ಶಿರೂರು ಗಣಪತಿ ದೇವಸ್ಥಾನದಲ್ಲಿ ಧಾರ್ಮಿಕ ರಂಗು!
– ಶ್ರೀಮಹಾ ಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಳಶೋತ್ಸವ ಏಪ್ರಿಲ್ 2 ರಿಂದ ಆರಂಭ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೈಂದೂರು: ಶಿರೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಮಹಾಗಣಪತಿ ದೇವಾಲಯದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಳಶೋತ್ಸವವನ್ನು ಏಪ್ರಿಲ್ 2 ಗುರುವಾರದಿಂದ ಏಪ್ರಿಲ್ 14ರ ಮಂಗಳವಾರದವರೆಗೆ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯುಕ್ತ ಏಪ್ರಿಲ್ 2ರ ಗುರುವಾರದಂದು ಬೆಳಿಗ್ಗೆ ದೇವಾಲಯದಲ್ಲಿ ವೇದಮೂರ್ತಿ ಶ್ರೀರಾಮಚಂದ್ರ ಪರಂಭಟ್ಟ ಶಿರಾಲಿ ತಂತ್ರಿವರ್ಯರ ನೇತೃತ್ವದಲ್ಲಿ ಚಪ್ಪರ ಮುಹೂರ್ತ ಹಾಗೂ ಧಾರ್ಮಿಕ ಪೂಜಾ ವಿಧಿವಿಧಾನಗಳು ನೆರವೇರಿತು. ಈ ಸಂದರ್ಭದಲ್ಲಿ ಶ್ರೀಮಹಾಗಣಪತಿ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಮ ಎನ್ ಅಳ್ವೆಗದ್ದೆ, ಶ್ರೀಮಹಾಗಣಪತಿ ದೇವಾಲಯದ ಅಧ್ಯಕ್ಷರಾದ ಗಣಪತಿ ಎಸ್ ಮೊಗವೀರ, ಶ್ರೀಬೊಬ್ಬರ್ಯ ದೇವಸ್ಥಾನದ ಅಧ್ಯಕ್ಷರಾದ ಶ್ರೀಪಾದ ಕುಮಾರ್, ಊರಿನ ಹಿರಿಯರಾದ ನಾರಾಯಣ ಟಿ ಅಳ್ವೆಗದ್ದೆ ಹಾಗೂ ಸಮಿತಿಯ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು, ಊರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.








