ಮಹಿಳಾ ರೈತರಿಗೆ ಸೆಹಗಲ್ ಫೌಂಡೇಶನ್ ವತಿಯಿಂದ ತರಬೇತಿ – ಮೂಡಿಗೆರೆ ದಾರದಹಳ್ಳಿ ಗ್ರಾಮದಲ್ಲಿ ಮಹಿಳಾ ರೈತರಿಗೆ ಪುನರುತ್ಪಾದಕ ಕೃಷಿ ಕುರಿತು ವಿಶೇಷ ತರಬೇತಿ – 108ಕ್ಕೂ ಹೆಚ್ಚು ಮಹಿಳಾ ರೈತರು ಹಾಜರ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮೂಡಿಗೆರೆ: ಐ.ಸಿ.ಸಿ.ಆರ್. ಎಲ್ (ICCRL)ಯೋಜನೆಯಡಿ ಸೆಹಗಲ್ ಫೌಂಡೇಶನ್ ವತಿಯಿಂದ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಮಹಿಳಾ ರೈತರಿಗೆ ಪುನರುತ್ಪಾದಕ ಕೃಷಿ ಪದ್ಧತಿಗಳ (Regenerative Agriculture Practices) ಕುರಿತು ವಿಶೇಷ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಮೂಲಕ ಮಹಿಳಾ ರೈತರಿಗೆ ಫೌಂಡೇಶನ್ ಪ್ರೇರಣೆಯುತ ಶಕ್ತಿ ನೀಡಿದೆ. ಗ್ರಾಮೀಣ ಮಹಿಳಾ ರೈತರಿಗೆ ಆಧುನಿಕ ಹಾಗೂ ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಮಹತ್ವದ ತರಬೇತಿ ಕಾರ್ಯಕ್ರಮವನ್ನು ಸೆಹಗಲ್ ಫೌಂಡೇಶನ್‌ನ ಫೀಲ್ಡ್ ಅಸಿಸ್ಟಂಟ್ ಸತೀಶ ಸಿಡಿ ಶೆಟ್ಟಿ ಅವರು ಸಮರ್ಥವಾಗಿ ಕಾರ್ಯಗತಗೊಳಿಸಿದರು. ಕಾರ್ಯಕ್ರಮದಲ್ಲಿ ಏನೇನು? ಕಾರ್ಯಕ್ರಮದ ಆರಂಭದಲ್ಲಿ ಪುನರುತ್ಪಾದಕ ಕೃಷಿಯ ಮಹತ್ವ, ಅದರ ಅಗತ್ಯತೆ ಹಾಗೂ ಇಂದಿನ…
Author: NammurEXP
ಮಳೆ, ತಂಡಿಯೇ ಅಡಿಕೆಗೆ ಎಲೆಚುಕ್ಕಿ ರೋಗಕ್ಕೆ ಕಾರಣ! – ದೇವಂಗಿಯಲ್ಲಿ ಯಶಸ್ವಿಯಾದ ರೈತ ಜಾಗೃತಿ ಕಾರ್ಯಕ್ರಮ – ತೋಟಕಾರಿಕೆ ಇಲಾಖೆ, ಕುಪ್ಪಳಿ ಕುವೆಂಪು ತೋಟಗಾರಿಕೆ ಉತ್ಪದನಾ ಕಂಪನಿ ಲಿಮಿಟೆಡ್ ಸಹಯೋಗದಲ್ಲಿ ಕಾರ್ಯಗಾರ – ವಾತಾವರಣದ ಏರುಪೇರಿನಿಂದ ಅಡಿಕೆಗೆ ರೋಗ ಹೆಚ್ಚಳ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ/ದೇವಂಗಿ: ಕ್ರಮಬದ್ಧ ಬೇಸಾಯದಿಂದ ಎಲೆಚುಕ್ಕಿ ರೋಗ ನಿಯಂತ್ರಿಸಬಹುದು. ಅತಿಯಾದ ನೀರಿನಿಂದಲೂ ಸಮಸ್ಯೆ ಉಲ್ಬಣ ಆಗಬಹುದು ಎಂಬ ಎಚ್ಚರಿಕೆಯನ್ನು ಕೃಷಿ ಅಧಿಕಾರಿಗಳು ನೀಡಿದ್ದಾರೆ. ಅಚ್ಚರಿ ಎಂದರೆ ನದಿ, ಕೆರೆ, ತೊರೆ ಮುಂತಾದ ನೀರಿನ ಮೂಲವಿರುವ ತೋಟಗಳಲ್ಲಿ ಹೆಚ್ಚಾಗಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಹೌದು. ರೈತರಿಗೆ ಅನೇಕ ಮಾರ್ಗಗಳನ್ನು ಅಧಿಕಾರಿಗಳು