ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಗೆ ಇಂದು ತೆರೆ!
– ಪ್ರತಿ ಸಾವಿರಾರು ಜನರ ಭೇಟಿ: ಇಂದು ಮೆರವಣಿಗೆ
– ಗೊಂಬೆ ಪೂಜೆ: ರಾತ್ರಿ ಸಾರ್ವಜನಿಕ ಭೋಜನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಶ್ರೀ ಮಾರಿಕಾಂಬೆ ಜಾತ್ರೆಯ ಕೊನೆಯ ದಿನಕ್ಕೆ ಬಂದಿದೆ. ಮಂಗಳವಾರ ಸಂಜೆ ಎಣ್ಣೆ ಭಂಡಾರ ಪೂಜೆ ಸಾಂಪ್ರದಾಯದಂತೆ ನಾಡ್ತಿಯ ಮಾರಿಕಾಂಬಾ ಸಭಾ ಭವನದಲ್ಲಿ ಗೊಂಬೆಪೂಜೆ, ಮಾಡಿ ಮೆರವಣಿಗೆ ಮೂಲಕ ದೇವಸ್ಥಾನದ ಆವರಣದಲ್ಲಿ ಗೊಂಬೆಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.
ದೇವಸ್ಥಾನ ಆಡಳಿತ ಮಂಡಳಿ ಸದಸ್ಯರ ಜತೆಗೆ ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೆಳಿಗ್ಗೆಯಿಂದಲೂ ವಿಶೇಷ ಪೂಜೆ ಮಾರಿ ಗೊಂಬೆಗೆ ಮಾಡಲಾಯಿತು.. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿ ಪೂಜೆ ಸಲ್ಲಿಸಿ, ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಇಂದು ಮಧ್ಯಾಹ್ನ ಮಾರಿ ಗೊಂಬೆಯನ್ನು ರಾಜಭೀದಿ ಉತ್ಸವದೊಂದಿಗೆ ಸಂಜೆ ಕುಶಾವತಿಯ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು. ನಂತರ ನಾಡ್ತಿಯ ಶ್ರೀ ಮಾರಿಕಾಂಬ ಸಭಾಭವನದಲ್ಲಿ, ಎಲ್ಲಾ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆ ಇರುತ್ತದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಅಮ್ಮನ ಪ್ರಸಾದ ಸ್ವೀಕರಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯು ಕೇಳಿಕೊಂಡಿದೆ.








