ಹುಟ್ಟು ಊರಿನ ಬಾಲ್ಯ ನೆನೆದ ಮಂಗಳೂರು ಉಪ ಪೋಲಿಸ್ ಆಯುಕ್ತ ಮಿಥುನ್!
– ಮೇಗರವಳ್ಳಿಯಲ್ಲಿ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಹಾಗೂ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಗೌರವ ಅವಿಸ್ಮರಣೀಯ ಕ್ಷಣ
– ವಿಜೇತ್ ಶೆಟ್ಟಿ ಅವರ ಕಾರ್ಯ ವೈಖರಿ, ಸಮಾಜ ಸೇವೆಗೆ ಮೆಚ್ಚುಗೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಗ್ರಾಮದಲ್ಲಿ, ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಹಾಗೂ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಲಲಿತಮ್ಮ ಅವರ 75 ನೇ ಹುಟ್ಟು ಹಬ್ಬದ ಸಂಭ್ರಮ ಹಾಗೂ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ನ 15 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕ್ರೀಡಾ ಸಮಾರೋಪ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿ, ಮೇಗರವಳ್ಳಿಯ ಮಣ್ಣಿನಲ್ಲಿ, ತಮ್ಮ ಬಂಧುಗಳು,ತಂದೆ, ಶ್ರೀ ನಾಗರಾಜ್ ಎಂ ಪಿ, ತಾಯಿ, ಶ್ರೀಮತಿ ಗಾಯಿತ್ರಿ, ಸಂಬಂಧಿಗಳು ಸ್ನೇಹಿತರ ಸಮಕ್ಷಮದಲ್ಲಿ ಗೌರವ ಸನ್ಮಾನ ಸ್ವೀಕಾರ ಮಾಡಿ ಪ್ರೀತಿ ಪಾತ್ರರ ಖುಷಿಯನ್ನು ನೂರ್ಮಡಿಗೊಳಿಸಿದರು.
ನಂತರ ಮಾತಾನಾಡಿದ ಮಿಥುನ್ ಹೆಚ್ ಎನ್ ಅವರು ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಹಾಗೂ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ನ ಈ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಲಲಿತಮ್ಮ ಪ್ರಶಸ್ತಿ ಬಗ್ಗೆ ಮೆಚ್ಚುಗೆ ಮಾತಾನಾಡಿ ಎಲ್ಲಾ ಯುವಕರು, ಹಾಗೂ ವಿಜೇತ್ ಶೆಟ್ಟಿ ಅವರ ಕಾರ್ಯ ವೈಖರಿ, ಸೇವಾ ಕೈಂಕರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು, ನಂತರ ತಮ್ಮ ಬಾಲ್ಯದ ದಿನಗಳನ್ನು ಮೆಲಕು ಹಾಕುತ್ತಾ, ಬೇಸಿಗೆ ರಜೆಗೆ ಬಂದಾಗ ಆಡುತ್ತಿದ್ದ ಕ್ರಿಕೆಟ್ ಆಟ, ಕೆ ಇ ಬಿ ಕಛೇರಿಯ ಗಣಪತಿ ಸಡಗರ, ಹೊಳೆಯಲ್ಲಿನ ಈಜು, ತೋಟದ ಭೇಟಿ, ಅಂದಿನ ಕಾಲದ ಸ್ನೇಹಿತರನ್ನು ನೆನಪಿಸಿಕೊಂಡರು.
ನಂತರ ಮಲೆನಾಡಿನ ಸಾಂಸ್ಕೃತಿಕ ಸಾಹಿತ್ಯದ ವೈಭವ, ಇಲ್ಲಿನ ಸಂಸ್ಕೃತಿ ಆಚರಣೆ, ಕುವೆಂಪು, ಅನಂತ ಮೂರ್ತಿ ಬರಹಗಳ ಬಗ್ಗೆ ತೀರ್ಥಹಳ್ಳಿಯ ಮಣ್ಣಿನ ಬಗ್ಗೆ ಅಭಿಮಾನದಿಂದ ಮಾತಾನಾಡಿದರು.
