ತೀರ್ಥಹಳ್ಳಿ ಪಟ್ಟಣದಲ್ಲಿ 2ನೇ ಡಿಸಿಸಿ ಬ್ಯಾಂಕ್ ಶಾಖೆ ಶುರು
– ಎಪಿಎಂಸಿಯಲ್ಲಿ ಬ್ಯಾಂಕ್ ಶಾಖೆ ಲೋಕಾರ್ಪಣೆ
– ಸಹಕಾರ, ರಾಜಕೀಯ ನಾಯಕರ ಉಪಸ್ಥಿತಿ
– ಮಂಜುನಾಥ ಗೌಡ, ವಿಜಯದೇವ್ ಅವರ ವಿಶೇಷ ಆಸಕ್ತಿ ಫಲ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 36ನೇ ಶಾಖೆಯನ್ನು ಫೆಬ್ರವರಿ 5ರ ಗುರುವಾರದಂದು ತೀರ್ಥಹಳ್ಳಿಯ ಎಪಿಎಂಸಿ ಪ್ರಾಂಗಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು
ಉದ್ಘಾಟನಾ ಸಮಾರಂಭದಲ್ಲಿ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡ, ಶಾಸಕ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಿಜಯದೇವ್, ಪರಮೇಶ್, ಡಿಸಿಸಿ ಬ್ಯಾಂಕ್ ಎಂಡಿ ರಾಜೇಂದ್ರ ರೆಡ್ಡಿ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಪ್ರಮುಖರಾದ ಮಹಾಬಲೇಶ್ವರ್ ಹೆಗಡೆ, ಪ್ರಭಾಕರ್ ಹೆಗ್ಡೆ, ಸುಷ್ಮಾ ಸಂಜಯ್, ಅಜಿತ್, ರೇವತಿ ಅನಂತಮೂರ್ತಿ, ಶಿವಮೊಗ್ಗ, ತೀರ್ಥಹಳ್ಳಿ ಡಿಸಿಸಿ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಿಸಿಸಿ ಬ್ಯಾಂಕ್ ವತಿಯಿಂದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೌರವಿಸಲಾಯಿತು.
ಸಾಲೂರು, ಕಸಬಾ, ಪಟ್ಟಣ ವ್ಯಾಪ್ತಿಗೆ ಹಾಗೂ ಎಪಿಎಂಸಿ ವ್ಯಾಪಾರಿಗಳಿಗೆ ಈ ಬ್ಯಾಂಕ್ ಅನುಕೂಲ ಆಗಲಿದೆ.








