ಅಕ್ಲಾಪುರದಲ್ಲಿ ಮಾ.15ರಂದು ‘ಶ್ರೀ ದೇವಿ ಮಹಾತ್ಮೆ‘!
– ಕೋದಂಡರಾಮ ದೇವಸ್ಥಾನ ಆವರಣದಲ್ಲಿ ಹರಕೆ ಬಯಲಾಟ
– ಸರ್ವರಿಗೂ ಶ್ರೀಮತಿ ಗೀತಾ ಮತ್ತು ಶ್ರೀ ರಾಜೇಂದ್ರ ಕುಟುಂಬದ ಸ್ವಾಗತ
ನಮ್ಮೂರ್ ಎಕ್ಸ್ ಪ್ರೆಸ್
ತೀರ್ಥಹಳ್ಳಿ: ತಾಲೂಕಿನ ಅಗ್ರಹಾರ ಹೋಬಳಿಯ ತ್ರಿಯಂಬಕಪುರ ಗ್ರಾಮ ಪಂಚಾಯಿತಿಯ ಅಕ್ಲಾಪುರ ಗ್ರಾಮದಲ್ಲಿ ಮಾರ್ಚ್ 15ರ ಭಾನುವಾರ ಸಂಜೆ 6:30ಕ್ಕೆ ಸರಿಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಶ್ರೀದೇವಿ ಮಹಾತ್ಮೆ ಎಂಬ ಹರಕೆ ಬಯಲಾಟವನ್ನ ಹಮ್ಮಿಕೊಳ್ಳಲಾಗಿದೆ.. ಶ್ರೀಮತಿ ಗೀತಾ ಶ್ರೀ ರಾಜೇಂದ್ರ ಹೆಚ್.ಎಸ್ ಹಸಿಗೆ ಇವರು ಹರಕೆ ಬಯಲಾಟವನ್ನ ಆಯೋಜಿಸಿದ್ದು ಇವರ ಹಸಿಗೆ ನಿವಾಸದಲ್ಲಿ ಮಾರ್ಚ್ 15ರ ಭಾನುವಾರ ಬೆಳಗ್ಗೆ ಗಣಹೋಮ & ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಇರುತ್ತದೆ..
ಸಂಜೆ ಅಕ್ಲಾಪುರ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಹರಕೆ ಬಯಲಾಟ ನೆರವೇರಲಿದ್ದು, ರಾತ್ರಿಯೂ ಅನ್ನಸಂತರ್ಪಣೆ ಇರಲಿದೆ.. ಎಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಸತ್ಕಾರ ಸ್ವೀಕರಿಸಿ, ಯಕ್ಷಗಾನ ವೀಕ್ಷಿಸಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮತಿ ಗೀತಾ ಶ್ರೀ ರಾಜೇಂದ್ರ ಹೆಚ್.ಎಸ್ ಹಾಗೂ ಕುಟುಂಬದವರು ಮನವಿ ಮಾಡಿದ್ದಾರೆ.








