ಕೊಪ್ಪ ಉತ್ಸವ ಸಂಭ್ರಮ: ಇಂದು, ನಾಳೆ ಇದೆ..!
– ಸಾವಿರಾರು ಜನ: ಸಂಗೀತದ ಝಲಕ್
– ಜಾಯಿಂಟ್ ವೀಲ್, ಕೊಲಂಬಸ್ ಮಕ್ಕಳ ಆಟ, ವಿಶೇಷ ಅಂಗಡಿಗಳು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಕೊಪ್ಪದ ಗೇಬ್ರಿಯಲ್ ಲೇಔಟ್ ನಲ್ಲಿ 5 ದಿನಗಳ ಕಾಲ ನಡೆಯುತ್ತಿರುವ ಕೊಪ್ಪ ಉತ್ಸವ–2026 ಅತ್ಯಂತ ಸಂಭ್ರಮದಿಂದ. ನಡೆಯುತ್ತಿದೆ.
ಬಡವರ ಬಂಧು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಿದ್ದಿಕ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಮೂರನೇ ದಿನದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕಿ ಅನುರಾಧ ಭಟ್ ತಂಡದ ಸಂಗೀತ ಕಾರ್ಯಕ್ರಮ ನಡೆಯಿತು. ಸಾವಿರಾರು ಜನ ಭಾಗವಹಿಸಿದ್ದರು.
ಆಟಿಕೆ, ಬಟ್ಟೆ, ಆಹಾರ, ಕೃಷಿ, ಪುಸ್ತಕ ಸೇರಿದಂತೆ ನೂರಾರು ಮಳಿಗೆಗಳಿವೆ. ಹಾಗೆಯೇ ಜಾಯಿಂಟ್ ವೀಲ್, ಕೊಲಂಬಸ್ ಸೇರಿ ಮಕ್ಕಳ ಆಟಕ್ಕೆ ವಿಶೇಷ ಸ್ಥಾನವಿದೆ. ಭಾನುವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾಜಸೇವಕ ಹಾಗೂ ಚಿಂತಕರಾದ ಸುಧಾಕರ್ ಎಸ್. ಶೆಟ್ಟಿ ಅವರಿಗೆ “ಸುಜ್ಞಾನ ಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾಜಿ ಶಾಸಕರಾದ ಡಿ ಎನ್ ಜೀವರಾಜ್, ಕರ್ನಾಟಕ ಬ್ಯಾಂಕಿನ ಮೋಹನ್ ಹೆಚ್.ಎಸ್, ಹೆಚ್.ಕೆ. ದಿನೇಶ್, ಮುಖಂಡರಾದಪುಣ್ಯಪಾಲ್, ಮತ್ತು ಕೊಪ್ಪ ಉತ್ಸವದ ಸಂಘಟಕರಾದ ಸಿದ್ದಿಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕೊಪ್ಪ ಉತ್ಸವದಲ್ಲಿ ಕೊಪ್ಪ ಮಾನವೀಯತೆ
ಕೊಪ್ಪ ಉತ್ಸವದ ವೇದಿಕೆ ಕಾರ್ಯಕ್ರಮವನ್ನು ದಾನಿ ಕೌರಿ ಪ್ರಕಾಶ್ ಶನಿವಾರ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿ ಕೊಪ್ಪದಲ್ಲಿ ಇದೊಂದು ಮಾದರಿ ಕಾರ್ಯಕ್ರಮ ಎಂದರು.
ಡಾ.ಉದಯ ಶಂಕರ್ (ಪ್ರಶಮನಿ ಆಸ್ಪತ್ರೆ ಮಾಲೀಕರು) ಮುಖ್ಯ ಅತಿಥಿಯಾಗಿ ಮಾತನಾಡಿ,ಒಂದು ಊರು ಜೀವಂತ ಆಗಿದೆ ಎಂದರೆ ಅಲ್ಲಿ ಕಲೆ, ಸಂಸ್ಕೃತಿ, ಮಾನವೀಯತೆ ಇರಬೇಕು, ಕೊಪ್ಪ ನಮಗೆಲ್ಲ ಹೆಮ್ಮೆ. ಬಡವರ ಬಂಧು ಸಂಘಟನೆಗೆ ಕೃತಜ್ಞತೆ ಅರ್ಪಿಸುತ್ತೇನೆ. ಕಲೆ ಇಲ್ಲದೆ ಬದುಕಿಲ್ಲ. ಶ್ರಮ ಪಟ್ಟವನು ಎಂದಿಗೂ ಸೋಲಲ್ಲ. ಕೊಪ್ಪ ಮತ್ತೆ ಹೊಸ ಜೀವಂತಿಕೆಯೊಂದಿಗೆ ಸಾಧನೆಗೆ ಮುನ್ನಡಿ ಬರೆಯಲಿ ಎಂದರು.
ದೇಹ ದಾನ ಮೂಲಕ ಮಂಜುನಾಥ್ ಪತ್ನಿ ಇಡೀ ಸಮಾಜಕ್ಕೆ ಮಾದರಿ ಆದರು. ತನ್ನ ಗಂಡನ ಚೇತನ ಇನ್ನೊಬ್ಬರ ಬದುಕು ಕೊಟ್ಟ ಸಾರ್ಥಕ ಮಹಿಳೆಗೆ ನಾವೆಲ್ಲರೂ ಕೃತಜ್ಞತೆ ಅರ್ಪಿಸಬೇಕು. ಕೊಪ್ಪದಲ್ಲಿ ಮಾನವೀಯತೆಗೆ ಈ ಅಂಗಾಂಗ ದಾನ ಮಾದರಿ ಆಗಿದೆ. ಪ್ರಶಮನಿ ಆಸ್ಪತ್ರೆಯಲ್ಲಿ ಈ ಸೇವೆ ನೀಡಿದ್ದೇವೆ. 3 ಜನಕ್ಕೆ ಜೀವ ಬಂದಿದೆ. ಇಬ್ಬರಿಗೆ ಕಣ್ಣು ಸಿಕ್ಕಿದೆ. ಇಂಥ ದಾನ ಎಲ್ಲರಿಗೂ ಮಾದರಿ ಆಗಿದೆ. ನಮ್ಮ ಆಸ್ಪತ್ರೆ ಈ ಸೇವೆ ನೀಡಲು ಇಡೀ ಕುಟುಂಬ ಸಹಾಯ ಮಾಡಿದೆ. ಇಡೀ ಕೊಪ್ಪದ ಜನತೆ ನಮ್ಮ ಸೇವೆಗೆ ಬೆಂಬಲ ನೀಡಿದ್ದಾರೆ ಎಂದರು. ಭಾವಯಾನ ಪ್ರತಿಷ್ಠಾನದ ನಟರಾಜ್ ಗೊಗಟೆ ಇದ್ದರು.








