ಕಾಫಿ ಬೆಲೆ ಕುಸಿತ..ಅಡಿಕೆ ಏರಿಕೆ.. ಮಾವು ಬಂಪರ್!
– ರಾಜ್ಯದ ಎಲ್ಲಾ ಮಾರುಕಟ್ಟೆಯಲ್ಲೂ ಅಡಿಕೆಗೆ ಡಿಮ್ಯಾಂಡ್
– ಎಲ್ಲಿ ನೋಡಿದರೂ ತುಂಬಿ ಹೋಗಿದೆ ಮಾವು ಹೂವು!
– ಅಡಿಕೆ ಬೆಲೆ ಎಷ್ಟಿದೆ?…ಮತ್ತೆ ಹೆಚ್ಚು ಆಗುತ್ತಾ…?
ವಿಶೇಷ ವರದಿ: ಕೃಷ್ಣಮೂರ್ತಿ ಕೊಪ್ಪ
ಶಿವಮೊಗ್ಗ/ ಚಿಕ್ಕಮಗಳೂರು: ಅಡಿಕೆ ಬೆಲೆ ಏರಿಕೆ ಕಾಣುತ್ತಿದ್ದು ಸರಕು ಒಂದು ಲಕ್ಷ ಸನಿಹ ಬಂದಿದೆ. ಇನ್ನು ಅಡಿಕೆ ಬೆಲೆ ಏರಿಕೆ ಫಸಲು ಕಡಿಮೆ ಇರುವ ರೈತರಿಗೆ ಸಿಹಿ ಸುದ್ದಿ ಆದ್ರೂ ಬಹುತೇಕ ರೈತರಿಗೆ ಈ ಬೆಲೆ ಏರಿಕೆ ಲಾಭ ಸಿಗಲ್ಲ. ಏನೇ ಇರಲಿ ಅಡಿಕೆ ಬೆಲೆ ಏರಿಕೆ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಎಲೆ ಚುಕ್ಕಿ, ಕೊಳೆ ಹಾಗೂ ಇತರೆ ರೋಗ ಕಾರಣ ಅಡಿಕೆ ಫಸಲು ಸಂಪೂರ್ಣ ಕಡಿಮೆ ಆಗಿದೆ. ಚನ್ನಗಿರಿ, ಚಿತ್ರದುರ್ಗ, ಶಿವಮೊಗ್ಗ, ತೀರ್ಥಹಳ್ಳಿ, ಪುತ್ತೂರು, ಶಿರಸಿ, ಯಲ್ಲಾಪುರ ಸೇರಿ ಬಹುತೇಕ ಎಲ್ಲಾ ಮಾರುಕಟ್ಟೆಗಳಲ್ಲಿ ಅಡಿಕೆ ಉತ್ತಮ ಧಾರಣೆ ಕಂಡು ಕೊಂಡಿದೆ.
ಕಾಫಿ ಬೆಲೆ ಇಳಿಕೆ: ಫಸಲು ಡೌನ್ ಡೌನ್!
ಕಾಫಿ ಬೆಲೆಗಳು ವಾರದ ಕುಸಿತವನ್ನು ಮುಂದುವರಿಸಿದ್ದು, ಕಳೆದವಾರ ಅರೇಬಿಕಾ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಕಾಫಿ ಪೂರೈಕೆಯಲ್ಲಿ ಬಲವಾದ ಬದಲಾವಣೆಗಳ ಸೂಚನೆಯಿಂದಾಗಿ ಕಳೆದ ವಾರದಿಂದ ಕಾಫಿ ಬೆಲೆಗಳು ಒತ್ತಡದಲ್ಲಿವೆ. ಬ್ರೆಜಿಲ್ನ 2026 ರ ಕಾಫಿ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ +17.2% ರಷ್ಟು ಏರಿಕೆಯಾಗಿ ದಾಖಲೆಯ 66.2 ಮಿಲಿಯನ್ ಚೀಲಗಳಿಗೆ ತಲುಪಲಿದೆ ಎಂದು ಬ್ರೆಜಿಲ್ನ ಬೆಳೆ ಮುನ್ಸೂಚಕ ಸಂಸ್ಥೆ ಕೊನಾಬ್ ಗುರುವಾರ ತಿಳಿಸಿದೆ. ಅರೇಬಿಕಾ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ +23.2% ರಷ್ಟು ಏರಿಕೆಯಾಗಿ 44.1 ಮಿಲಿಯನ್ ಚೀಲಗಳಿಗೆ ತಲುಪಿದೆ ಮತ್ತು ರೋಬಸ್ಟಾ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ +6.3% ರಷ್ಟು ಏರಿಕೆಯಾಗಿ 22.1 ಮಿಲಿಯನ್ ಚೀಲಗಳಿಗೆ ತಲುಪಿದೆ. ಹಾಗಾಗಿ ಇಲ್ಲಿ ಬೆಲೆ ಇಳಿಕೆ ಆಗಿದೆ. ಜತೆಗೆ ಮಳೆ, ಹವಾಮಾನ ವೈಫಲ್ಯದಿಂದ ಫಸಲು ಕಡಿಮೆ ಆಗಿದೆ.
ಎಲ್ಲಿ ನೋಡಿದರೂ ತುಂಬಿ ಹೋಗಿದೆ ಮಾವು ಹೂವು!
ಮಲೆನಾಡು: ಉತ್ತಮ ಚಳಿ ಬಿದ್ದ ಕಾರಣ ಮಾವಿನ ಮರಗಳಲ್ಲಿ ಸಂಭ್ರಮ ತುಂಬಿದೆ. ಎಲ್ಲಿ ನೋಡಿದರೂ ಈ ಸಲ ಮಾವಿನ ಹೂವು ಮಲೆನಾಡಲ್ಲಿ ಅತೀ ಹೆಚ್ಚು ಕಂಡು ಬಂದಿದೆ. ಮಲೆನಾಡು ಮಿಡಿ ಮಾವಿಗೆ ದೇಶ ವಿದೇಶದಲ್ಲಿ ಭಾರೀ ಡಿಮ್ಯಾಂಡ್ ಇದೆ. ಅಪ್ಪೆ ಮಾವಿನ ತಳಿ ಇತ್ತೀಚಿಗೆ ಕಾಣೆ ಆಗುತ್ತಿದೆ. ಈ ವರ್ಷ ಹೆಚ್ಚು ಫಸಲು ನಿರೀಕ್ಷೆ ಇದೆ.
ಅಡಿಕೆ ಬೆಲೆ ಎಷ್ಟಿದೆ?
ಸರಕು: 61500-84000-95050
ಬೆಟ್ಟೆ: 54119-63200-65609
ರಾಶಿ: 48199-55800-56359
ಗೊರಬಲು: 20199-37800-39599








