ಥೈಲ್ಯಾಂಡಿನಲ್ಲಿ ಕ್ಲೀಯೋನ್ ಫ್ಯಾಬೀಯೋ ಮಾರ್ಟೀಸ್ ಸಾಧನೆ
– ತೀರ್ಥಹಳ್ಳಿಯ ಇಂದಿರಾನಗರದಲ್ಲಿರುವ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ
– ಎಂ ಜೆ ಸ್ಕೂಲ್ ಓಫ್ ಮಾರ್ಟಿಯಲ್ ಆರ್ಟ್ಸ್ ಮೂವರು ಮಕ್ಕಳ ಸಾಧನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಥೈಲ್ಯಾಂಡಿನ ರತನ್ ಬುಂದಿತ್ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತೀರ್ಥಹಳ್ಳಿಯ ಇಂದಿರಾನಗರದಲ್ಲಿರುವ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕ್ಲೀಯೋನ್ ಫ್ಯಾಬಿಯೋ ಮಾರ್ಟಿಸ್ ಅವರು ಭಾರತ ದೇಶವನ್ನು ಪ್ರತಿನಿಧಿಸಿ, ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಕ್ಲೀಯೋನ್ ಅವರು ಎಂ.ಜೆ. ಸ್ಕೂಲ್ ಆಫ್ ಮಾರ್ಷಿಯಲ್ ಆರ್ಟ್ಸ್ ಕರಾಟೆ ಶಾಲೆಯ ವಿದ್ಯಾರ್ಥಿಯಾಗಿದ್ದು, ದೊಡ್ಡಮನೆಕೇರಿಯ ನಿವಾಸಿಗಳಾದ ಕ್ಲೇವನ್ ಮತ್ತು ಮಾರ್ಟಿಸ್ ದಂಪತಿಗಳ ಪುತ್ರರಾಗಿದ್ದಾರೆ. ಕರ್ನಾಟಕದಿಂದ ಭಾರತ ದೇಶವನ್ನು ಪ್ರತಿನಿಧಿಸಿ, ತಮ್ಮ ಸಾಧನೆಯ ಮೂಲಕ ಮಲೆನಾಡಿಗೆ ಕೀರ್ತಿಯನ್ನು ತಂದ ಕ್ಲೀಯೋನ್ ಅವರಿಗೆ ತೀರ್ಥಹಳ್ಳಿಯ ಸೈಂಟ್ ಮೇರಿಸ್ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದದವರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮೂವರು ಮಕ್ಕಳ ಸಾಧನೆಗೆ ಎಲ್ಲೆಡೆ ಪ್ರಶಂಸೆ
ಥೈಲ್ಯಾಂಡಿನ ರತನ್ನ ಬುಂದಿತ್ ಯೂನಿವರ್ಸಿಟಿಯಲ್ಲಿ ಫೆ.15ರಂದು ನಡೆದ ಅಂತರ ರಾಷ್ಟ್ರೀಯ ಕರಾಟೆ ಚಾಮಿನ್ಶಿಪ್ನಲ್ಲಿ ತೀರ್ಥಹಳ್ಳಿ ಎಂ ಜೆ ಸ್ಕೂಲ್ ಓಫ್ ಮಾರ್ಟಿಯಲ್ ಆರ್ಟ್ಸ್ ನ ಮೂವರು ವಿದ್ಯಾರ್ಥಿಗಳು, ಕರ್ನಾಟಕ ಕರಾಟೆ ಅಸೋಸಿಯೇಷನ್ ವತಿಯಿಂದ ಭಾರತವನ್ನು ಪ್ರತಿನಿಧಿಸಿ, ಅದರಲ್ಲಿ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ ಮಹಾಬಲಾ ಜೋಯ್ಸ್ ದಂಪತಿಗಳ ಪುತ್ರಿ ಸಾನ್ವಿ ಜೋಯ್ಸ್ 1 ಬಂಗಾರ 1ಬೆಳ್ಳಿ , ದೊಡ್ಡಮನೆಕೇರಿ ಕ್ಲೇವನ್ ಮಾರ್ಟಿಸ್ ದಂಪತಿಗಳ ಪುತ್ರ ಕ್ಲೀಯೋನ್ ಫ್ಯಾಬೀಯೋ ಮಾರ್ಟೀಸ್ ಒಂದು ಬಂಗಾರ ಹಾಗೂ ಒಂದು ಬೆಳ್ಳಿ, ಕುವೆಂಪು ಲೇಔಟ್ ರವಿನಂದನ್ ದಂಪತಿಗಳ ಪುತ್ರ ರಾಹುಲ್ ಭಾರಧ್ವಜ್ 2 ಬೆಳ್ಳಿ ಪದಕಗಳೊಂದಿಗೆ, ತಾಲ್ಲೂಕು, ಜಿಲ್ಲೆ, ಕರ್ನಾಟಕ ಹಾಗೂ ದೇಶಕ್ಕೆ ಕೀರ್ತಿ ತಂದಿರುತ್ತಾರೆ.








