ಕೊಪ್ಪದ ಅಮಡಿ ಮನೆ ಬಳಿ ರಾಶಿ ರಾಶಿ ಕಸ!
– ಮಾಂಸದಿಂದ ಹಿಡಿದು ಊರ ಕಸ ರಸ್ತೆಗೆ: ಯಾರು ಹೊಣೆ?
– ಶರತ್ ಕಾರಂಗಿ ಚಾರಿಟೇಬಲ್ ಟ್ರಸ್ಟ್ ಸ್ವಚ್ಛತೆ
– ಚಿಕ್ಕಮಗಳೂರು: ಕಾಡಾನೆ ದಾಳಿಗೆ ಹಸು ಬಲಿ
ಮರದಿಂದ ಬಿದ್ದು ಸಾವು; ಮಾಲೀಕನ ವಿರುದ್ಧ ಕೇಸ್!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಕೊಪ್ಪದ ರಾಷ್ಟ್ರೀಯ ಹೆದ್ದಾರಿ ಅಮ್ಮಡಿ ಮನೆ ಬಳಿ ರಾಶಿ ರಾಶಿ ಕಸವನ್ನು ತಂದು ನಿತ್ಯ ಸುರಿಯುತ್ತಿದ್ದಾರೆ, ಪ್ಲಾಸ್ಟಿಕ್,ತ್ಯಾಜ್ಯ ವಸ್ತುಗಳು,ಡೈಪರ್ ಗಳು, ಮಾಂಸ, ಕೋಳಿ ತ್ಯಾಜ್ಯ ಸುರಿಯಲಾಗುತ್ತಿದೆ. ಈ ಅವ್ಯವಸ್ಥೆ ನೋಡಿ ಶರತ್ ಕಾರಂಗಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸದಸ್ಯರೆಲ್ಲ ಬೆಳಗ್ಗೆ 6.30ರಿಂದ ಶ್ರಮದಾನ ಮಾಡಿ ಒಂದಷ್ಟು ಜಾಗವನ್ನು ಸ್ವಚ್ಛಗೊಳಿಸಿದ್ದಾರೆ. ಪ್ರತಿ ನಿತ್ಯ ಇಲ್ಲಿ ಕಸ ಸುರಿಯಲಾಗುತ್ತಿದೆ. ಕೊಪ್ಪ ಪಟ್ಟಣಕ್ಕೆ ಅನತಿ ದೂರದಲ್ಲಿರುವ ಈ ಅವ್ಯವಸ್ಥೆ ಸರಿ ಮಾಡುವವರು ಯಾರು?.
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಹಸು ಬಲಿ
ಚಿಕ್ಕಮಗಳೂರು: ಕಾಡಾನೆ ಉಪಟಳ ಕಾಫಿ ನಾಡಲ್ಲಿ ಮತ್ತೆ ಶುರುವಾಗಿದೆ. ಆನೆ ಹಸುವನ್ನು ತುಳಿದು ಕೊಂದು ಹಾಕಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಸಮೀಪದ ಮಾಣಿಮಕ್ಕಿ ಗ್ರಾಮದಲ್ಲಿ ನಡೆದಿದೆ. ಮಾಣಿಮಕ್ಕಿ ಗ್ರಾಮದ ಮಧು ಎಂಬುವರಿಗೆ ಸೇರಿದ ಹಾಲುಕೊಡುವ ಹಸು ಕಾಡಂಚಿನ ಗ್ರಾಮದ ಬಳಿ ಮೇಯುವಾಗ ಕಾಡಾನೆ ದಾಳಿ ಮಾಡಿದೆ. ಸ್ಥಳಕ್ಕೆ ಆಲ್ಲೂರು ವಲಯ ಅರಣ್ಯಾಧಿಕಾರಿಗಳು ಹಾಗೂ ಪಶುವೈದ್ಯರು ಭೇಟಿ ನೀಡಿ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಮರದಿಂದ ಬಿದ್ದು ಸಾವು; ಮಾಲೀಕನ ವಿರುದ್ಧ ಕೇಸ್!
ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆರಡಿ ಗ್ರಾಮದ ಅಂಬಿಕಾ ಎಸ್ಟೇಟ್ನಲ್ಲಿ ಮರ ಕಟಾವು ಮಾಡುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಲಿಂಗಪ್ಪ ಎಂದು ಗುರುತಿಸಲಾಗಿದ್ದು, ಇವರು ಎಸ್ಟೇಟ್ನಲ್ಲಿ ಮರಗಸಿ ಕೆಲಸ ಮಾಡುತ್ತಿದ್ದಾಗ ಸುಮಾರು 30 ಅಡಿ ಎತ್ತರದಿಂದ ಕಾಲು ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ದುರ್ಘಟನೆಗೆ ತೋಟದ ಮಾಲೀಕ ದಯಾನಂದ ಶೆಟ್ಟಿ ಅವರ ನಿರ್ಲಕ್ಷ್ಯವೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.








