ರತ್ನಾಕರ್ ಶೆಟ್ಟಿ ಸಾರಥ್ಯದಲ್ಲಿ ತೀರ್ಥಹಳ್ಳಿಗೆ ಅಭಿವೃದ್ಧಿ ಭಾಗ್ಯ!
– ತೀರ್ಥಹಳ್ಳಿ ಪಟ್ಟಣ ಪಂಚಾಯಿತ್ ವ್ಯಾಪ್ತಿಯ 2 ಕೋಟಿ 57 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
– ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಜ್ಞಾನೇಂದ್ರ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ 2.57 ಕೋಟಿ ವೆಚ್ಚದಲ್ಲಿ ವಿವಿಧ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಕುವೆಂಪು ಬೈಲು ರಂಗ ಮಂದಿರಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮ ತೀರ್ಥಹಳ್ಳಿಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯ್ತಿಯ ಆವರಣದಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥಗೌಡ ನೆರವೇರಿಸಿದರು.
ಕಾಮಗಾರಿಗಳ ಪಟ್ಟಿ ಈ ಕೆಳಕಂಡಂತಿದೆ
* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ನಿಧಿ ಅನುದಾನದಲ್ಲಿ ವಿವಿಧ ಕಾಮಗಾರಿಗಳು (1 ಕೋಟಿ 20 ಲಕ್ಷ).
* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಪ್ಪಗುಡ್ಡೆಯಲ್ಲಿರುವ ಸಾಂಸ್ಕೃತಿಕ ಮೈದಾನದಲ್ಲಿ “ಕುವೆಂಪು ಬಯಲು ರಂಗಮಂದಿರ” ನಿರ್ಮಾಣ ಮಾಡಲು ಹಾಗೂ ಮೈದಾನದ ಸುತ್ತ ರಿಬೈನಿಂಗ್ ವಾಲ್ ಮತ್ತು ರಂಗಮಂದಿರಕ್ಕೆ ವಿದ್ಯುದೀಕರಣ ನಿರ್ಮಾಣ ಕಾಮಗಾರಿ (80 ಲಕ್ಷ).
* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೆಟ್ಟಮಕ್ಕಿ 110/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಬಾಳೇಬೈಲು ನೀರು ಶುದ್ದೀಕರಣ ಕೇಂದ್ರ ಸ್ಥಾವರಕ್ಕೆ 11 ಕೆ.ವಿ ಎ.ಬಿ ಕೇಬಲ್ (Express Line) ಅಳವಡಿಸುವ ಕಾಮಗಾರಿ (32.20 ಲಕ್ಷ).
* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ-14 ರ ಕುರುವಳ್ಳಿಯಲ್ಲಿ ವಾಟರ್ ಬ್ಯಾಂಕ್ ನಿರ್ಮಾಣ (25 ಲಕ್ಷ).
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಗಣಪತಿ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ನಾಗರಾಜ್, ಹಾಗೂ ಪಟ್ಟಣ ಪಂಚಾಯತಿಯ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.








