ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರ ಮನೆಯಲ್ಲಿ ಧರ್ಮಸ್ಥಳ ಯಕ್ಷಗಾನ
ಮಾ.16ಕ್ಕೆ ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ
– ಸರ್ವರಿಗೂ ಸ್ವಾಗತಿಸಿದ ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರಾದ ಶ್ರೀಮತಿ ಮೋಹಿನಿ ಎ ಆಚಾರ್ಯ ಮತ್ತು ಶ್ರೀ ಅನಂತ ಪದ್ಮನಾಭ ಆಚಾರ್ಯ ಮತ್ತು ಮಕ್ಕಳು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿಯ ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರಾದ ಶ್ರೀಮತಿ ಮೋಹಿನಿ ಎ ಆಚಾರ್ಯ ಮತ್ತು ಶ್ರೀ ಅನಂತ ಪದ್ಮನಾಭ ಆಚಾರ್ಯ ಮತ್ತು ಮಕ್ಕಳು ಇವರ ಮನೆ ಶ್ರೀ ಗಾಯತ್ರಿಯಲ್ಲಿ ಮಾರ್ಚ್ 16ರ ಸೋಮವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದವರಿಂದ ಯಕ್ಷಗಾನ ಬಯಲಾಟದ ಸೇವೆಯನ್ನು ಆಯೋಜಿಸಲಾಗಿದೆ.
ಮಾ.16ನೇ ತಾರೀಕು ಬೆಳಿಗ್ಗೆ 8ಗಂಟೆಗೆ ಮನೆಗೆ ಶ್ರೀ ಕ್ಷೇತ್ರದ ದೈವ ದೇವರ ಆಗಮನವಾಗಲಿದೆ. 11 ಗಂಟೆಗೆ ಗಣ ಹೋಮ,ಫಲ ನೈವೇದ್ಯ ಸಮರ್ಪಣೆ ಶ್ರೀ ಮಹಾ ಗಣಪತಿ ದೇವರಿಗೆ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ ಮನೆಯಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಚಂಡೆ ವಾದನ, ಮಂಗಳ ವಾದ್ಯ ಗೋಷ್ಠಿ, ಭಜನಾ ಕುಣಿತ ಮತ್ತೆ ಊರಿನ ಸಮಸ್ತ ನಾಗರಿಕರ ಸಹಭಾಗಿತ್ವದಲ್ಲಿ ಶ್ರೀ ಕ್ಷೇತ್ರದ ದೈವ ದೇವರ ವೈಭವದ ರಾಜ ಬೀದಿ ಮೆರವಣಿಗೆಯು ಪೂರ್ಣಕುಂಭ ಸ್ವಾಗತದೊಂದಿಗೆ ತೀರ್ಥಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಸಾಗಿ ಯಕ್ಷಗಾನ ಚೌಕಿಯಲ್ಲಿ ವಿರಾಜಮಾನರಾದ ಮೇಲೆ ಮೆರವಣಿಗೆಯು ಸಂಪನ್ನವಾಗಲಿದೆ.
ಸಂಜೆ 6.30ರಿಂದ ಎಸ್.ಆರ್.ಆರ್ ಮಿಲ್ ಕೇರಿಯ ಸುಬ್ರಮಣ್ಯ ಅವರ ಜಾತ್ರಾ ಮೈದಾನದಲ್ಲಿ “ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಎಂಬ ಪ್ರಸಂಗವನ್ನು ಕ್ಷೇತ್ರದ ದಿಗ್ಗಜ ಕಲಾವಿದರು ಆಡಿ ರಂಜಿಸಲಿದ್ದಾರೆ. ಈ ಯಕ್ಷಗಾನ ಆಟವು ಕಾಲಮಿತಿಯದ್ದಾಗಿರುವುದರಿಂದ ಸಂಜೆ 6.30ಕ್ಕೆ ಪ್ರಾರಂಭಿಸಿ ರಾತ್ರಿ 12.30ಕ್ಕೆ ಮಂಗಳ ಹಾಡಲಿದ್ದಾರೆ. ಈ ಎಲ್ಲಾ ದೇವತಾ ಕಾರ್ಯಗಳಿಗೆ ನೀವೆಲ್ಲರೂ ಸಕುಟುಂಬ ಸಮೇತರಾಗಿ ಬಂದು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಮ್ಮೆಲ್ಲರಿಗೂ ಆದರದಿಂದ ಸ್ವಾಗತ ಕೋರುವವರು
ಶ್ರೀಮತಿ ಮೋಹಿನಿ ಎ ಆಚಾರ್ಯ, ಶ್ರೀ ಅನಂತಪದ್ಮನಾಭ
ಆಚಾರ್ಯ ಮತ್ತು ಮಕ್ಕಳು
ಹಾಗೂ ಸಿಬ್ಬಂದಿಗಳು ಶ್ರೀ ಗಾಯತ್ರಿ ಜ್ಯೂವೆಲ್ಲರ್ಸ್, ತೀರ್ಥಹಳ್ಳಿ
ಶ್ರೀಮತಿ ನಾಗವೇಣಿ
ಶ್ರೀ ರಾಜಗೋಪಾಲ ಆಚಾರ್ಯ ಮತ್ತು ಶೀರೂರು ಕುಟುಂಬಸ್ಥರು
ಶ್ರೀ ದಾಮೋಧರ ರಾವ್ ಮತ್ತು ಮಕ್ಕಳು ಹಾಗು ಪಡುಬಿದ್ರೆ ಕುಟುಂಬಸ್ಥರು
ಸರ್ವರಿಗೂ ಸುಸ್ವಾಗತ








