ಮಲ್ನಾಡ್ ಪ್ರಮುಖ ಸುದ್ದಿಗಳು
ಆರಗ ಜ್ಞಾನೇಂದ್ರ ಅವರಿಗೆ ಮಹತ್ವದ ಹುದ್ದೆ
– ರಾಜ್ಯ ಅಡಿಕೆ ಮಹಾಮಂಡಲದ ಅಧ್ಯಕ್ಷರಾಗಿ ಶಾಸಕ ಆರಗ ಜ್ಞಾನೇಂದ್ರ ಅವಿರೋಧ ಆಯ್ಕ
– ಕಾಡು ಆನೆ ಓಡಾಟ: 12 ಗ್ರಾಮದಲ್ಲಿ ನಿಷೇಧಾಜ್ಞೆ
– ಕೊಪ್ಪ: ಕಾಡುಕೋಣ ದಾಳಿ: ಓರ್ವನಿಗೆ ಗಂಭೀರ ಗಾಯ!
– ನರಸಿಂಹರಾಜಪುರ: ಪ್ರತ್ಯಕ್ಷಗೊಂಡ ಒಂಟಿ ಸಲಗದ ಭಯ!
– ದೇವಂಗಿ ಬಳಿ ಭೀಕರ ಅಪಘಾತ: ಓರ್ವ ಮಣಿಪಾಲಕ್ಕೆ
ಶಿವಮೊಗ್ಗ: ರಾಜ್ಯ ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ರಾಜ್ಯ ಅಡಿಕೆ ಮಹಾಮಂಡಲದ ಅಧ್ಯಕ್ಷರಾಗಿ ಶಾಸಕ ಆರಗ ಜ್ಞಾನೇಂದ್ರ ಅವಿರೋಧ ಆಯ್ಕೆ ಆಗಿದ್ದಾರೆ.ಅಡಿಕೆ ಮಹಾಮಂಡಲ ಅಧ್ಯಕ್ಷ ಸ್ಥಾನ ಬಯಸಿ ಶಾಸಕ ಆರಗ ಜ್ಞಾನೇಂದ್ರರವರು ಇಂದು ಶಿವಮೊಗ್ಗ ಉಪವಿಭಾಗಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದರು. ಯಾರೂ ಅಧ್ಯಕ್ಷ ಸ್ಥಾನ ಅಪೇಕ್ಷಿಸಿ ನಾಮ ಪತ್ರ ಸಲ್ಲಿಸದೇ ಇದ್ದ ಕಾರಣ ಮುಂದಿನ 5 ವರ್ಷಗಳ ಅವಧಿಗೂ ಜ್ಞಾನೇಂದ್ರರವರೇ ರಾಜ್ಯ ಅಡಿಕೆ ಮಹಾಮಂಡಲದ ಅಧ್ಯಕ್ಷರಾಗಿ ಶಾಸಕ ಆರಗ ಜ್ಞಾನೇಂದ್ರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಕೊಪ್ಪ: ಕಾಡುಕೋಣ ದಾಳಿ: ಓರ್ವನಿಗೆ ಗಂಭೀರ ಗಾಯ!
ಜಯಪುರ: ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ಶಿವಪ್ಪಗೌಡ ಎನ್ನುವ ರೈತರೊಬ್ಬರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. L ಕಾಡುಕೋಣವು ಹಿಂಬದಿಯಿಂದ ಬಂದು ದಾಳಿ ನಡೆಸಿದೆ. ಪರಿಣಾಮವಾಗಿ ಶಿವಪ್ಪಗೌಡರ ತೊಡೆ ಹಾಗೂ ಬೆನ್ನಿನ ಭಾಗದಲ್ಲಿ ತೀವ್ರತರವಾಗಿ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ನರಸಿಂಹರಾಜಪುರ: ಪ್ರತ್ಯಕ್ಷಗೊಂಡ ಒಂಟಿ ಸಲಗದ ಭಯ!
