ್ತು ಹತ್ತನೇ ಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರವೀಂದ್ರ ಕೆ.ಸಿ, ಶಾಲಾ ಪ್ರಾಚಾರ್ಯರಾದ ವಿಶ್ವನಾಥ. ಪಿ ಉದ್ಘಾಟನೆ ಮಾಡಿದರು. ಶಾಲಾ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಮಾತನಾಡಿದರು. ರೇಷ್ಮಾ ಬಾನು ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕರಾದ ಹಾಲಸ್ವಾಮಿ,ಎಂ ಕೆ ಚಂದನ್ , ಚಂದ್ರಶೇಖರ್, ಮಂಜುಳಾ ಪಾಟೀಲ್, ಲಲಿತಾ, ರೇಖಾ, ಚಂದ್ರಮತಿ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು ಚೇತನಾ ಎಂ.ಎಸ್ ಮತ್ತು ತಂಡದವರು ಪ್ರಾರ್ಥಿಸಿ,ಕು ಪ್ರಣತಿ.ವಿ. ಸ್ವಾಗತಿಸಿ,ಕು.ವರ್ಷಿಣಿ.ಕೆ.ಆರ್ ವಂದಿಸಿ.ಕು . ಹೇಮಶ್ರೀ ಯು.ಪಿ ಕಾರ್ಯಕ್ರಮ ನಿರೂಪಿಸಿದರು.