ನೀಡಿದ್ದಾರೆ. ಗುರುವಾರ ದೇವಂಗಿ ಮಾನಪ್ಪ ಸಭಾ ಭವನದಲ್ಲಿ ತೋಟಕಾರಿಕೆ ಇಲಾಖೆ, ಕುಪ್ಪಳಿ ಕುವೆಂಪು ತೋಟಗಾರಿಕೆ ಉತ್ಪದನಾ ಕಂಪನಿ ಲಿಮಿಟೆಡ್ ಸಹಯೋಗದಲ್ಲಿ ಆಯೋಜಿಸಿದ್ದ “ಅಡಿಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗದ ನಿಯಂತ್ರಣ” ವಿಚಾರ ಸಂಕೀರ್ಣ ಉದ್ಘಾಟಿಸಿದ ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಸಸ್ಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ. ಗಂಗಾಧರ…
ಕರಾವಳಿ ಟಾಪ್ ನ್ಯೂಸ್ ಬನ್ನೂರು ಅಪ್ಪಣ್ಣ ಹೆಗ್ಡೆ ವಿಧಿವಶ • ರಾಜಕೀಯ, ಧಾರ್ಮಿಕ, ಸಹಕಾರ, ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ: ಗಣ್ಯರ ಸಂತಾಪ • ಮೂಡಬಿದರೆ: ಮಹಾವೀರ ಕಾಲೇಜು ಸಮೀಪ ತೋಟಕ್ಕೆ ಬೆಂಕಿ • ಕಡಬ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು • ಮಂಗಳೂರು: ಭಾರತೀಯರ ಟಾರ್ಗೆಟ್ ಮಾಡಿದ್ದ ಗುಂಪು ಅರೆಸ್ಟ್! • ಕಾಪು: ಆಟೋ ನಿಲ್ದಾಣ ತೆರವು: ಪುರಸಭೆಗೆ ಮುತ್ತಿಗೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕುಂದಾಪುರ: ರಾಜಕೀಯ, ಧಾರ್ಮಿಕ, ಸಹಕಾರ, ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ನಾಯಕ ಬನ್ನೂರು ಅಪ್ಪಣ್ಣ ಹೆಗ್ಡೆ ಶನಿವಾರ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಕೊನೆಯುಸಿರೆಳೆದಿದ್ದಾರೆ. 1983-1985 ಅವಧಿಯಲ್ಲಿ ಜನತಾ ಪಕ್ಷದಿಂದ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕರಾಗಿದ್ದ ಅಪ್ಪಣ್ಣ ಹೆಗ್ಡೆ ಅವರು ರಾಜಕೀಯ ಜೀವನದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಿದ್ದು, ಜನಪ್ರತಿನಿಧಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಕೆಗೆ ಹೆಸರುವಾಸಿಯಾಗಿದ್ದರು. ಶಾಸಕರಾಗಿ…
