ರಾಜ್ಯ ಖೋ ಖೋದಲ್ಲಿ ತೀರ್ಥಹಳ್ಳಿ ತಂಡ ರನ್ನರ್!
– ರಾಜ್ಯಮಟ್ಟದ ಮಾಸ್ಟರ್ ಖೋ-ಖೋ ಚಾಂಪಿಯನ್ಶಿಪ್
– ದ್ವಿತೀಯ ಸ್ಥಾನ ಪಡೆದ ತೀರ್ಥಹಳ್ಳಿಯ ಹಿರಿಯ ಕ್ರೀಡಾಪಟುಗಳು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ರಾಜ್ಯ ಮಟ್ಟದ ಖೋ ಖೋದಲ್ಲಿ ತೀರ್ಥಹಳ್ಳಿ ತಂಡ ರನ್ನರ್ ಸ್ಥಾನ ಗಳಿಸಿದೆ. ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ್ಧ ತೀರ್ಥಹಳ್ಳಿಯ ಹಿರಿಯ ಖೋಖೋ ಕ್ರೀಡಾಪಟುಗಳು ಈ ಸ್ಥಾನ ಪಡೆದಿದ್ದಾರೆ. ಫೆ 21 ಮತ್ತು 22 ರಂದು ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ನಡೆದ 35 ವರ್ಷ ಮೇಲ್ಪಟ್ಟ ಖೋ-ಖೋ ಚಾಂಪಿಯನ್ಶಿಪ್ನಲ್ಲಿ ತೀರ್ಥಹಳ್ಳಿಯ ಪ್ರತಿಭಾನ್ವಿತ ಮಾಜಿ ರಾಷ್ಟ್ರೀಯ ಕ್ರೀಡಾಪಟುಗಳು ಭಾಗವಹಿಸಿ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಪಂದ್ಯಾವಳಿಯಲ್ಲಿ ರಾಜ್ಯದ ಬಲಿಷ್ಠ 8 ತಂಡಗಳು ಭಾಗವಹಿಸಿದ್ದವು. ತೀರ್ಥಹಳ್ಳಿಯ ಕ್ರೀಡಾಪಟುಗಳಾದ ರವಿ ದೇವಾಡಿಗ, ಮಹಮದ್ ಸಿರಾಜ್,ಪ್ರವೀಣ ಕೆ ಸಿ, ಪ್ರದೀಪ್ ಕೆ ಸಿ(ಕರ್ನಾಟಕ ಕ್ರೀಡಾರತ್ನ, ಭಾರತ್ ಪ್ರಶಸ್ತಿ ವಿಜೇತ) , ವಿಜೇತ್ ಡಿ ಶೆಟ್ಟಿ ಹಾಗೂ ಪ್ರದೀಪ್ ಎಸ್ ಶಿವಮೊಗ್ಗ ಪ್ಯಾಂಥರ್ಸ್ ತಂಡವನ್ನ ಪ್ರತಿನಿಧಿಸಿದ್ದರು.
ಅಂತಿಮ ಪಂದ್ಯಾವಳಿಯಲ್ಲಿ ಶಿವಮೊಗ್ಗ ಪ್ಯಾಂಥರ್ಸ್ ಹಾಗೂ ಬೆಂಗಳೂರು ವಾರಿಯರ್ಸ್ ವಿರುದ್ಧ ರೋಮಾಂಚನಕಾರಿ ಪಂದ್ಯದಲ್ಲಿ ಬೆಂಗಳೂರು ವಾರಿಯರ್ಸ್ ಒಂದು ಅಂಕದಿಂದ ಜಯಗಳಿಸಿ ಪ್ರಥಮ ಸ್ಥಾನ ಗಳಿಸಿತು. ಶಿವಮೊಗ್ಗ ಪ್ಯಾಂಥರ್ಸ್ ದ್ವಿತೀಯ , ಮಂಡ್ಯ ಬುಲ್ಸ್ ತೃತೀಯ ಹಾಗೂ ಹಾಸನ ಹಂಟರ್ಸ್ ನಾಲ್ಕನೇಯ ಸ್ಥಾನ ಪಡೆದುಕೊಂಡಿದೆ. ರಾಜ್ಯಮಟ್ಟದ ಖೋಖೋ ಕ್ರೀಡೆಯಲ್ಲಿ ಭಾಗವಹಿಸಿ ತೀರ್ಥಹಳ್ಳಿ ಗರಿಮೆ ಹೆಚ್ಚಿಸಿದ ಪ್ರತಿಭೆಗಳಿಗೆ ತೀರ್ಥಹಳ್ಳಿ ಫ್ರೆಂಡ್ಸ್ ಹಾಗೂ ಎಲ್ಲಾ ತೀರ್ಥಹಳ್ಳಿಯ ಖೋ-ಖೋ ಆಟಗಾರರ ಪರವಾಗಿ ತುಂಬು ಹೃದಯಪೂರ್ವಕ ಹಾರ್ದಿಕ ಅಭಿನಂದನೆ ತಿಳಿಸಿದ್ದಾರೆ.








