ಡಾ.ನಾಗೇಂದ್ರ ಹೆದ್ದೂರು ಅವರಿಗೆ ರಾಷ್ಟ್ರ ಮಟ್ಟದಲ್ಲಿ ಸನ್ಮಾನ
– ರಾಷ್ಟ್ರ ಮಟ್ಟದಲ್ಲಿ ಸರ್ಕಾರಿ ನೌಕರರ ಪರವಾಗಿ ಹೋರಾಟ
– ಮಧ್ಯಪ್ರದೇಶದ ಭೂಪಾಲ್ ನಿಲ್ದಾಣದಲ್ಲಿ ಎಲ್ಲಾ ರಾಜ್ಯದ ಪದಾಧಿಕಾರಿಗಳಿಂದ ಗೌರವ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಮಧ್ಯಪ್ರದೇಶದ ಭೂಪಾಲ್ ನಲ್ಲಿ ಫೆಬ್ರವರಿ 20ರಂದು ನಡೆದ ಸಭೆಯಲ್ಲಿ ಅಖಿಲ ಭಾರತ ಡಿ ಗ್ರೂಪ್ ನೌಕರರ ಒಕ್ಕೂಟದ ಆಲ್ ಇಂಡಿಯಾ ಉಪಾಧ್ಯಕ್ಷರು, ಆಲ್ ಇಂಡಿಯಾ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಾದ ತೀರ್ಥಹಳ್ಳಿ ಮೂಲದ ಡಾ.ನಾಗೇಂದ್ರ ಹೆದ್ದೂರು ಅವರು ಭಾಗವಹಿಸಿದ್ದರು.
ಈ ಸಮಾರಂಭದಲ್ಲಿ ಎಲ್ಲಾ ರಾಜ್ಯದ ಸರ್ಕಾರಕ್ಕೆ ಸಂಬಂಧಿಸಿದ ಹೊರಗುತ್ತಿಗೆದಾರರಿಗೆ, ದಿನಗೂಲಿ ನೌಕರರಿಗೆ, ಪಿಸಿಪಿಯಲ್ಲಿರುವವರಿಗೆ, ಗ್ರಾಮ ಸಹಾಯಕರಿಗೆ, ನೀರು ಗಂಟಿಗಳಿಗೆ, ಕ್ಷೇಮಾಭಿವೃದ್ಧಿಯವರಿಗೆ, ಎಂ.ಆರ್ ಅವರಿಗೆ, ಅಂಗನವಾಡಿ ಶಿಕ್ಷಕರಿಗೆ, ಅಂಗನವಾಡಿ ಸಹಾಯಕರಿಗೆ ಕೆಲಸವನ್ನು ಖಾಯಂಗೊಳಿಸಬೇಕು. ಡಿ ದರ್ಜೆ ನೌಕರರಿಗೆ ವೇತನವನ್ನು ಜಾರಿಗೊಳಿಸಬೇಕು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ಕೆಲಸವನ್ನು ಖಾಯಂ ಮಾಡಲು ಎಲ್ಲಾ ರಾಜ್ಯ ಸರ್ಕಾರಿ ಪರವಾನಿಗೆ ನೌಕರರನ್ನು, ಎಲ್ಲಾ ದಿನಗೂಲಿ ನೌಕರರನ್ನು ನ್ಯಾಯಯುತವಾಗಿ ಖಾಯಂ ಮಾಡಬೇಕು.
ಈ ಸೌಲಭ್ಯಗಳನ್ನು ದೊರಕಿಸದಿದ್ದಲ್ಲಿ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಮಾರ್ಚ್ 17ರಂದು ಉಗ್ರ ಪ್ರತಿಭಟನೆಯನ್ನು ನಡೆಸಿ, ರಾಷ್ಟ್ರ ಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅಧ್ಯಕ್ಷರ ಎದುರಿನಲ್ಲೇ ಡಾ.ನಾಗೇಂದ್ರ ಹೆದ್ದೂರು ಅವರು ಎಚ್ಚರಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ನನ್ನ ಹುಟ್ಟೂರಾದ ತೀರ್ಥಹಳ್ಳಿಗೆ ಆಗಮಿಸಿ ನನಗೆ ಟಿಎಟಿಸಿಎಂಎಸ್ ನಲ್ಲಿ ಜವಾಬ್ದಾರಿಯನ್ನು ನೀಡಿ, ಹಾರೈಸಿದ್ದು, ತೀರ್ಥಹಳ್ಳಿಯ ದೇವರ ಕೃಪೆ, ಜನರ ಆಶೀರ್ವಾದದೊಂದಿಗೆ ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ. ಅದೇ ರೀತಿ ಡಿ ಗ್ರೂಪ್ ನೌಕರರು ಹಾಗೂ ದಿನಗೂಲಿ ನೌಕರರ ಬೆಂಬಲದೊಂದಿಗೆ ಜಯಗಳಿಸುತ್ತೇನೆ” ಎಂದು ತಿಳಿಸಿದರು.
ಸಭೆಯಲ್ಲಿ ತಮಿಳುನಾಡಿನ ಜಿ ಗಣೇಶನ್, ಬಿ.ಎಂ.ನಟರಾಜ್, ರಾಮರಾಜ್ ದುಬೈ, ಮಧ್ಯಪ್ರದೇಶದ ಮಹೇಂದ್ರ ಶರ್ಮಾ, ದರ್ಶನ್ ಸಿಂಗ್ ಲಿಬಾನಾ, ಉತ್ತರ ಪ್ರದೇಶದ ಸುರೇಶ್ ಸಿಂಗ್ ಯಾದವ್, ಆಂಧ್ರಪ್ರದೇಶದ ನಕನಾ ಚಂದ್ರಶೇಖರ್, ಆಲ್ ಇಂಡಿಯಾ ಉನ್ನತ ದರ್ಜೆಯ ನಾಯಕರು, ಆಲ್ ಇಂಡಿಯಾ ಆರ್ಗಿನರ್ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ನೌಕರರ ಆರ್ಥಿಕ ಭದ್ರತೆ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ಕೊಟ್ಟ ಹಿನ್ನೆಲೆಯಲ್ಲಿ ಡಾ.ನಾಗೇಂದ್ರ ಹೆದ್ದೂರು ಅವರನ್ನು ಮಧ್ಯಪ್ರದೇಶದ ಭೂಪಾಲ್ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು.








