ಶಿವಮೊಗ್ಗ ಜಿಲ್ಲೆಯಲ್ಲಿ ಏನೇನು?
ರಿಪ್ಪನ್ ಪೇಟೆ: ಮದುವೆ ಆಮಂತ್ರಣಕ್ಕೆ ತೆರಳಿದ್ದ ಕಾರು ಬೆಂಕಿಗಾಹುತಿ
ಶಿರಾಳಕೊಪ್ಪ: ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ
ತೀರ್ಥಹಳ್ಳಿ: ಕುಪ್ಪಳಿ ಸಮೀಪ ಕಾಡಿಗೆ ಬೆಂಕಿ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಸಮೀಪದ ಕುವೆಂಪು ಜೈವಿಕ ಅರಣ್ಯದಲ್ಲಿದ್ದ ವಿದ್ಯುತ್ ಟ್ರಾನ್ಸರ್ಮರ್ ನಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹತ್ತಿಕೊಂಡು ಅಗ್ನಿ ಶಾಮಕ ದಳ ಸಿಬ್ಬಂದಿ ನಂದಿಸಿದ್ದಾರೆ. ಅರಣ್ಯದ ಒಳಗಿದ್ದ ವಿದ್ಯುತ್ ಟ್ರಾನ್ಸಾರ್ಮರ್ ನಿಂದ ಶಾರ್ಟ್ ಸರ್ಕ್ಯೂಟ್ ಆಗಿದ್ದು ತಕ್ಷಣವೇ ಸುತ್ತ ಮುತ್ತಲೂ ಬೆಂಕಿ ಹತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳೀಯರು ಸಹಕಾರ ಮಾಡಿದ್ದಾರೆ.
ರಿಪ್ಪನ್ ಪೇಟೆ: ಮದುವೆ ಆಮಂತ್ರಣಕ್ಕೆ ತೆರಳಿದ್ದ ಕಾರು ಬೆಂಕಿಗಾಹುತಿ
ರಿಪ್ಪನ್ ಪೇಟೆ: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಏಕಾಏಕಿ ಬೆಂಕಿ ತಗುಲಿದ ಘಟನೆ, ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ದ್ಯಾಮ್ಲಾಪುರದ ಶ್ರೀಕಾಂತ್ ಎನ್ನುವವರು ತಮ್ಮ ತಂಗಿಯ ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡಲು ಶಿವಮೊಗ್ಗದಲ್ಲಿರುವ ದೊಡ್ಡಪ್ಪನವರಾದ ಗಂಗಾಧರಗೌಡ ಅವರ ನಿವಾಸಕ್ಕೆ ತೆರಳಿದ್ದು, ಮರಳಿ ಮನೆಗೆ ಬರುತ್ತಿದ್ದ ಸಮಯದಲ್ಲಿ ಬೆಳ್ಳೂರು ಗ್ರಾಮದ ಮುಖ್ಯರಸ್ತೆಯಲ್ಲಿ ಈ ಸನ್ನಿವೇಶ ಎದುರಾಗಿದೆ.
ಮಾರುತಿ ಓಮ್ನಿ ಕಾರಿನಲ್ಲಿ ವೈರ್ ಶಾರ್ಟ್ ಸರ್ಕ್ಯೂಟ್ ಆಗಿ, ಮೊದಲು ಹೊಗೆ ಕಾಣಿಸಿಕೊಂಡಿದ್ದು, ಬಳಿಕ ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾಣಿಸಿಕೊಂಡಿತು ಎನ್ನಲಾಗಿದೆ. ಸೂಚನೆ ದೊರೆತ ಕೂಡಲೇ ಶ್ರೀಕಾಂತ್ ಮತ್ತವರ ಜೊತೆಗಾರರು ಕಾರಿನಿಂದ ಇಳಿದಿದ್ದಾರೆ. ಹೀಗಾಗಿ ಇಬ್ಬರಿಗೂ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಲಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಕ್ಷಣಮಾತ್ರದಲ್ಲಿ ಕಾರಿನಲ್ಲಿದ್ದ ತರಕಾರಿ, ಸೀರೆ ಮತ್ತು ಬಟ್ಟೆಗಳು ಕಾರಿನ ಸಮೇತ ಸುಟ್ಟು ಹೋಗಿದೆ.
ಶಿರಾಳಕೊಪ್ಪ: ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ
ಶಿರಾಳಕೊಪ್ಪ: ವಯಸ್ಸಿಗೆ ಬಂದ ಮಗನನ್ನು ಕಣ್ಣಮುಂದೆ ಕಳೆದುಕೊಂಡು ದುಃಖತಪ್ತರಾದ ಪೋಷಕರು, ಅಂತಹ ಸಂಕಷ್ಟದ ಸಂದರ್ಭದಲ್ಲೂ, ಮತ್ತೊಂದು ಜೀವದ ಬಗ್ಗೆ ಯೋಚಿಸಿ, ಹೃದಯಶ್ರೀಮಂತಿಕೆ ಮೆರೆದ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಹಿರೆಕೆರೂರು ಗ್ರಾಮದ ಬಳಿ ಬೈಕ್ ಮತ್ತು ಟ್ರ್ಯಾಕ್ಟರ್ ನಡುವಿನ ಅಪಘಾತದಲ್ಲಿ 16 ವರ್ಷದ ಗಿರೀಶ್ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಯಿತು. ಆದರೆ ಚಿಕಿತ್ಸೆ ಕೊಡಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ.
ಸಹೃದಯರು ಸಹಾಯಹಸ್ತ ಚಾಚಿದರೂ 8ರಿಂದ 10ಲಕ್ಷ ರೂಪಾಯಿಯಷ್ಟು ಖರ್ಚಾಗಿರುವುದರಿಂದ ಸಾಲ ಮಾಡಿ ಆಸ್ಪತ್ರೆ ಶುಲ್ಕ ಪಾವತಿಸಲಾಯಿತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.ಆತ ಪುನಃ ಚೇತರಿಸಿಕೊಳ್ಳುವುದಿಲ್ಲ ಎನ್ನುವುದು ತಿಳಿದೊಡನೆ ಗಿರೀಶನ ಪೋಷಕರು ಆತನ ಹೃದಯ, ಕಿಡ್ನಿ, ಲಿವರ್ ಮತ್ತು ಲಂಗ್ಸ್ ಅನ್ನು ದಾನ ಮಾಡಲು ಸಮ್ಮತಿ ಸೂಚಿಸಿ, ಮಾನವೀಯತೆ ಮೆರೆದಿದ್ದಾರೆ. ಶನಿವಾರ ಆತನ ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ ಹುಟ್ಟೂರಿಗೆ ತಂದು ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು ಎನ್ನುವ ಮಾಹಿತಿ ಲಭಿಸಿದೆ.








