ಯಡೂರು ಕ್ರಿಕೆಟ್ ಲೀಗ್ ರಂಗು: ಮಾದರಿಯಾದ ಟೂರ್ನಿ!
– 2 ದಿನಗಳ ಕಾಲ ಕ್ರಿಕೆಟ್ ಮಹಾ ಹಬ್ಬ: ಆಟದ ಜತೆ ಸಮಾಜಸೇವೆ
– ಯಡೂರಿಗೆ ಬರಲಿದ್ದಾರೆ ಗಣ್ಯರ ದಂಡು: ಸರ್ವರಿಗೂ ಸ್ವಾಗತ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ/ತೀರ್ಥಹಳ್ಳಿ: ಹೊಸನಗರ ತೀರ್ಥಹಳ್ಳಿ ತಾಲೂಕುಗಳ ಗಡಿ ಭಾಗ ಯಡೂರಿನಲ್ಲಿ ಯಡೂರು ಕ್ರಿಕೆಟ್ ಲೀಗ್ ಸೀಸನ್ 8 ಫೆ. 21, 22ರಂದು ಸುಳುಗೋಡು-ಯಡೂರು ಗ್ರಾಮದ ವಿ.ಟಿ. ಮೈದಾನದಲ್ಲಿ ನಡೆದಿದ್ದು, ಅತ್ಯಂತ ಯಶಸ್ವಿಯಾಗಿ ನಡೆಯಿತು. ಯಡೂರು ಸುಳುಗೋಡು ಗ್ರಾಮ ಪಂಚಾಯತ್ ಅನ್ನು ಹೊಸನಗರ ತಾಲೂಕಿನಿಂದ ತೀರ್ಥಹಳ್ಳಿ ತಾಲೂಕಿಗೆ ಸೇರಿಸಿ ಎಂಬ ಅಗ್ರಹ ಇದೇ ವೇದಿಕೆಯಲ್ಲಿ ವ್ಯಕ್ತವಾಯಿತು.
ಫೆ. 21ರ ಶನಿವಾರ ಟೂರ್ನಿಯನ್ನು ಉದ್ಘಾಟನೆ ಮಾಡಲಾಯಿತು. ಎರಡು ದಿನಗಳ ವೇದಿಕೆ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನಡೆದಿದ್ದು, ಭಾಗವಹಿಸಿದ ಎಲ್ಲರೂ ವೈ.ಸಿ.ಎಲ್ ತಂಡದ ಸಾಮಾಜಿಕ ಸೇವೆ ಬಗ್ಗೆ ಮೆಚ್ಚುಗೆ ಮಾತನಾಡಿದರು. ಉದ್ಘಾಟನೆ ವೇಳೆ ಸತೀಶ್ ಈರೇಗೌಡ, ಡಾಕ್ಟರ್ ಸುನೀಲ್ , ಶ್ರುತಿ ಡಾಕಪ್ಪ, ಲೋಹಿತ್ಇದ್ದರು.
ಸಮಾರೋಪದಲ್ಲಿ ಊರಿನ ಪ್ರಮುಖರಾದ ಭಾಸ್ಕರ ಜೋಯ್ಸ, ಶಂಕರಪ್ಪ ಗೌಡ, ಸಹ್ಯಾದ್ರಿ ಪಾಲಿಟೆಕ್ನಿಕ್ ಅನಿತಾ ನಾಗರಾಜ್, ವಕೀಲ ಶಶಾಂಕ ಕೊಳವಾಡಿ, ಉದ್ಯಮಿಗಳಾದ ಆದಿತ್ಯ ಕಿಮ್ಮನೆ, ಯುವ ಸಹಕಾರಿ ಅಜಿತ್ ಗೌಡ, ಕೃಷಿಕರಾದ ಮೂರ್ತಿಗೌಡ , ರಾಘವೇಂದ್ರ ( ನಮ್ಮೂರ್ ಎಕ್ಸ್ಪ್ರೆಸ್ ಮುಖ್ಯಸ್ಥರು ), ಶ್ರುತಿ ಡಾಕಪ್ಪ ನ್ಯೂಸ್ 18, ರಾಜುಗೌಡ ಕೋಣಂದೂರು, ಕಲ್ಪನಾ ಖುಷಿ, HG, ಡಾ ಸುನೀಲ್, ಡಾ ಪ್ರತೀಕ್, ಸಂದೀಪ್ ಈಚಲಬೈಲ್, ಅನಿಲ್ ಗೋವಿನ ಹಳ್ಳಿ, YCL ನ ಹತ್ತು ತಂಡದ ಮಾಲೀಕರು ಹಾಜರಿದ್ದರು. ಆಯೋಜಕರಾದ ಪ್ರೇಮ್ ಯಡೂರು, ಸುಂದರೇಶ್ ಯಡೂರು, ಚಿದಾನಂದ್, ವಿನಯ್ ಸೇರಿ ಸರ್ವರೂ ಇದ್ದರು.