ನರಸಿಂಹರಾಜಪುರ: ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯ ಹುಯಿಗೆರೆ-ಅಂಡವಾನೆ ರಸ್ತೆಯಲ್ಲಿ ಒಂಟಿ ಸಲಗ ರಸ್ತೆ ದಾಟುತ್ತಿರುವ ದೃಶ್ಯ ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡಿದೆ. ಸ್ಥಳೀಯರು ಅದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಾಡು ಆನೆ ಓಡಾಟ: 12 ಗ್ರಾಮದಲ್ಲಿ ನಿಷೇಧಾಜ್ಞೆ
ಚಿಕ್ಕಮಗಳೂರು: ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಓಡಾಟ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆಯ ಕ್ರಮವಾಗಿ ತಾಲ್ಲೂಕಿನ ಮೂಗ್ತಿಹಳ್ಳಿ, ವಸ್ತಾರೆ, ಮತ್ತಾವರ, ದಂಬದಹಳ್ಳಿ, ನಲ್ಲೂರು,ಕಾರೇಮನೆ, ಉಕ್ಕುಂದ, ಗಡಬನಹಳ್ಳಿ, ಜೋಳದಾಳು, ಶಿರಗುಂದ ಸೇರಿದಂತೆ 12 ಗ್ರಾಮಗಳಲ್ಲಿ ನಿಷೇಧಾಜ್ಞೆಯನ್ನು ಅಳವಡಿಸುವಂತೆ ಆಡಳಿತವು ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಿದೆ.
ತಹಸೀಲ್ದಾರರು ಹೊರಡಿಸಿರುವ ಈ ಆದೇಶದ ಪ್ರಕಾರ ಸಂಜೆ 4:00 ಗಂಟೆಯಿಂದ ಬೆಳಗಿನ 6:00 ಗಂಟೆಯವರೆಗೆ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಇದು ಫೆಬ್ರವರಿ 26ರ ಗುರುವಾರದ ತನಕ ಜಾರಿಯಲ್ಲಿರುತ್ತದೆ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಹುಣಸೆಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯಲ್ಲಪ್ಪ ಮತ್ತು ಅದೇ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊಸಪೇಟೆ ಮೂಲದ ಬೋರಮ್ಮ ಎನ್ನುವ ಮಹಿಳೆಯು ಸಾವನ್ನಪ್ಪಿದ್ದರು. ಇದಾದ ಬಳಿಕ ಅರಣ್ಯ ಇಲಾಖೆಯು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆಯನ್ನು ನಡೆಸುವುದರ ಮೂಲಕ ‘ಕಿಲ್ಲರ್ ಸಲಗ’ ಎಂದು ಗುರುತಿಸಿಕೊಂಡಿದ್ದ ಕಾಡಾನೆಯನ್ನು ಸೆರೆಹಿಡಿದಿದ್ದರು.
ಇದರ ನಂತರವೂ ಚಿಕ್ಕೊಳಲೆ ಅರಣ್ಯ ಪ್ರದೇಶದಲ್ಲಿ ಮತ್ತೆರಡು ಕಾಡಾನೆಗಳು ವಾಸ್ತವ್ಯ ಹೂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಅವುಗಳ ಚಲನವಲನಗಳ ಮೇಲೆ ಗಮನಹರಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
ದೇವಂಗಿ ಬಳಿ ಭೀಕರ ಅಪಘಾತ: ಓರ್ವ ಮಣಿಪಾಲಕ್ಕೆ
ತೀರ್ಥಹಳ್ಳಿ ತಾಲೂಕು ದೇವಂಗಿ ಸಮೀಪ ಮಳೂರಿನಲ್ಲಿ ಭೀಕರ ಅಪಘಾತ ಕಾರು ಬೈಕು ನಡುವೆ ಸಂಭವಿಸಿದೆ. ಕಾರು ಬೈಕ್ ನಡುವೆ ಮುಖಾಮುಖಿ ಆಗಿದ್ದು ಸವಾರನಿಗೆ ತಲೆ ಹಾಗೂ ಕಾಲು ಮುರಿದಿದ್ದು ಕಿವಿ ಓಪನ್ ಆಗಿದ್ದು ಮಣಿಪಾಲ ಆಸ್ಪತ್ರೆಯ ನಿಗಾ ಘಟಕದಲ್ಲಿ ಇಡಲಾಗಿದೆ.