ಮೂವರು ಗೋ ಕಳ್ಳರು ಅರೆಸ್ಟ್! – ಕಟ್ಟೆಹಕ್ಕಲಲ್ಲಿ ಕಾರಲ್ಲಿ ಕಳ್ಳತನ ಪ್ರಕರಣದಲ್ಲಿ ಮೂವರ ಬಂಧನ – ಶಿವಮೊಗ್ಗದಿಂದ ಕಾರಲ್ಲಿ ಬಂದು ತೀರ್ಥಹಳ್ಳಿಯಲ್ಲಿ ಕಳ್ಳತನ – ಕಾರು ವಶ: ತೀರ್ಥಹಳ್ಳಿ ಪೋಲಿಸರ ಕೆಲಸಕ್ಕೆ ಜನರ ಮೆಚ್ಚುಗೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟೆ ಹಕ್ಕಲು ಗ್ರಾಮದಲ್ಲಿ ದನ ಕಳ್ಳತನ ಪ್ರಕರಣ ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕಟ್ಟೆಹಕ್ಕಲು ಗ್ರಾಮದ ಸರ್ಕಲ್ ಅಲ್ಲಿ ಜ. 25ರ ಬೆಳಗಿನ ಜಾವ 03.00 ಗಂಟೆಯ ಸಮಯದಲ್ಲಿ ದೇವರಾಜ ಎಂ.ಎಸ್ ಬಿನ್ ಎಂ.ವಿ ಶ್ರೀನಿವಾಸ ಗೌಡ ವಾಸ ತುಂಬ್ರಿಮನೆ ಗ್ರಾಮ ರವರು ತಮಗೆ ಸೇರಿದ ಸುಮಾರು 12,000/- ರೂ ಮೌಲ್ಯದ ಹಸುವನ್ನು ಕಾರಿನಲ್ಲಿ ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಿದ್ದರು. ತೀರ್ಥಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲು…
ಪ್ರತಿಷ್ಠಿತ ಬ್ಯಾಂಕಿಗೆ ಉಡುಪಿಯ ವಿನಯ ಮುರಳಿಧರ ತೋನ್ಸೆ ಸಾರಥಿ! – ಯಸ್ ಬ್ಯಾಂಕ್ ನಿರ್ದೇಶಕ, ಸಿಇಒ ಆಗಿ ಕರಾವಳಿಯ ವಿನಯ್ – ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಸೇರಿ ಅನೇಕರಿಂದ ಅಭಿನಂದನೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಉಡುಪಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವ ಮತ್ತು ಸೇವೆಯನ್ನು ಗುರುತಿಸಿ ದೇಶದ ಪ್ರತಿಷ್ಠಿತ ಬ್ಯಾಂಕ್ ಆದ ಎಸ್(yes) ಬ್ಯಾಂಕ್ ನ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಉಡುಪಿ ಮೂಲದ ಶ್ರೀವಿನಯ್ ಮುರಳೀಧರ ತೋನ್ಸೆ ಅವರು ನೇಮಕಗೊಂಡಿದ್ದಾರೆ. ಕರಾವಳಿ ಬ್ಯಾಂಕುಗಳ ಹುಟ್ಟೂರು, ಅಲ್ಲದೆ ಅನೇಕ ಬ್ಯಾಂಕ್ ಹಾಗೂ ದೊಡ್ಡ ಕಾರ್ಪೋರೇಟ್ ಕಂಪನಿಗಳಿಗೆ ಕರಾವಳಿಯ ಪ್ರಮುಖರು ಮುಖ್ಯಸ್ಥರಾಗಿದ್ದಾರೆ. ಇದೀಗ ಯಸ್ ಬ್ಯಾಂಕಿಗೆ ಉಡುಪಿಯ ವಿನಯ ಮುರಳಿಧರ ತೋನ್ಸೆ ಸಾರಥಿ ಆಗಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಅವರು ಮುರಳಿಧರ ತೋನ್ಸೆ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, “ನಿಮ್ಮ ನೇತೃತ್ವದಲ್ಲಿ ಎಸ್ ಬ್ಯಾಂಕ್ ಮಾದರಿ ಬ್ಯಾಂಕ್ ಆಗಿ ಮೂಡಿಬರಲಿ” ಎಂದು ಶುಭ…
