ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ: ಇನ್ನು 3 ದಿನ ಏನೇನು?
– ಪ್ರತಿ ದಿನ ಸಾವಿರಾರು ಭಕ್ತರ ಆಗಮನ
– ಗೊಂಬೆ ಪೂಜೆ: ಮೆರವಣಿಗೆ ಸಂಭ್ರಮಕ್ಕೆ ಕ್ಷಣಗಣನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಅಮ್ಮನವರ ಜಾತ್ರೆ ಮಹೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯುತ್ತಿದೆ. ಪ್ರತಿ ದಿನವೂ ಸಾವಿರಾರು ಭಕ್ತರು ಭಾಗಿಯಾಗುತ್ತಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ.
ಇಂದು ಏನೇನು ಕಾರ್ಯಕ್ರಮ?
ಫೆಬ್ರವರಿ 17 ರಿಂದ 25 ರವರೆಗೆ ವಿಜೃಂಭಣೆಯಿಂದ ನಡೆಯುತ್ತಿದ್ದು, ಫೆ.22 ರ ಭಾನುವಾರ,ಪಾರಾಯಣ, ಜಾತ್ರಾ ವಿಶೇಷ ಪೂಜೆ, ಮಹಾಪೂಜೆ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ, ಬೆಂಗಳೂರಿನ ಖ್ಯಾತ ಗಾಯಕ ಶ್ರೀ ರಾಜಗುರು ಹೊಸಕೋಟೆರವರ ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮ ನಡೆಯಿತು..
ಫೆ. 23ಕ್ಕೆ ಗಾನ ಸಂಭ್ರಮ ಕಾರ್ಯಕ್ರಮ
ಫೆ. 23 ರ ಸೋಮವಾರ ಬೆಳಗ್ಗೆ ಕಲ್ಲೋಕ್ತ ಪೂಜೆ, ಸಹಸ್ರನಾಮ ಜಾತ್ರಾ ವಿಶೇಷ ಪೂಜೆ, ಮಧ್ಯಾಹ್ನ : ಮಹಾ ಮಂಗಳಾರತಿ ಮತ್ತು ಅನ್ನ ಸಂತರ್ಪಣೆ ಕಲರ್ಸ್ ಕನ್ನಡ ಖ್ಯಾಠಿತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಸಂಗೀತ “ಗಾನ ಸಂಭ್ರಮ ಕಾರ್ಯಕ್ರಮ” ನಡೆಸಿಕೊಡಲಿದ್ದಾರೆ.
➡ ಫೆ.24 ರ ಮಂಗಳವಾರ ಮಧ್ಯಾಹ್ನ ಜಾತ್ರಾ ವಿಶೇಷಪೂಜೆಗಳ ಜೊತೆಗೆ ಮಹಾ ಮಂಗಳಾರತಿ ಮತ್ತು ಅನ್ನಸಂತರ್ಪಣೆ ಅಂದು ರಾತ್ರಿ 8ಕ್ಕೆ ಎಣ್ಣೆ ಭಂಡಾರ ಪೂಜೆ ನಡೆಯಲಿದೆ.
ಗೊಂಬೆ ಪೂಜೆ: ಮೆರವಣಿಗೆ ಸಂಭ್ರಮ
ನಾಡ್ತಿ ಆಚಾರ್ ಕುಟುಂಬದವರು ಕೆತ್ತನೆ ಮಾಡಿದ ಗೊಂಬೆಯ ಪೂಜೆ ಮೆರಣಿಗೆ ನಂತರದಲ್ಲಿ ದೇವಸ್ಥಾನದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಿದ್ದು ಬೆಳಿಗ್ಗೆ 5 ರಿಂದಲೇ ಕಾರ್ಯಕ್ರಮ ನಡೆಸಲಿದ್ದಾರೆ. ಮಧ್ಯಾಹ್ನ 3 ರಿಂದ ವಿವಿಧ ವಾದ್ಯ ವೇಷ ಭೂಷಣ ಗಳೋಂದಿಗೆ ಅದ್ದೂರಿಯ ರಾಜಬೀದಿ ಉತ್ಸವ ನಂತರದಲ್ಲಿ ಗೊಂಬೆ ವಿಸರ್ಜನೆ ಮತ್ತು ರಾತ್ರಿ 7.30 ರಿಂದ 9 ರವರೆಗೆ ನಾಡ್ತಿಯ ಮಾರಿಕಾಂಬ ಸಭಾಂಗಣದಲ್ಲಿ ಭೋಜನ ಪ್ರಸಾದ ವಿತರಣೆ ಇರಲಿದೆ.
ವಿಶೇಷ ಪೂಜೆ: ಸರ್ವರಿಗೂ ಸ್ವಾಗತಿಸಿದ ಆಡಳಿತ ಮಂಡಳಿ
ಚಂಡಿಕಾ ಹೋಮ 500ರೂ., ಜಾತ್ರಾ ವಿಶೇಷ ಪೂಜೆ, 600ರೂ. ಸರ್ವಾಲಂಕಾರ ಸೇವೆ 1005ರೂ., ರಂಗಪೂಜೆ ಸೇವೆ 3505ರೂ, ಅನ್ನ ಸಂತರ್ಪಣೆ 5000, ಒಂದು ದಿನದ ವಿಶೇಷ ಪೂಜೆ 5005, ಮಹಾ ಅನ್ನ ಸಂತರ್ಪಣೆ 25000 ಹಾಗೂ ಒಂದು ದಿನದ ಸಂಪೂರ್ಣ ಅನ್ನ ಸಂತರ್ಪಣೆ 2500000 ರೂಗಳನ್ನು ನಿಗಧಿಸಲಾಗಿದೆ ಎಂದು ತಿಳಿಸಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಕ್ಷೇತ್ರ ಸಮಸ್ತ ಭಕ್ತರಿಗೆ ಸ್ವಾಗತ ಕೋರಿದ್ದಾರೆ.








