ರಾಷ್ಟ್ರ ಮಟ್ಟದಲ್ಲಿ ಕ್ರಿಯೇಟಿವ್ ವಿದ್ಯಾರ್ಥಿ ನಂಬರ್ 1
– ಜೆಇಇ ಪೇಸ್ 1 ಪರೀಕ್ಷೆಯಲ್ಲಿ ನಾಗದೇವ್ ಎಂ ಜಿ ದೇಶಕ್ಕೆ ಪ್ರಥಮ
– ಜೆಇಇ-ಬಿ ಪ್ಲಾನಿಂಗ್ ನಲ್ಲಿ ಸಾಧನೆ: ಶುಭಾಶಯಗಳು
– ರಾಜ್ಯದಲ್ಲಿ ಮಾತ್ರವಲ್ಲ… ದೇಶದಲ್ಲೂ ಕ್ರಿಯೇಟಿವ್ ಹೆಸರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಇದೀಗ ರಾಷ್ಟ್ರ ಮಟ್ಟದಲ್ಲಿ ಜೆಇಇಯಲ್ಲಿ ಸ್ಥಾನ ಪಡೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಕ್ರಿಯೆಟಿವ್ ಪಿಯು ಕಾಲೇಜು ಸಾಧನೆ ಮಾಡಿದೆ.
ನಂಜನಗೂಡಿನ ಗುರುಸ್ವಾಮಿ ಎಂ.ಡಿ ಹಾಗೂ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ನೇತ್ರಾವತಿಯವರ ಪುತ್ರ ನಾಗದೇವ್ ಎಂ ಜಿ ಅವರು ಜೆಇಇ ಪೇಸ್ 1 ಪರೀಕ್ಷೆಯಲ್ಲಿ ಶೇಕಡ 99.45 ರಷ್ಟು ಹಾಗೂ ಜೆಇಇ-ಬಿ ಪ್ಲಾನಿಂಗ್ ನಲ್ಲಿ ಶೇಕಡ 99.97 ಅಂಕಗಳನ್ನು ಗಳಿಸುವುದರ ಜೊತೆಗೆ, ಅಖಿಲ ಭಾರತ ಮಟ್ಟದಲ್ಲಿ ಇಡಬ್ಲುಎಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಕ್ರಿಯೇಟಿವ್ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದಿದ್ದು, ಸಂಸ್ಥೆಯ ಸಂಸ್ಥಾಪಕರು, ಉಪನ್ಯಾಸಕರಲ್ಲಿ ಹೆಮ್ಮೆಯನ್ನು ಮೂಡಿಸಿದ್ದಾರೆ.
ವೈಜ್ಞಾನಿಕ ಸಂಶೋಧನೆಯನ್ನು ಕೈಗೊಳ್ಳುವಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ನಾಗದೇವ್ ಅವರ ಯಶಸ್ಸಿನ ಪಯಣ ಮುಂದುವರಿಯಲಿ ಎಂದು ಸಂಸ್ಥೆಯ ಮುಖ್ಯಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕ್ರಿಯೇಟಿವ್ ಕಾಲೇಜು ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದ್ದು, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ಸ್ಪರ್ಧಾತ್ಮಕ ಪರೀಕ್ಷೆ ಎಲ್ಲದರಲ್ಲೂ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಕಾರ್ಕಳ, ಉಡುಪಿ, ಹಾಸನ, ಶಿವಮೊಗ್ಗದಲ್ಲಿ ಕ್ರಿಯೇಟಿವ್ ಶಾಖೆ ಇದೆ.








