Categories
ಚಿಕ್ಕಮಗಳೂರು

ಬುರ್ಖಾದೊಳಗಿಟ್ಟುಕೊಂಡು ಗಾಂಜಾ ಮಾರಾಟ: ದಂಪತಿ ಅಂದರ್!

ಬುರ್ಖಾದೊಳಗಿಟ್ಟುಕೊಂಡು ಗಾಂಜಾ ಮಾರಾಟ: ದಂಪತಿ ಅಂದರ್!
– ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದವರ ಬಂಧನ
– 10.04 ಕೆ.ಜಿ ಗಾಂಜಾ ಹಾಗೂ ಸ್ಕೂಟಿ ವಶ: ಚಿಕ್ಕಮಗಳೂರಲ್ಲಿ ಘಟನೆ

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ನಗರದಲ್ಲಿ ಸ್ಕೂಟಿಯಲ್ಲಿ ಗಾಂಜಾ ಇಟ್ಟುಕೊಂಡು ಬರುತ್ತಿದ್ದ ದಂಪತಿಯನ್ನು ನಗರದ ಬೈಪಾಸ್‌ನಲ್ಲಿ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 10.04 ಕೆ.ಜಿ. ಗಾಂಜಾ ಮತ್ತು ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ನಗರದ ಮಾರ್ಕೆಟ್ ರಸ್ತೆಯಲ್ಲಿ ಬುರ್ಖಾದೊಳಗೆ ಗಾಂಜಾ ಇಟ್ಟುಕೊಂಡು ಮಾರುತ್ತಿದ್ದ ಚಿಕ್ಕಮಗಳೂರು ನಗರದ ನಾಜೀಮಾ ಬಾನು ಹಾಗೂ ಪತಿ ವಾಸೀಮ್ ಶಿವಮೊಗ್ಗದಿಂದ ಸ್ಕೂಟಿಯಲ್ಲಿ ಗಾಂಜಾ ತರುವಾಗ ಮಾಲು ಸಮೇತ ಸೆರೆ ಸಿಕ್ಕಿದ್ದಾರೆ. ದಂಪತಿ ಒಟ್ಟಿಗೆ ಇದ್ರೆ ಪೋಲೀಸರಿಗೆ ಅನುಮಾನ ಬರಲ್ಲ,ಹಿಡಿಯಲ್ಲ ಎಂದು ಉಪಾಯದಿಂದ ದಂಪತಿ ಸಮೇತ ಗಾಂಜಾ ಸಾಗಾಟ ನಡೆಸುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ 20 ಕೆ.ಜಿಯಷ್ಟು ಗಾಂಜಾ ತಂದಿದ್ದ ಈ ದಂಪತಿ,ಪತ್ನಿ ನಜೀಮಾ ಬಾನು ಗಾಂಜಾ ಮಾರುತ್ತಿದ್ದಳು. ಸೆನ್ ಪೋಲೀಸ್ ಇನ್ಸ್‌ಪೆಕ್ಟರ್ ಗವಿರಾಜ್ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆದಿದ್ದು ನಗರದ ಸೆನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.