Categories
ಬೆಂಗಳೂರು

ಮದ್ಯದ ದರ ಸರ್ಕಾರ ಹೆಚ್ಚು ಮಾಡಿಲ್ವಂತೆ!

  • ಬಾರ್, ವೈನ್ ಶಾಪ್ ಅಲ್ಲಿ ಅಕ್ರಮವಾಗಿ ಹೆಚ್ಚು ತಗೊಂಡ್ರೆ ಕ್ರಮ
  • ಅಬಕಾರಿ ಸಚಿವರ ಹೇಳಿಕೆ: ಮದ್ಯ ಕಂಪನಿಗಳಿಂದ ಹೆಚ್ಚಳ

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರವು ಯಾವುದೇ ರೀತಿಯಲ್ಲೂ ಮದ್ಯದ ಮೇಲಿನ ಅಬಕಾರಿ ತೆರಿಗೆ ಹೆಚ್ಚಳ ಮಾಡಿಲ್ಲ. ಹೀಗಾಗಿ ನಮ್ಮಿಂದ ಯಾವುದೇ ಮದ್ಯದ ದರ ಹೆಚ್ಚಳವಾಗಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ರಾಜ್ಯವು ಮದ್ಯದ ಮೇಲಿನ ಅಬಕಾರಿ ತೆರಿಗೆ ಹೆಚ್ಚಳ ಮಾಡದಿದ್ದರೂ ಬಾ‌ರ್ ಗಳಲ್ಲಿ ಮದ್ಯ ಬೆಲೆ ಹೆಚ್ಚಿರುವುದಾಗಿ ಕೆಲವರು ತಿಳಿಸಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಬಾರ್‌ಗಳು ಅಕ್ರಮವಾಗಿ ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಿದ್ದರೆ ರಿಯಾಲಿಟಿ ಚೆಕ್‌ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು
ಅವರು, ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿಲ್ಲ. ಹೆಚ್ಚಳದ ಯಾವುದೇ ಪ್ರಸ್ತಾವನೆಯೂ ನಮ್ಮ ಮುಂದೆ ಇಲ್ಲ ಹೆಚ್ಚಳ ಮಾಡಿದ್ದರೆ ನಾವೇ ಮಾಹಿತಿ ನೀಡುತ್ತಿದ್ದೆವು ಎಂದು ಹೇಳಿದರು. ಕಳೆದ ಒಂದು ವಾರದಿಂದ ಬಿಯರ್ ದರ 20 ರು. ಜಾಸ್ತಿ ಆಗಿದೆ ಎಂಬ ಪ್ರಶ್ನೆಗೆ ಆ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ನಮ್ಮ ಸರ್ಕಾರದಿಂದ ಅಂತೂ ದರ ಹೆಚ್ಚಳ ಆಗಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಮದ್ಯ ಕಂಪನಿಗಳಿಂದ ದರ ಹೆಚ್ಚಳ

ರಾಜ್ಯ ಸರ್ಕಾರ ಅಬಕಾರಿ ತೆರಿಗೆ ಹೆಚ್ಚಳ ಮಾಡಿಲ್ಲ ಎಂಬುದು ಸತ್ಯ, ಆದರೆ ಕೆಲ ಬಿಯರ್ ಹಾಗೂ ವಿಸ್ಕಿಯ ಬ್ರಾಂಡ್‌ನ ಕಂಪನಿಗಳು ಮೂಲ ಬೆಲೆಯಲ್ಲಿ ತುಸು ಹೆಚ್ಚಳ ಮಾಡಿವೆ. ಹೀಗಾಗಿ ಬಾರ್‌ಗಳಲ್ಲಿ ಮದ್ಯದ ದರ ಹೆಚ್ಚಳ ಆಗಿದೆ ಎಂದು ಕರ್ನಾಟಕ ವೈನ್ ಮರ್ಚೆಂಟ್ಸ್ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ. ‘ಪ್ರತಿ ಮೂರನೇ ತ್ರೈಮಾಸಿಕ ಬಳಿಕ ಕಂಪನಿಗಳ ಲಾಭ, ನಷ್ಟದ ಆಧಾರದ ಮೇಲೆ ತಮ್ಮ ಉತ್ಪನ್ನದ ದರ ಹೆಚ್ಚು ಕಡಿಮೆ ಮಾಡಲು ಅವಕಾಶವಿರುತ್ತದೆ. ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ’ ಎಂದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.