ಹುಟ್ಟು ಊರಿನ ಬಾಲ್ಯ ನೆನೆದ ಮಂಗಳೂರು ಉಪ ಪೋಲಿಸ್ ಆಯುಕ್ತ ಮಿಥುನ್! – ಮೇಗರವಳ್ಳಿಯಲ್ಲಿ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಹಾಗೂ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಗೌರವ ಅವಿಸ್ಮರಣೀಯ ಕ್ಷಣ – ವಿಜೇತ್ ಶೆಟ್ಟಿ ಅವರ ಕಾರ್ಯ ವೈಖರಿ, ಸಮಾಜ ಸೇವೆಗೆ ಮೆಚ್ಚುಗೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಗ್ರಾಮದಲ್ಲಿ, ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಹಾಗೂ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಲಲಿತಮ್ಮ ಅವರ 75 ನೇ ಹುಟ್ಟು ಹಬ್ಬದ ಸಂಭ್ರಮ ಹಾಗೂ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ನ 15 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕ್ರೀಡಾ ಸಮಾರೋಪ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿ, ಮೇಗರವಳ್ಳಿಯ ಮಣ್ಣಿನಲ್ಲಿ, ತಮ್ಮ ಬಂಧುಗಳು,ತಂದೆ, ಶ್ರೀ ನಾಗರಾಜ್ ಎಂ ಪಿ, ತಾಯಿ, ಶ್ರೀಮತಿ ಗಾಯಿತ್ರಿ, ಸಂಬಂಧಿಗಳು ಸ್ನೇಹಿತರ ಸಮಕ್ಷಮದಲ್ಲಿ ಗೌರವ ಸನ್ಮಾನ ಸ್ವೀಕಾರ ಮಾಡಿ ಪ್ರೀತಿ ಪಾತ್ರರ ಖುಷಿಯನ್ನು ನೂರ್ಮಡಿಗೊಳಿಸಿದರು. ನಂತರ ಮಾತಾನಾಡಿದ ಮಿಥುನ್ ಹೆಚ್ ಎನ್ ಅವರು ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಹಾಗೂ…
ಟಾಪ್ 3 ನ್ಯೂಸ್ ಚಿಕ್ಕಮಗಳೂರು ಚಿಕ್ಕಮಗಳೂರು: ಅಧಿಕಾರ ಸ್ವೀಕಾರ ಮಾಡಿದ ಸಿಟಿರವಿ, ದಿನೇಶ್ – ಜೀವರಾಜ್ ಸೇರಿ ಅನೇಕ ಗಣ್ಯರಿಂದ ಶುಭಾಶಯಗಳು – ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಂಜೇಗೌಡ – ಶ್ರೀಲಂಕಾದಲ್ಲಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಹಾಗೂ ಉಪಾಧ್ಯಕ್ಷರಾಗಿ ಕೊಪ್ಪ ಮಂಡಲ ಬಿಜೆಪಿ ಅಧ್ಯಕ್ಷರಾದ ದಿನೇಶ್ ಹೊಸೂರು ಅವರು ಅಧಿಕಾರ ಸ್ವೀಕಾರ ಮಾಡಿದರು. ಈ ವೇಳೆ ಇಲ್ಲಾ ನಿರ್ದೇಶಕರು, ಸಿಬ್ಬಂದಿ ಝೆಡ್ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಪ್ರಮುಖರು ಇದ್ದರು. ಮಾಜಿ ಸಚಿವ ಜೀವರಾಜ್ ಕೂಡ ಇಬ್ಬರಿಗೂ ಶುಭ ಕೋರಿದರು. ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಂಜೇಗೌಡ ಚಿಕ್ಕಮಗಳೂರು: ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಪಿ.ಮಂಜೇಗೌಡ ಅವರನ್ನು ಸರ್ಕಾರವು ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿ ಪ್ರಕಟಿಸಿದೆ. ಈಗಾಗಲೇ ಅವರಿಗೆ ಅಭಿನಂದನೆಗಳ ಮಹಾಪುರವೇ…
