ತೀರ್ಥಹಳ್ಳಿ ಕರವೇ ಅಧ್ಯಕ್ಷರಾಗಿ ಮತ್ತೆ ಸುರೇಂದ್ರ ಯಡೂರು
– ತೀರ್ಥಹಳ್ಳಿ ಕರವೇ ತಾಲೂಕು ಘಟಕದ ನಿರ್ಧಾರ
– ಗೌರವ ಅಧ್ಯಕ್ಷರಾಗಿ ಮಲ್ಲಕ್ಕಿ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಂ ಶೆಟ್ಟಿ ಆಯ್ಕೆ
NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ರಕ್ಷಣಾ ವೇದಿಕೆ ತೀರ್ಥಹಳ್ಳಿ ತಾಲೂಕು ಅಧ್ಯಕ್ಷರಾಗಿ ಯುವ ಸಂಘಟಕ, ತೀರ್ಥಹಳ್ಳಿಯ ಪ್ರಮುಖ ಮುಖಂಡ ಸುರೇಂದ್ರ ಯಡೂರು ಆಯ್ಕೆಯಾಗಿದ್ದಾರೆ.ಗೌರವ ಅಧ್ಯಕ್ಷರಾಗಿ ಮಲ್ಲಕ್ಕಿ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಂ ಶೆಟ್ಟಿ ಆಯ್ಕೆ ಆಗಿದ್ದು ತೀರ್ಥಹಳ್ಳಿಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಲಿದ್ದಾರೆ.
ತೀರ್ಥಹಳ್ಳಿ ಕರವೇ ಘಟಕ ನಡೆಸಿದ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುರೇಂದ್ರ ಯಡೂರು ಅವರನ್ನು ಮರು ಆಯ್ಕೆ ಮಾಡಲಾಯಿತು ಹಾಗೂ ಗೌರವಾಧ್ಯಕ್ಷರಾಗಿ ಅಧ್ಯಕ್ಷರಾಗಿದ್ದಂತಹ ಮಲ್ಲಕ್ಕಿ ರಾಘವೇಂದ್ರ ಅವರನ್ನು ಆಯ್ಕೆ ಮಾಡಲಾಯಿತು ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಂ ಶೆಟ್ಟಿ ಬೆಟ್ಟಮಕ್ಕಿ ಇವರನ್ನು ಆಯ್ಕೆ ಮಾಡಲಾಯಿತು ಹಾಗೂ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು. ಈ ಆಯ್ಕೆಯು ಕರ್ನಾಟಕ ರಕ್ಷಣಾ ವೇದಿಕೆಯ ಕೆಲವು ಘಟಕದ ಅಧ್ಯಕ್ಷರು ಸದಸ್ಯರು ಸೇರಿ ಮಾಡಿದ್ದು ಎಲ್ಲಾ ಆಯ್ಕೆಗಳು ರಕ್ಷಣಾ ವೇದಿಕೆ ತೀರ್ಥಹಳ್ಳಿ ತಾಲೂಕು ಘಟಕದ ಒಮ್ಮತದ ಅಭಿಪ್ರಾಯದಿಂದ ನಡೆದಿದೆ.
ಕನ್ನಡ ಮತ್ತು ಜನ ಪರ ಹೋರಾಟ
ತೀರ್ಥಹಳ್ಳಿಯಲ್ಲಿ ಕನ್ನಡ ಪರ ಹಾಗೂ ಜನಪರ ಹೋರಾಟ ಮಾಡಲಾಗುವುದು. ಜತೆಗೆ ಕನ್ನಡದ ವಿಚಾರದಲ್ಲಿ ಸಂಘಟನೆ ಕೆಲಸ ಮಾಡಲಿದೆ ಎಂದು ನೂತನ ಅಧ್ಯಕ್ಷ ಸುರೇಂದ್ರ ಯಡೂರು ಹೇಳಿದ್ದಾರೆ.