ಆಗುಂಬೆ- ಶಿವಮೊಗ್ಗ ಮಾರ್ಗ ಸಾವಿನ ಹೆದ್ದಾರಿ!
– ತೀರ್ಥಹಳ್ಳಿ ಹೈವೇಯಲ್ಲಿ ಹೆಚ್ಚಿದ ಹಿಟ್ ಅಂಡ್ ರನ್!
– 3 ತಿಂಗಳಲ್ಲಿ 10ಕ್ಕೂ ಹೆಚ್ಚು ಜನರ ಸಾವು
– 50ಕ್ಕೂ ಹೆಚ್ಚು ಅಪಘಾತ: ಜವಾಬ್ದಾರಿ ಯಾರು..?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಆಗುಂಬೆ ಹಾಗೂ ಶಿವಮೊಗ್ಗ ಮಾರ್ಗ ಸಾವಿನ ಹೆದ್ದಾರಿಯಾಗಿ ಪರಿಣಮಿಸಿದೆ.!. ಆಗುಂಬೆ ತೀರ್ಥಹಳ್ಳಿ ಶಿವಮೊಗ್ಗ ಹೈವೇಯಲ್ಲಿ ಹೆಚ್ಚಿದ ಹಿಟ್ ಅಂಡ್ ರನ್ ಇದೀಗ ಜನ ಆತಂಕದಲ್ಲೇ ಪಯಣ ಮಾಡಬೇಕಿದೆ. ಜನ ಕೂಡ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ವಾಕಿಂಗ್ ಮಾಡುವವರ ಮೇಲೆ ಕೂಡ ವಾಹನ ಹರಿದು ಅನೇಕರು ಗಾಯಗೊಂಡಿದ್ದಾರೆ.
3 ತಿಂಗಳಲ್ಲಿ 10ಕ್ಕೂ ಹೆಚ್ಚು ಜನರ ಸಾವು: 50ಕ್ಕೂ ಹೆಚ್ಚು ಅಪಘಾತ: ಜವಾಬ್ದಾರಿ ಯಾರು..?
ಲಾರಿ ಚಾಲಕ ನಿದ್ದೆಯ ಮಂಪರಿನಲ್ಲಿ ವ್ಯಕ್ತಿಯೊಬ್ಬರಿಗೆ ಗುದ್ದಿದ ಹಿಟ್ ಆ್ಯಂಡ್ ರನ್ ನಡೆಸಿ ಓರ್ವ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕು ಬಿಳಲುಕೊಪ್ಪದ ಬಳಿ ನಡೆದಿದೆ. 3 ತಿಂಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಜನ ಈ ರಸ್ತೆಯಲ್ಲಿ ಹಿಟ್ ಅಂಡ್ ರನ್ ಬಲಿ ಆಗಿದ್ದಾರೆ. ಪರಿಣಾಮವಾಗಿ ಅಪಘಾತಕ್ಕೆ ಒಳಗಾದ ವ್ಯಕ್ತಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಮೃತ ವ್ಯಕ್ತಿಯನ್ನು ನರಸಿಂಹ ಕೆ.ಎಸ್ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ದೊರೆತ ದಾಖಲೆಯಿಂದ ನರಸಿಂಹ ಅವರು ಗಾರ್ಡರಗದ್ದೆಯವರು ಎಂದು ತಿಳಿದುಬಂದಿದೆ.
ಹೈವೇ ಉದ್ದಕ್ಕೂ ಅಪಘಾತ
ಆಗುಂಬೆ, ನಾಲೂರು, ಗುಡ್ಡೆಕೇರಿ, ಮೇಗರವಳ್ಳಿ, ಕೈಮರ, ತೀರ್ಥಹಳ್ಳಿ, ಕುಡುಮಲ್ಲಿಗೆ, ತೂದುರು, ಮಂಡಗದ್ದೆ, ಗಾಜನೂರು ಭಾಗದಲ್ಲಿ ರಸ್ತೆ ಚೆನ್ನಾಗಿ ಆಗಿರುವುದರಿಂದ ವಾಹನ ಸವಾರರು ಮಿತಿ ಮೀರಿದ ವೇಗಕ್ಕೆ ಅನೇಕರು ಬಲಿ ಆಗಿದ್ದಾರೆ.
ತೀರ್ಥಹಳ್ಳಿ ಹಾಗೂ ಆಗುಂಬೆಯ ನಡುವಿನ ಮುಖ್ಯರಸ್ತೆಯಲ್ಲಿ ದಿನಕ್ಕೊಂದರಂತೆ ಅಪಘಾತ ಪ್ರಕರಣಗಳು ನಡೆಯುತ್ತಿದೆ. ಮೇಗರವಳ್ಳಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಓರ್ವ ಸಾವನ್ನು ಕಂಡಿದ್ದಾರೆ. ಅಲ್ಲದೆ ಶಿವರಾಜಪುರದಲ್ಲಿ ಕಾರು ತೊಳೆಯುತ್ತಿದ್ದವನ ಮೇಲೆ ಕಾರು ಹರಿದು ಸಾವನ್ನು ಕಂಡಿದ್ದಾನೆ. ಹೀಗೆ ದುರಂತ ದಿನವೂ ಮಾಮೂಲಿ ಆಗಿದೆ.
ಹೈವೇ ಎಚ್ಚರಿಕೆ ಮಾಡಲು ಜನರ ಪಟ್ಟು!
ಬ್ಯಾರಿ ಕೇಡ್, ರಸ್ತೆ ಹಂಪ್ ಗಳನ್ನು ಕಲ್ಪಿಸಿ ಕೊಡುವುದರ ಮೂಲಕ, ಅಪಘಾತಗಳು ಸಂಭವಿಸದಂತೆ ತಡೆಗಟ್ಟಲು ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಬೇಕಿದೆ. ಮಾಹಿತಿ ಫಲಕ, ವೇಗ ಮಿತಿ ಬಗ್ಗೆ ಜಾಗೃತಿ ಮೂಡಿಸಬೇಕಿದೆ.