ಕೊಪ್ಪದಲ್ಲಿ ಮೃತ ಯುವಕನ ಅಂಗಾಗ ದಾನ! – ನ.ರಾ.ಪುರ ತಾಲೂಕಿನ ಬೆಳ್ಳೂರಿನ ಮಂಜುನಾಥ್ ಕುಟುಂಬದ ಮಾನವೀಯತೆ – ಅಪಘಾತದಿಂದ ಮೃತನಾಗಿದ್ದ ಆಟೋ ಚಾಲಕನ ಅಂಗಗಳು ಇನ್ನು ಜೀವಂತ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೊಪ್ಪ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿದ್ದ ನ.ರಾ.ಪುರ ತಾಲೂಕಿನ ಬೆಳ್ಳೂರಿನ ಮಂಜುನಾಥ್(37) ಅವರ ಅಂಗಾಂಗ ದಾನ ಮಾಡಲಾಗಿದೆ. ಈ ಮೂಲಕ ಕುಟುಂಬ ಸಾವಲ್ಲೂ ಮಾನವೀಯತೆ ಮೆರೆದಿದೆ. ಫೆ.2ರಂದು ಕುದುರೆಗುಂಡಿ ಸಮೀಪ ಆಟೋರಿಕ್ಷ ಪಲ್ಟಿಯಾಗಿ ತಲೆಗೆ ಗಂಭೀರ ಗಾಯಗೊಂಡಿದ್ದ ಚಾಲಕ ಮಂಜುನಾಥ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಮೆದುಳು ನಿಷ್ಕ್ರಿಯವಾಗಿದ್ದ ಕಾರಣ ಅಲ್ಲಿಂದ ಕರೆತಂದು ಕುಟುಂಬಸ್ಥರು ಕೊಪ್ಪದ ಪ್ರಶಮನಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಂಜುನಾಥ್ ಬದುಕಲಿಲ್ಲ. ಕುಟುಂಬಸ್ಥರು ಮೃತರ ಅಂಗಾಂಗ ದಾನಕ್ಕೆ ತೀರ್ಮಾನಿಸಿ ಸಾರ್ಥಕತೆ ಮೆರೆದಿದ್ದಾರೆ. ಕೊಪ್ಪದ ಪ್ರಶಮನಿ ಆಸ್ಪತ್ರೆಯಲ್ಲಿ ಮೃತರ ಪಿತ್ತಜನಕಾಂಗ ,ಮೂತ್ರಪಿಂಡ, ಕಣ್ಣುಗಳ ದಾನ ಪಕ್ರಿಯೆ ನಡೆಯಿತು ಮಣಿಪಾಲ್ ಆಸ್ಪತ್ರೆಯ ವೈದ್ಯರು ಮಂಗಳೂರಿನ ಎಜೆ ಆಸ್ಪತ್ರೆಯ ವೈದ್ಯರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಕೊಪ್ಪದಿಂದ ಜೀರೋ ಟ್ರಾಪಿಕ್ಕಿನಲ್ಲಿ…
ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಗೆ ಸಜ್ಜು! – ಫೆ.17ರಿಂದ 25ರವರೆಗೆ ಮಾರಿಕಾಂಬಾ ಅಮ್ಮನವರ ಜಾತ್ರೆ – 2 ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಸರ್ವರಿಗೂ ಸ್ವಾಗತ ತೀರ್ಥಹಳ್ಳಿ: ಮಲೆನಾಡಿನ ಪ್ರಸಿದ್ಧ ಜಾತ್ರೆ ಹಾಗೂ ಕಾರ್ಯಕ್ರಮಗಳಲ್ಲಿ ಒಂದಾದ ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಗೆ ಸಿದ್ಧತೆ ಶುರುವಾಗಿದೆ. ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಅಮ್ಮನವರ ಜಾತ್ರೋತ್ಸವ ಇದೇ ಫೆಬ್ರವರಿ 17ರಿಂದ 25ರವರೆಗೆ 9 ದಿನಗಳ ಕಾಲ ವೈಭವದಿಂದ ಜರುಗಲಿದೆ. ದೇವಸ್ಥಾನ ಆಡಳಿತ ಸಮಿತಿ ಜಾತ್ರೆಯನ್ನು ಯಶಸ್ವಿಗೊಳಿಸಲು ಸಿದ್ಧತೆ ಆರಂಭಿಸಿದೆ. ಅಲ್ಲದೆ ಸಮಸ್ತ ಭಕ್ತವೃಂದವನ್ನು ಸ್ವಾಗತಿಸಿದೆ. ಯಾವತ್ತು ಏನೇನು? ಫೆಬ್ರವರಿ 17ರಂದು ಜಾತ್ರೆ ಸಾರಲಾಗುತ್ತಿದೆ. 9 ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಿತ್ಯ ಅನ್ನಸಂತರ್ಪಣೆ ಜರುಗುವುದು. ಶ್ರೀ ಅಮ್ಮನವರ ಜಾತ್ರಾ ಉತ್ಸವಕ್ಕೆ ಹೊರೆಕಾಣಿಕೆ ಸ್ವೀಕರಿಸಲಾಗುತ್ತದೆ. ಫೆ.17ರಂದು ಮಹಾಪೂಜೆ, ಮಹಾಮಂಗಳಾರತಿ, ದೇವಿ ದರ್ಶನ, ಜಾತ್ರೆ ಸಾರುವುದು, ಫೆ.18ರಂದು ಸಂಜೆ 6ರಿಂದ ಸುಮುಖ ಸಂಗೀತ ನೃತ್ಯ ಶಾಲೆ ಮತ್ತು ಶ್ರೀ ರಾಜರಾಜೇಶ್ವರಿ ನೃತ್ಯ ಶಾಲೆಯ ಕಲಾವಿದರಿಂದ ನೃತ್ಯ…
ತೀರ್ಥಹಳ್ಳಿ ಪಟ್ಟಣದಲ್ಲಿ 2ನೇ ಡಿಸಿಸಿ ಬ್ಯಾಂಕ್ ಶಾಖೆ ಶುರು – ಎಪಿಎಂಸಿಯಲ್ಲಿ ಬ್ಯಾಂಕ್ ಶಾಖೆ ಲೋಕಾರ್ಪಣೆ – ಸಹಕಾರ, ರಾಜಕೀಯ ನಾಯಕರ ಉಪಸ್ಥಿತಿ – ಮಂಜುನಾಥ ಗೌಡ, ವಿಜಯದೇವ್ ಅವರ ವಿಶೇಷ ಆಸಕ್ತಿ ಫಲ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 36ನೇ ಶಾಖೆಯನ್ನು ಫೆಬ್ರವರಿ 5ರ ಗುರುವಾರದಂದು ತೀರ್ಥಹಳ್ಳಿಯ ಎಪಿಎಂಸಿ ಪ್ರಾಂಗಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು ಉದ್ಘಾಟನಾ ಸಮಾರಂಭದಲ್ಲಿ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡ, ಶಾಸಕ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಿಜಯದೇವ್, ಪರಮೇಶ್, ಡಿಸಿಸಿ ಬ್ಯಾಂಕ್ ಎಂಡಿ ರಾಜೇಂದ್ರ ರೆಡ್ಡಿ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಪ್ರಮುಖರಾದ ಮಹಾಬಲೇಶ್ವರ್ ಹೆಗಡೆ, ಪ್ರಭಾಕರ್ ಹೆಗ್ಡೆ, ಸುಷ್ಮಾ ಸಂಜಯ್, ಅಜಿತ್, ರೇವತಿ ಅನಂತಮೂರ್ತಿ, ಶಿವಮೊಗ್ಗ, ತೀರ್ಥಹಳ್ಳಿ ಡಿಸಿಸಿ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಿಸಿಸಿ ಬ್ಯಾಂಕ್ ವತಿಯಿಂದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೌರವಿಸಲಾಯಿತು. ಸಾಲೂರು, ಕಸಬಾ,…



