ಕಾಡು ಪ್ರಾಣಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು!
– ಮಗ ಅಪಘಾತಕ್ಕೆ ಬಲಿ, ಮಗನ ಹೆಣ ನೋಡಿ ತಂದೆಯೂ ಆತ್ಮಹತ್ಯೆ!
– ತೀರ್ಥಹಳ್ಳಿ – ಹೊಸ ನಗರ ಗಡಿಯಲ್ಲಿ ನಡೆದ ದುರಂತ ಘಟನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸ ನಗರ: ಹೊಸ ನಗರ ತಾಲೂಕಿನ ಯಡೂರು ಸಮೀಪದ ಕುಂಬ್ರಿ ಗದ್ದೆಯಲ್ಲಿ ಭಾನುವಾರ ರಾತ್ರಿ ಕಾಡು ಪ್ರಾಣಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಘಟನೆ ಪರಿಣಾಮ ಯುವಕನೊಬ್ಬ ಮೃತಪಟ್ಟ ದುರಂತ ಸಂಭವಿಸಿದೆ. ಮಗನ ಶವ ನೋಡಿದ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೋಟೆಲ್ ಅಲ್ಲಿ ಕೆಲಸ ಮಾಡಿಕೊಂಡಿದ್ದ ವರದರಾಜ ಎಂಬ ಯುವಕ ಭಾನುವಾರ ತಡ ರಾತ್ರಿ ತೀರ್ಥಹಳ್ಳಿಯಿಂದ ಕೆಲಸ ಮನೆಗೆ ತೆರಳುವ ವೇಳೆ ಕೌರಿ ಕಾನುಗೋಡು ಸಮೀಪ ಕಾಡು ಪ್ರಾಣಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಯಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿ ಪ್ರಾಣ ಬಿಟ್ಟಿದ್ದು ಮಗನ ನೋಡಲು ಬಂದ ತಂದೆ ಮಂಜಪ್ಪ ನಾಯ್ಕ್ ಮಗನ ಶವವನ್ನು ನೋಡಿ ಮನೆಗೆ ಹೋಗಿ ತಾನು ಕೂಡ ಮಂಗನ ಕಾಯಲೆ ಕ್ರಿಮಿನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಡ ಕುಟುಂಬದ ವಿವಾಹಿತನಾಗಿರುವ ವರದ ರಾಜ ಪತ್ನಿ ಹಾಗೂ 2 ವರ್ಷದ ಹೆಣ್ಣು ಮಗುವನ್ನು ಅಗಲಿರುತ್ತಾರೆ ಎಂದು ತಿಳಿದು ಬಂದಿದೆ. ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಮೃತರು ಶಿರಸಿ ಮೂಲದವರಾಗಿದ್ದು, ಮೃತರ ಊರಿಗೆ ತೆಗೆದುಕೊಂಡು ಹೋಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.






