ತುಂಗಾವಾರ್ತೆ-ನಿಸರ್ಗ ನಿರ್ಮಾಣ ಕಛೇರಿ ಉದ್ಘಾಟನೆ
– ತೀರ್ಥಹಳ್ಳಿಯ ಪ್ರಸಿದ್ಧ ಪತ್ರಕರ್ತ ವಿಶ್ವನಾಥ್ ಶೆಟ್ಟಿ ಅವರ ನೂತನ ಕಚೇರಿ
– ಚಕ್ಕೋಡಬೈಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಪುನರ್ ಪ್ರತಿಷ್ಠಾಪನೆ
ನಮ್ಮೂರ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಹಿರಿಯ ಪತ್ರಕರ್ತ ಡಿ.ಎಸ್.ವಿಶ್ವನಾಥ ಶೆಟ್ಟಿ ಅವರ ತುಂಗಾ ವಾರ್ತೆ ವಾರಪತ್ರಿಕೆಯ ನೂತನ ಕಾರ್ಯಾಲಯ ಹಾಗೂ ಅವರ ಪುತ್ರ ಎಂಟೆಕ್ ಪದವೀಧರರಾದ ಸುಶಾಂತ್ ಶೆಟ್ಟಿ ಅವರ ನಿಸರ್ಗ ನಿರ್ಮಾಣ ಕನ್ಸ್ಟ್ರಕ್ಷನ್ ಸಂಸ್ಥೆಯ ನೂತನ ಕಛೇರಿ ಕಟ್ಟಡವನ್ನು ಮಾರ್ಚ್ 26ರಂದು ಎಂಎಡಿಬಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥಗೌಡ ಉದ್ಘಾಟಿಸಿದರು.
ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ ಸಮೀಪ ಈ ಕಟ್ಟಡ ಇದೆ. ಆತ್ಮೀಯರು, ಹಿತೈಷಿಗಳನ್ನು ಡಿಎಸ್ವಿ ಕುಟುಂಬ ಸ್ವಾಗತಿಸಿ, ಸತ್ಕರಿಸಿದರು. ಈ ಹಿಂದೆ ಮುಖ್ಯ ಬಸ್ ನಿಲ್ದಾಣದ ಬಳಿ ಇದ್ದ ತುಂಗಾ ವಾರ್ತೆ ಕಾರ್ಯಾಲಯದ ಜಾಗದಲ್ಲೇ ನೂತನ ಕಟ್ಟಡ ನಿರ್ಮಾಣಗೊಂಡಿದೆ. ತೀರ್ಥಹಳ್ಳಿ ಗಣ್ಯರು, ರಾಜಕೀಯ ನಾಯಕರು ಭಾಗವಹಿಸಿದ್ದರು. ಕುಟುಂಬದವರು, ಸಿಬ್ಬಂದಿ ಹಾಜರಿದ್ದರು.
ಚಕ್ಕೋಡಬೈಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಪುನರ್ ಪ್ರತಿಷ್ಠಾಪನೆ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಚಕ್ಕೋಡಬೈಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಪುನರ್ ಪ್ರತಿಷ್ಠಾಪನ ಮಹೋತ್ಸವ ನಡೆಯಿತು. ಸಾವಿರಾರು ಭಕ್ತರು ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಭಟ್ಟರು , ಕಾರ್ಯದರ್ಶಿ ಸುಬ್ರಹ್ಮಣ್ಯ , ಮ್ಯಾಮ್ಕೋಸ್ ನಿರ್ದೇಶಕರಾದ ನಂದನ್ , ಕವಿರಾಜ್ ಹಾಗು ಇತರರು ಇದ್ದರು.