ಸಾಧಕರಿಗೆ ಸನ್ಮಾನ: ಸಾಂಸ್ಕೃತಿಕ ಕಾರ್ಯಕ್ರಮ
ಪ್ರತಿಷ್ಠಿತ ರೋಲ್ಸ್ ರಾಯ್ ಕಂಪನಿಯಲ್ಲಿ ಕೆಲಸ ಪಡೆದುಕೊಂಡ ಹೆಮ್ಮೆಯ ಕನ್ನಡತಿ ಕುಮಾರಿ ರಿತುಪರ್ಣ ಸುರೇಶ್, ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ 5ನೇ ಸ್ಥಾನವನ್ನು ಪಡೆದುಕೊಂಡ ಬಂಗ್ಲಗಲ್ಲು ಕುಮಾರಿ ನಿಧಿ ಬಿ.ಕೆ ಅವರನ್ನು ಸಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಉಡುಪಿ ವಿ ರಾಕ್ಸ್ ತಂಡದ ನೃತ್ಯ ಕಾರ್ಯಕ್ರಮ ನಡೆಯಿತು. ಪಟಾಕಿ ಪ್ರದರ್ಶನ ಗಮನ ಸೆಳೆಯಿತು.
ಗೆದ್ದವರು ಯಾರು..?
– ಪ್ರಥಮ ಸ್ಥಾನವನ್ನು ಮಲ್ನಾಡ್ ಫಾರ್ಮರ್ಸ್ ತಂಡ
– ಎರಡನೇ ಸ್ಥಾನ ಪಡೆದ ಯಡೂರು ಲಯನ್ಸ್ ತಂಡ
– ಮೂರನೇ ಸ್ಥಾನ ಪಡೆದ ಲಚ್ಚಿ ಬ್ರದರ್ಸ್ ತಂಡ
– ನಾಲ್ಕನೇ ಸ್ಥಾನ ಪಡೆದ ಹನಿ ಸ್ಟ್ರೈಕರ್ ತಂಡ
ಅಚ್ಚುಕಟ್ಟಿನ ಆಯೋಜನೆಗೆ ಹೆಸರು!
ಕ್ರಿಕೆಟ್ ಜತೆಗೆ ಸಾಮಾಜಿಕ ಸೇವೆ ಕೆಲಸ ಮಾಡುವ ಕೆಲಸವನ್ನು ಈ ಯಡೂರು ಹುಡುಗರು 8 ವರ್ಷದಿಂದ ಮಾಡಿಕೊಂಡು ಬಂದಿದ್ದಾರೆ. ಬರೀ ಕ್ರಿಕೆಟ್ ಸೀಮಿತವಾಗದೆ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಯಡೂರು ಪ್ರೇಮ್, ಸುಂದರೇಶ್ ಸೇರಿ 25ಕ್ಕೂ ಹೆಚ್ಚು ಮಂದಿ ಸ್ನೇಹಿತರು ಈ ಕೆಲಸ ಮಾಡುತ್ತಿದ್ದಾರೆ.








