ರೈತರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸರಳ ಮಾಡಲು ಪಟ್ಟು
– ಕಾಯ್ದೆ ಜಾರಿಗೊಳಿಸುವಾಗ ಎಚ್ಚರಿಕೆ ವಹಿಸಲು ಅರಣ್ಯ ಸಚಿವರಿಗೆ ಟಿ.ಡಿ.ರಾಜೇಗೌಡ ಪತ್ರ
– ಈಗ ರೈತರು, ಜನರ ಮೇಲೆ ಕೇಸ್ ಬೇಡ: ಮನವಿ
NAMMUR EXPRESS NEWS
ಬೆಂಗಳೂರು/ಕೊಪ್ಪ: ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ 1972, 2003 ಮತ್ತು 2022ರ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವಾಗ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವನ್ಯ ಜೀವಿಗಳೊಂದಿಗೆ ಜೀವಿಸಿರುವ ಮಲೆನಾಡಿನ ರೈತರ ಮೇಲೆ ಈ ಕಾಯ್ದೆ ಜಾರಿಗೊಳಿಸುವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಶೃಂಗೇರಿ ಶಾಸಕರಾದ ಟಿ. ಡಿ.ರಾಜೇಗೌಡ ಪತ್ರ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ ಮಲೆನಾಡಿನ ರೈತರು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಜಾರಿ ನಂತರ ಪ್ರಾಣಿಗಳ ರಕ್ಷಣೆಯ ಜವಾಬ್ದಾರಿ ಸ್ವಯಂ ಪ್ರೇರಿತರಾಗಿ ಜಾರಿಗೆ ತಂದಿದ್ದಾರೆ.
ತಮ್ಮ ಬೆಳೆ, ತೋಟ ನಷ್ಟವಾದರೂ ರೈತರು ಪ್ರಾಣಿಗಳ ಮೇಲೆ ಹಿಂಸೆ ಮಾಡಿರುವುದಿಲ್ಲ, ಮಲೆನಾಡಿನಲ್ಲಿ
ಕಾಯ್ದೆ ಜಾರಿ ನಂತರ ಬಹುತೇಕ ಪ್ರಾಣಿ ಶಿಕಾರಿ ಕಡಿಮೆಯಾಗಿದೆ.
ಮಲೆನಾಡಿನ ಅನೇಕ ರೈತರು ವನ್ಯಜೀವಿ ಸಂರಕ್ಷಣಾ ಕಾಯ್ದೆಯ 1972 ಮತ್ತು 2003ರ ನಿಯಮಗಳ ಪ್ರಕಾರ ಹಲವು ದಶಕಗಳಿಂದ ತಮ್ಮಮನೆಯಲ್ಲಿ ಕೆಲವು ಪ್ರಾಣಿಗಳ ಕೊಂಬು, ಚರ್ಮ, ಗೊರಸು ಬಳಸಿಕೊಂಡು ಅಲಂಕಾರಿಕ ವಸ್ತುಗಳನ್ನು ತಮ್ಮ ಮನೆಯಲ್ಲಿ ಜೋಪಾನ ಮಾಡಿದ್ದಾರೆ. ಇವುಗಳಿಗೆ ಇಲಾಖೆಯ ಅನುಮತಿ ಕೂಡ ಪಡೆದಿರುತ್ತಾರೆ. ಜಿಂಕೆ, ಸಾರಂಗ,ಕಡ ಮುಂತಾದ ಪ್ರಾಣಿಗಳ ಕೋಡು ವಯಸ್ಸಾದ ನಂತರ ಉದುರಿದ್ದನ್ನು ಮಲೆನಾಡಿನ ರೈತರು ಸಂಗ್ರಹಿಸಿ ಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಬಗ್ಗೆ ರೈತರಿಗೆ ಮಾಹಿತಿ ಇರಲಿಲ್ಲ. ಅನುಮತಿ ಪಡೆದ ವಸ್ತುಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡಬೇಕು ಮತ್ತು ಉನ್ನತ ಸಮಿತಿಯಲ್ಲಿ ಮಲೆನಾಡು ಭಾಗದ ಜನ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳಲು ಅವಕಾಶ ಮಾಡಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಮನವಿ ಸಲ್ಲಿಸಿದ್ದಾರೆ.
ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೊದಲು ಸಾರ್ವಜನಿಕರು ತಮ್ಮ ಬಳಿ ಹೊಂದಿರುವ ಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಇಲಾಖೆಯ ವಶಕ್ಕೆ ನೀಡಲು ಅರಣ್ಯ ಅಧಿಕಾರಿಗಳ ಉನ್ನತ ಸಮಿತಿಯ ವರದಿ ನಂತರ ಎರಡು ತಿಂಗಳ ಅವಕಾಶ ನೀಡಲಾಗುವುದು ಮತ್ತು ಅಲ್ಲಿಯವರೆಗೆ ನಾಗರೀಕರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡದಂತೆ ಅಧಿಕಾರಿಗಳಿಗೆ ಸೂಚಿಸಿರುವುದನ್ನು ಶಾಸಕ ಟಿ.ಡಿ.ರಾಜೇಗೌಡರು ಸ್ವಾಗತಿಸಿದ್ದಾರೆ.







