100 ಬೆಡ್ ಆಸ್ಪತ್ರೆಯಂತೂ ಆಗಿಲ್ಲ ಆಸ್ಪತ್ರೆಗೆ ವೈದ್ಯರನ್ನಾದರೂ ಕೊಡಿ..!!?
– ತಕ್ಷಣ ಇನ್ನಿಬ್ಬರು ವೈದ್ಯರನ್ನು ನೀಡಿ ಎಂದು ಡಿ.ಹೆಚ್.ಓ ಗೆ ಮನವಿ ಸಲ್ಲಿಸಿಕೆ
– ವೈದ್ಯರನ್ನು ನೇಮಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ..
NAMMUR EXPRESS NEWS
ಶೃಂಗೇರಿ: ಇಲ್ಲಿನ ತಾಲೂಕು ಆಸ್ಪತ್ರೆಗೆ ಅಗತ್ಯವಿರುವ ಇಬ್ಬರು ವೈದ್ಯರನ್ನು ಕೂಡಲೇ ನೇಮಿಸಿ ಸಾರ್ವಜನಿಕರಿಗೆ ನೆರವಾಗುವಂತೆ ತಾಲೂಕಿನ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್ ಕಿಗ್ಗಾ, ರಾಜೇಶ್ ದ್ಯಾವಂಟು, ಗಿರೀಶ್ ಹುಕ್ಳಿ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸುನಿಲ್ ಸಂಪೆಕೊಳಲು, ಸಚಿನ್, ರೈತ ಮೋರ್ಚಾ ಅಧ್ಯಕ್ಷ ರಾಜೇಶ್ ಮೇಗಳಬೈಲ್ ಹಾಗೂ ಇತರರು ಡಿ.ಹೆಚ್.ಓ ಗೆ ಮನವಿ ಸಲ್ಲಿಸಿದ್ದಾರೆ. ತಾಲೂಕಿಗೆ 100 ಬೆಡ್ ಆಸ್ಪತ್ರೆ ಮಂಜೂರಾಗಿ ವರ್ಷಗಳೇ ಕಳೆದರೂ ಆಸ್ಪತ್ರೆಯಂತೂ ಆಗಲಿಲ್ಲ ಸದ್ಯಕ್ಕೆ ಆಗತ್ಯವಿರುವ ವೈದ್ಯರನ್ನಾದರೂ ನೀಡಿ ಎಂದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಮೂವರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದು ಅಗತ್ಯ ವೈದ್ಯರಿಲ್ಲದೇ ಸಾರ್ವಜನಿಕರಿಗೂ ತೀವ್ರ ತೊಂದರೆಯಾಗಿದೆ. ಕೂಡಲೇ ಆಸ್ಪತ್ರೆಗೆ ಅಗತ್ಯವಿರುವ ಇಬ್ಬರು ವೈದ್ಯರನ್ನಾದರೂ ನೇಮಿಸಿ ಸಾರ್ವಜನಿಕರಿಗಾಗುತ್ತಿರುವ ತೊಂದರೆ ತಪ್ಪಿಸುವಂತೆ ಮನವಿ ಸಲ್ಲಿಸಿದರು. ಒಂದು ವೇಳೆ ತುರ್ತಾಗಿ ವೈದ್ಯರನ್ನು ನೇಮಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.