ಯುವಕರು, ಕ್ರೀಡಾಕೂಟದಲ್ಲಿ ಭಾಗವಹಿಸುವುದರ ಜೊತೆಗೆ, ದುಶ್ಚಟಗಳಿಂದ ದೂರವಿರಬೇಕು,ಒಬ್ಬ ಕ್ರೀಡಾ ಪಟು ಉತ್ತಮ ದೈಹಿಕ ಸಾಮರ್ಥ್ಯವನ್ನು ಹೊಂದಿರಬೇಕು, ಜೊತೆಗೆ ಆನ್ ಲೈನ್ ಬೆಟ್ಟಿಂಗ್, ಗಾಜಾ, ಮಾದಕ ದ್ರವ್ಯಗಳ ಚಟಗಳಿಂದ ಮುಕ್ತರಾಗಿ ಉತ್ತಮ ಸಮಾಜಕ್ಕೆ ಮಾದರಿ ಕ್ರೀಡಾಪಟು ಹಾಗೂ ಸತ್ಪ್ರಜೆಗಳಾಗಿ ರೂಪಗೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ಈ ವರ್ಷದ ಲಲಿತಮ್ಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಆರೋಗ್ಯ ಇಲಾಖೆಯ ಶ್ರೀಮತಿ ವೀಣಾ ಎಂ ಪಿ ಅವರ ಸೇವಾ ಕೈಂಕರ್ಯ ವನ್ನು ಶ್ಲಾಘಿಸಿದರು, ನಂತರ ಹಲವು ವರ್ಷಗಳ ಕಾಲ ಹೊಸೂರು ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಮಂಜು ಬಾಬು ಅವರಿಗೆ ವಿಜೇತ ಶೆಟ್ಟಿ ಮತ್ತು ಅವರ ಸ್ನೇಹ ಬಳಗ ” ಬೆಳ್ಳಿ ಗದೆ ” ನೀಡಿ ಗೌರವಿಸಿದರು ಅವರ ಸಾಧನೆಯನ್ನು ಸಹ ತುಂಬಾ ಅಭಿಮಾನದಿಂದ ಮುಕ್ತ ಕಂಠದಿಂದ ಶ್ಲಾಘಿಸಿದರು.
ತಮ್ಮ 7 ತಿಂಗಳ ಸೇವಾ ಅವಧಿಯಲ್ಲಿ ಮೊದಲ ಬಾರಿಗೆ ರಜೆ ಹಾಕಿ ಬಂದಿದ್ದೇನೆ ಅದು ನನ್ನ ಊರಿನ ಸನ್ಮಾನ ಎಂದು ಹೇಳಿ, ಜೊತೆಗೆ ತಮ್ಮ ಅತ್ಯಂತ ಬ್ಯುಸಿ ಟೈಂ ನಲ್ಲೂ ನನ್ನನ್ನು ಮೇಗರವಳ್ಳಿ ಗೆ ಬರಲು ಕಾರಣರಾದ ಬಾವಿಕೆರೆ ಸುಧೀರ್, ಅವರ ಪೋಷಕರು ಹಾಗೂ ವಿಜೇತ ಶೆಟ್ಟಿ ಅವರ ಪ್ರೀತಿಯ ಆಹ್ವಾನವನ್ನು ಅತ್ಯಂತ ಆಪ್ತತೆಯಿಂದ ಸ್ಮರಿಸಿದರು.
ಕೊನೆಯದಾಗಿ, ಕ್ರೀಡಾಕೂಟದ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿ, ಅತ್ಯಂತ ಖುಷಿಯಿಂದ ಕಾರ್ಯಕ್ರಮದಿಂದ ನಿರ್ಗಮಿಸಿದರು.








