ವಂಡ್ಸೆ ಜಡ್ಡು ಮನೆಯಲ್ಲಿ ಕಟೀಲು ಯಕ್ಷಗಾನ ಸಂಭ್ರಮ!
– ಪ್ರಧಾನ ಅರ್ಚಕ ವಂಶಸ್ಥ ಪ್ರಸನ್ನ ಅಸರಣ್ಣ, ಕಟೀಲು ಮೇಳದ ಪ್ರಬಂಧಕ ಜನಾರ್ಧನ್ ಕೊಕ್ಕಡ, ದೈವ ಪಾತ್ರಿ ಸೀನ ಪೂಜಾರಿ ಅವರಿಗೆ ಗೌರವ
– ಕಲಾಭಿಮಾನಿಗಳನ್ನು ರಂಜಿಸಿದ ಕಟೀಲು ಮೇಳದ ಕಲಾವಿದರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ವಂಡ್ಸೆ (ಕುಂದಾಪುರ): ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಶ್ರೀಮತಿ ಲಕ್ಷ್ಮಿ ಮತ್ತು ಮುತ್ತ ಪೂಜಾರಿ ಶ್ರೀ ತಾಯಿ ನಿಲಯ ವಂಡ್ಸೆ ಜಡ್ಡು ಮನೆಯ ವಠಾರದಲ್ಲಿ ಶ್ರೀಮತಿ ಆಶಾ ಮತ್ತು ಮಂಜುನಾಥ್ ಪೂಜಾರಿ ಹಾಗೂ ಮಕ್ಕಳ ಹರಕೆ ಬಯಲಾಟದಲ್ಲಿ ಪ್ರಧಾನ ಅರ್ಚಕ ವಂಶಸ್ಥರಾದ ಪ್ರಸನ್ನ ಅಸರಣ್ಣ ಹಾಗೂ ಸೇವಾ ಕರ್ತರ ಪೂಜ್ಯ ಗೌರವ ಸಮರ್ಪಣೆ ಮಾಡಲಾಯಿತು.
ಗಣ್ಯ ಉಪಸ್ಥಿತಿಯಲ್ಲಿ ಕಟೀಲು ಮೇಳದಲ್ಲಿ ಹಲವಾರು ವರ್ಷಗಳ ಕಾಲ ವಿವಿಧ ವೇಷಗಳನ್ನು ತನ್ನದೇ ವಿಶಿಷ್ಟ ಶೈಲಿಯಲ್ಲಿ ಪೂರೈಸಿ ಕಲಾಭಿಮಾನಿಗಳನ್ನು ರಂಜಿಸಿ ಪ್ರಸ್ತುತ ಕಟೀಲು ಮೇಳದ ಪ್ರಬಂಧಕರಾದ ಜನಾರ್ಧನ್ ಕೊಕ್ಕಡ ಹಾಗೂ ಕುಟುಂಬದ ದೈವ ಪಾತ್ರಿಗಳು ಹಲವಾರು ವರ್ಷಗಳಿಂದ ಶ್ರೀ ಸ್ವಾಮಿ ಮೂಡುರ ಹೈಗುಳಿ, ಮಾಸ್ತಿ, ಪಂಜುರ್ಲಿ, ಚಿಕ್ಕು ಗರಡಿ ದೈವಸ್ಥಾನ ಕುಂಟನೇರ್ಲ್ ದೈವಗಳ ಸೇವೆ ನಿರಂತರವಾಗಿ ಮಾಡುತ್ತಾ ಬಂದಿರುವ ಸೀನ ಪೂಜಾರಿ ಇವರಿಗೆ ಕುಟುಂಬದ ಪರವಾಗಿ ಗೌರವ ಪೂರ್ವಕ ಸನ್ಮಾನ ಮಾಡಲಾಯಿತು.
ಸೇವಾ ಕರ್ತರು ಹಾಗೂ ಸನ್ಮಾನಿತರು ಮತ್ತು ಕುಟುಂಬಕರಿಗೆ ಕಟೀಲು ತಾಯಿ ಭ್ರಮರಂಬೆಯ ಆಶೀರ್ವಚನ ನೀಡುವುದರ ಮೂಲಕ ಶುಭ ಕೋರಿ ಹರಸಿದರು. ನಂತರ ಕ್ಷೇತ್ರಕಥೆ ಸಾರುವ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಸಹಸ್ರಾರು ಜನರ ಪ್ರೇಕ್ಷಕರ ಮುಂದೆ ವಿಜೃಂಭಣೆಯಿಂದ ಯಕ್ಷಗಾನ ಹರಕೆ ಬಯಲಾಟ ನೆರವೇರಿತು.








