ಪಾಠ ಶಾಲಾ ಕನ್ನಡ ಹೊಸ ಸಿನಿಮಾಕ್ಕೆ ಬಾಲ ಕಲಾವಿದರಿಗಾಗಿ ಆಡಿಷನ್
– ತೀರ್ಥಹಳ್ಳಿಯಲ್ಲಿ ಮಾ.31ರಂದು ಆಯ್ಕೆ
– ಮಲೆನಾಡ ಮಕ್ಕಳು, ಕಲಾವಿದರಿಗೆ ಅವಕಾಶ
NAMMUR EXPRESS NEWS
ಕನ್ನಡದ ಪಾಠ ಶಾಲಾ ಎಂಬ ಹೊಸ ಸಿನಿಮಾಕ್ಕೆ ಬಾಲ ಕಲಾವಿದರು ಮತ್ತು ಶಿಕ್ಷಕರ ಪಾತ್ರಕ್ಕೆ ನಟ ನಟಿಯರು ಬೇಕಾಗಿದ್ದಾರೆ.
ಕನ್ನಡದ ಖ್ಯಾತ ನಿರ್ದೇಶಕ ಹೆದ್ಧೂರ್ ಮಂಜುನಾಥ ಶೆಟ್ಟಿ (ಮಂಜು ಹೆದ್ದೂರ್) ಅವರು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಕಲಿತು ಝೀ ಕನ್ನಡದ ಪಾರ್ವತಿ ಪರಮೇಶ್ವರ ಧಾರವಾಹಿ ಮೂಲಕ ನಟನಾಗಿ ಬಡ್ತಿ ಪಡೆದು ಹಲವಾರು ಸಿನೆಮಾ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಇದೀಗ ಅವರ ನಿರ್ದೇಶನದ 3ನೇ ಸಿನಿಮಾ “ಪಾಠ ಶಾಲಾ’ ತೀರ್ಥಹಳ್ಳಿಯ ಸೊಗಡು ಹೊಂದಿರುವ ಈ ಚಲನಚಿತ್ರ ಶೂಟಿಂಗ್ ಹಂತಕ್ಕೆ ಬಂದಿದೆ. ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಇಚ್ಛೆಯಿಂದ ಪಾತ್ರಗಳ ಆಯ್ಕೆ ತೀರ್ಥಹಳ್ಳಿ ತಾಲೂಕಿನಲ್ಲಿ ಮಾಡುವ ನಿಟ್ಟನಲ್ಲಿ ಮಾ.31ರಂದು ಭಾನುವಾರದಂದು ತೀರ್ಥಹಳ್ಳಿಯ ವಾಗ್ದೇವಿ ಸ್ಕೂಲ್ ನಲ್ಲಿ ಹೊಸ ಕಲಾವಿದರಿಗೆ ಅವಕಾಶ ಇದೆ. ಮಲೆನಾಡು ಭಾಗದ ಎಲ್ಲರಿಗೂ ಅವಕಾಶ ಇದೆ.
ಆಡಿಷನ್
ದಿನಾಂಕ: ಮಾ.31ರಂದು ಭಾನುವಾರ
ಸ್ಥಳ: ತೀರ್ಥಹಳ್ಳಿಯ ವಾಗ್ದೇವಿ ಸ್ಕೂಲ್
ಸಮಯ: ಬೆಳಿಗ್ಗೆ 10 ಗಂಟೆ-5 ಗಂಟೆವರೆಗೆ
ಯಾವ ಯಾವ ಪಾತ್ರಗಳು?
1-7 ಶಾಲೆ ಅಥವಾ ಈ ವಯಸ್ಸಿಗೆ ಹೊಂದಾಣಿಕೆ ಆಗುವ ಪಾತ್ರಗಳು. 7 ವರ್ಷದ 14-16 ವರ್ಷದವರೆಗೆ
ಶಿಕ್ಷಕರ ಪಾತ್ರಕ್ಕೆ ಮಹಿಳಾ ಮತ್ತು ಪುರುಷ ಕಲಾವಿದರು
ಸಂಪರ್ಕ:
ಹೆದ್ದೂರು ಮಂಜು
+918050891555