- ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ
- ಸ್ಥಳದಲ್ಲೇ ಯುವಕ ಸಾವು, ಯುವತಿ ಆಸ್ಪತ್ರೆಯಲ್ಲಿ ದುರ್ಮರಣ: ಉಡುಪಿ ಬಾರ್ಕೂರು ಮೂಲದವರು
- ಆಗುಂಬೆ ಘಾಟಿಯಲ್ಲಿ ವಾಹನಗಳ ವೇಗ ಹೆಚ್ಚಳ ಕಾರಣ?!
ತೀರ್ಥಹಳ್ಳಿ/ಹೆಬ್ರಿ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವಕ ಯುವತಿ ಮೃತಪಟ್ಟ ಘಟನೆ ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ನಡೆದಿದೆ.
ಶಶಾಂಕ್ (21) ಮೃತಪಟ್ಟ ಯುವಕ. ನಿರ್ಮಿತಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ತೀರ್ಥಹಳ್ಳಿಯಿಂದ ಹೆಬ್ರಿಗೆ ತೆರಳುತಿದ್ದ ಖಾಸಗಿ ಬಸ್ ಹಾಗೂ ಸೋಮೇಶ್ವರದಿಂದ ಆಗುಂಬೆಗೆ ಬರುತ್ತಿದ್ದ ಕೆಟಿಎಮ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ನ ಹಿಂಬದಿಯ ಸವಾರಳಾದ ಯುವತಿ ನಿರ್ಮಿತಾಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾಳೆ. ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಯುವಕ-ಯುವತಿ ಎಂದು ಗುರುತಿಸಲಾಗಿದೆ.
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವೇಗ ಹೆಚ್ಚಳ?!: ಆಗುಂಬೆ ಘಾಟಿಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿರುವುದು ಇತ್ತೀಚಿಗೆ ಹಲವು ಅಪಘಾತಗಳಿಗೆ ಕಾರಣವಾಗಿದೆ. ಈ ಘಟನೆಯು ಅತಿಯಾದ ವೇಗ ಕಾರಣ ಎನ್ನಲಾಗಿದೆ. ಘಾಟಿಯಲ್ಲಿ ವೇಗ ಮಿತಿ ಅಳವಡಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಇಂತಹ ದುರಂತ ಪದೇ ಪದೇ ಸಂಭವಿಸುತ್ತದೆ.