ಮೂರು ದಿನಗಳ ಕಾಲ ವಿದ್ಯುತ್ ವ್ಯತ್ಯಯ..!!?
– ಜ. 30,31 ಹಾಗೂ ಫೆ.01 ರಂದು ವಿದ್ಯುತ್ ವ್ಯತ್ಯಯ
– ಎಲ್ಲೆಲ್ಲಿ ಕರೆಂಟ್ ವ್ಯತ್ಯಯವಾಗತ್ತೆ ಇಲ್ಲಿದೆ ಮಾಹಿತಿ..
– ಚಿಕ್ಕಮಗಳೂರು ಮೆಸ್ಕಾಂ ವಿಭಾಗದಿಂದ ಪ್ರಕಟಣೆ
NAMMUR EXPRESS NEWS
ಚಿಕ್ಕಮಗಳೂರು: ಜ.30, 31 ಹಾಗೂ ಫೆ.01 ರಂದು ಚಿಕ್ಕಮಗಳೂರು ಜಿಲ್ಲೆಯ ಮುಗುಳುವಳ್ಳಿ- ಆಲ್ದೂರು – ಬಾಳೆಹೊನ್ನೂರು ಮಾರ್ಗದಿಂದ ವಿದ್ಯುತ್ ಸಂಪರ್ಕ ಹೊಂದಿದ ವಿದ್ಯುತ್ ವಿತರಣಾ ಕೇಂದ್ರಗಳಿಗೆ ವಿದ್ಯುತ್ ಅಡಚಣೆ ಉಂಟಾಗಲಿದೆ. ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ ರೈಲ್ವೇ ಬ್ರಾಡ್ ಗೇಟ್ ಹಳಿ ಹಾಗೂ ಇದಕ್ಕೆ ಸಂಬಂಧಿಸಿದ ರೈಲ್ವೇ ಎಲೆಕ್ಟ್ರೀಷಿಯನ್ ಕಾರ್ಯವನ್ನು ರೈಲ್ವೇ ಇಲಾಖೆಯಿಂದ ನಿರ್ವಹಿಸುತ್ತಿದ್ದು ಇದರಿಂದ ಜ.30, 31 ಹಾಗೂ ಫೆ.01 ರಂದು ಮುಗುಳುವಳ್ಳಿ- ಆಲ್ದೂರು – ಬಾಳೆಹೊನ್ನೂರು ಮಾರ್ಗ ವ್ಯಾಪ್ತಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಬಾಳೆಹೊನ್ನೂರು, ಜಯಪುರ, ಕೊಪ್ಪ, ಕೊರಡಿಹಿತ್ಲು, ಎನ್.ಆರ್ ಪುರ ವಿದ್ಯುತ್ವಿತರಣಾ ಕೇಂದ್ರಗಳಲ್ಲಿ ಹೊರಹೊಮ್ಮುವ ಎಲ್ಲಾ ಫೀಡರ್‌ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಬೇಕು ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
