ಹಳ್ಳಿ ಹಳ್ಳಿಯಲ್ಲಿ ವಿಮಾನ, ಸರ್ಕಾರಿ ಸಿಬ್ಬಂದಿಯ ಸರ್ವೇ!
– ಅರಣ್ಯ ಪ್ರದೇಶದ ಗುರುತು: ಕಂದಾಯ ಇಲಾಖೆಯೂ ಭಾಗಿ?
– ಜನರಿಗೆ ಮಾಹಿತಿಯೇ ಇಲ್ಲ.. ಪ್ರಾಬ್ಲಮ್ ಮಾಡಬೇಡಿ ಪ್ಲೀಸ್..
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಅರಣ್ಯ ಇಲಾಖೆಯ ಸರ್ವೇ ಇದೀಗ ಜನರಲ್ಲಿ ಅನೇಕ ಪ್ರಶ್ನೆ ಹುಟ್ಟು ಹಾಕಿದೆ. ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ತಾಲೂಕಿನ ಎಲ್ಲಾ ಗ್ರಾಮಗಳ ಎಸ್ಐಟಿ ಸರ್ವೆ ನಡೆಯುತ್ತಿದ್ದು ವಿಲೇಜ್ ಅಕೌಂಟೆಂಟ್ ಫಾರೆಸ್ಟ್ ಆಫೀಸರ್ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಸರ್ಕಾರಿ ನಿಯೋಜಿತ ಒಬ್ಬರು ಸರ್ವೆ ಅಧಿಕಾರಿ ಕೆಲಸ ಮಾಡುತ್ತಿದ್ದಾರೆ.
ಗ್ರಾಮದ ಈ ಸರ್ವೇಯಲ್ಲಿ ಆಯಾಗ್ರಾಮದ ಸರ್ವೇ ನಂಬರ್ ಒಳಗಿರುವ ಖಾತೆ ಜಮೀನುಗಳ ವಿಸ್ತೀರ್ಣ ಹಾಗೂ ಮಾಲೀಕರ ವಿವರಗಳನ್ನು ದಾಖಲಿಸಬೇಕಿದೆ. ಎಸ್ಐಟಿ ಸರ್ವೆಯ ಸಾಧಕ ಬಾದಕಗಳನ್ನು ಜನತೆಗೆ ತಿಳಿಸಿ ಕ್ರಮ ಕೈಗೊಳ್ಳಬೇಕು ಎಂಬ ಅಗ್ರಹ ಹೆಚ್ಚಿದೆ. ಒಂದು ಕಡೆ ವಿಮಾನದ ಮೂಲಕ ಅರಣ್ಯ ಸರ್ವೇ ಮಾಡಲಾಗುತ್ತಿದೆ. ಇನ್ನು ಒಂದು ಕಡೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೇ ನಡೆಸುತ್ತಿವೆ. ಸ್ಮಶಾನ, ವಾಸದ ಮನೆ, ಕೃಷಿ ಒತ್ತುವರಿ ಜಮೀನು ಸರ್ವೇ ಆಗುತ್ತಿದೆ. ಈ ಬಗ್ಗೆ ಜನರಿಂದ ಯಾವುದೇ ಪಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.








