ತೀರ್ಥಹಳ್ಳಿಯಲ್ಲಿ ಅಹಿಂದ ಸಭೆ: ಒಗ್ಗಟ್ಟು ಪ್ರದರ್ಶನ
– ಮಲೆನಾಡು ಅಹಿಂದ ಸಂಘಟನೆ ಅಧ್ಯಕ್ಷರಾಗಿ ಸಚಿನ್ ಗರಗ ಆಯ್ಕೆ
– ತೀರ್ಥಹಳ್ಳಿಯಲ್ಲಿ ಶಾಂತವೇರಿ ಗೋಪಾಲ ಗೌಡರಿಗೆ ನಮನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಅಹಿಂದ ವರ್ಗಗಳ ಪ್ರಮುಖರ ಸಂಘಟನೆ ಸಭೆ ನಡೆದಿದ್ದು ಅಹಿಂದ ವರ್ಗಗಳ ನಾಯಕರು ಭಾಗಿಯಾದರು. ಮಾ.16ರಂದು ಮಧ್ಯಾಹ್ನ 12 ಗಂಟೆಗೆ ತೀರ್ಥಹಳ್ಳಿಯ ಮಯೂರ ಹೋಟೆಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಸಚಿನ್ ಗರಗ, ನಾಗರಾಜ್ ಸಾಲೆಜನಗಲ್, ಪುತಬ್ಬಾ ಬೆಜ್ಜವಳ್ಳಿ, ಚಿಡುವ ಸೂರ್ಯನಾರಾಯಣ್, ಈರೇಗೋಡು ಶ್ರೀಧರಮೂರ್ತಿ ಎಸ್ ಟಿ, ದೇವರಾಜ್, ಪ್ರಶಾಂತ್ ಕುಪ್ಪಳ್ಳಿ, ಇರುವತ್ತಿ ದಿವಾಕರ್, ಅಬೂಬಕರ್ ರಂಜದಕಟ್ಟೆ, ವಾಸಪ್ಪ ನಗರ ಇನ್ನೂ ಮುಂತಾದವರು ಭಾಗವಹಿಸಿದ್ದರು.
ಸಂಘಟನೆಯ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಾಲೇಜ್ ನ ಉಪನ್ಯಾಸಕರಾದಂತಹ ಸಚಿನ್ ಪುರದಾಳ್ ಅವರು ಧಿಕ್ಸೂಚಿ ಭಾಷಣ ಮಾಡಿ ಮಾರ್ಗದರ್ಶನ ನೀಡಿದರು. ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಅಲ್ಪ ಸಂಖ್ಯಾತ ವರ್ಗಗಳು ಎಲ್ಲಾ ಹಿಂದುಳಿದ ವರ್ಗಗಗಳು ಮತ್ತು ದಲಿತ ವರ್ಗಗಳು ಮಲೆನಾಡು ಅಹಿಂದ ಸಂಘಟನಾ ವೇದಿಕೆ ಅಡಿಯಲ್ಲಿ ಸಂಘಟಿತರಾಗುವ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಮಲೆನಾಡು ಅಹಿಂದ ಸಂಘಟನಾ ವೇದಿಕೆ ಸಂಘ ರಿಜಿಸ್ಟರ್ ಮಾಡಿಸುವ ನಿರ್ಣಯ ಕೈಗೊಳ್ಳಲಾಯಿತು. ಮಲೆನಾಡು ಅಹಿಂದ ಸಂಘಟನೆಯ ಅಧ್ಯಕ್ಷರಾಗಿ ಸಚಿನ್ ಗರಗ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ತೀರ್ಥಹಳ್ಳಿಯಲ್ಲಿ ಶಾಂತವೇರಿ ಗೋಪಾಲ ಗೌಡರಿಗೆ ನಮನ
ತೀರ್ಥಹಳ್ಳಿಯ ಸೀಬಿನಕೆರೆಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ವತಿಯಿಂದ ಶನಿವಾರ ಶಾಂತವೇರಿ ಗೋಪಾಲ ಗೌಡರ ಜನ್ಮದಿನಾಚರಣೆ ಆಚರಿಸಲಾಯಿತು. ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್ ಪ್ರಮುಖರಾದ ಜಿ.ಎಸ್ ರಾಜೇಂದ್ರ ಅಸುರನಾಡು, ಹೊರಬೈಲು ರಾಮಕೃಷ್ಣ, ಶಿವಾನಂದ ಕರ್ಕಿ, ಪ್ರಸನ್ನ ಹಿತ್ತಲಗದ್ದೆ, ಸೌಳಿ ಪ್ರಕಾಶ್ ನಾಗರಾಜ ಉಪಸ್ಥಿತರಿದ್ದರು.








